POLICE BHAVAN KALABURAGI

POLICE BHAVAN KALABURAGI

26 June 2017

Kalaburagi District Reported Crimes

ಹಲ್ಲೆ ಪ್ರಕರಣ :
ಮುಧೋಳ ಠಾಣೆ : ಶ್ರೀ ಭೀಮರೆಡ್ಡಿ ತಂದೆ ರಾಮರೆಡ್ಡಿ ಪಲ್ಲೆ ಸಾ|| ಸೋಮಪಲ್ಲಿ ಇವರ ಅಣ್ಣ ಮಲ್ಲರೆಡ್ಡಿ ತಂದೆ ರಾಮರೆಡ್ಡಿ ಇತನೊಂದಿಗೆ ನಮ್ಮೂರ ಶಾಮರೆಡ್ಡಿ ತಂದೆ ರಾಮರೆಡ್ಡಿ, ಮುಕುಂದರೆಡ್ಡಿ ತಂದೆ ನರಸಿಂಹರೆಡ್ಡಿ ಮತ್ತು ನರಸಿಂಹಲು ತಂದೆ ಮೋಗಲಯ್ಯ ಇವರುಗಳು ಹಳೇಯ ವೈಮನಸ್ಸು ಬೆಳೆಸಿಕೊಂಡಿದ್ದು ಅದೇ ವಿಷಯವಾಗಿ ಅವಾಗಾವಾಗ ಇವರುಗಳು ನಮ್ಮಣ್ಣನೊಂದಿಗೆ ಬಾಯಿಮಾತಿನ ಜಗಳತೆಗೆಯುತ್ತಿದ್ದರು, ಅಲ್ಲದೇ ನಮ್ಮ ಅಣ್ಣ ಮಲ್ಲಾರೆಡ್ಡಿ ಇತನು ನಮ್ಮೂರ ಭಿಮಪ್ಪಾ ತಂದೆ ನಾಗಪ್ಪಾ ಇತನ ಹೆಂಡತಿ ದೇವಕ್ಕಮ್ಮಾ ಇವಳೊಂದಿಗೆ ಅನೈತಿಕ ಸಂಬಂಧ ಹೋಂದಿದ್ದಾನೆ ಅಂತಾ ಭಿಮಪ್ಪಾ ಇತನು ಕೂಡ ಈಗ ಕೆಲವು ದಿವಸಗಳ ಹಿಂದೆ ನಮ್ಮ ಅಣ್ಣ ಮಲ್ಲಾರೆಡ್ಡಿ ಇತನೊಂದಿಗೆ ಜಗಳತೆಗೆದು ಬೋಸುಡೀ ಮಗನ್ಯಾ ನೀನು ನನ್ನ ಹೆಂಡತಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಿಯಾ ನಿನಗೆ ಜೀವಂತ ಬಿಡುವದಿಲ್ಲಾ ಒಂದಲ್ಲಾ ಒಂದು ದಿನಾ ನಿನ್ನ ಹೊಡಿಸಿ ಖಲಾಸ ಮಾಡಿಸುತ್ತೇನೆ ಅಂತಾ ಬೈದಾಡುತ್ತಿದ್ದನು ಅದಕ್ಕೆ ನಮ್ಮ ಅಣ್ಣನು ನಾನು ನಿನ್ನ ಹೆಂಡತಿ ಜೋತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವದಿಲ್ಲಾ ನೀನು ಸುಮ್ಮನೇ ನನ್ನೊಂದಿಗೆ ಅನುಮಾನ ಪಡಬೇಡ ಅಂತಾ ಹೇಳುತ್ತಿದ್ದನು ಆದರೂಕೂಡ ಸದರಿ ಭಿಮಪ್ಪಾ ಇತನು ಇನ್ನೂಳಿದ 3 ಜನರೊಂದಿಗೆ ಸೇರಿಕೊಂಡು ನಮ್ಮಣ್ಣನನ್ನು ಕೊಲೆಮಾಡಲು ಹೊಂಚು ಹಾಕುತ್ತಿದ್ದರು.ದಿನಾಂಕ 24-06-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ನಮ್ಮೂರ ಹನುಮಾನ ಗುಡಿಯ ಹತ್ತೀರ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತುಕೊಂಡಿದ್ದಾಗ ನಮ್ಮೂರ ಜಗದೀಶ ಇವರ ಮನೆಯ ಮುಂದಿನ ರಸ್ತೇಯ ಮೇಲೆ ಭಿಮಪ್ಪಾ ತಂದೆ ನಾಗಪ್ಪಾ ಇತನು ನಮ್ಮ ಅಣ್ಣ ಮಲ್ಲಾರೆಡ್ಡಿ ಇತನೊಂದಿಗೆ ಜಗಳತೆಗೆಯುತ್ತಿದ್ದಾನೆ ಅಂತಾ ವಿಷಯ ಗೊತ್ತಾಗಿ ನಾನು ಅಲ್ಲಿಗೆ ಹೊಗಿ ನೋಡಲಾಗಿ ಅಲ್ಲಿ ನಮ್ಮೂರ 1) ಭಿಮಪ್ಪಾ ತಂದೆ ನಾಗಪ್ಪಾ ನಾಟೇಕರ 2) ಶಾಮರೆಡ್ಡಿ ತಂದೆ ರಾಮರೆಡ್ಡಿ 3) ಮುಕುಂದರೆಡ್ಡಿ ತಂದೆ ನರಸಿಂಹರೆಡ್ಡಿ 4) ನರಸಿಂಹಲು ತಂದೆ ಮೋಗಲಯ್ಯ ಹೀಗೆಲ್ಲರೂ ಕೂಡಿಕೊಂಡು ನಮ್ಮಣ್ಣ ಮಲ್ಲಾರೆಡ್ಡಿ ಇತನೊಂದಿಗೆ ಜಗಳತೆಗೆಯುತ್ತಾ ಭಿಮಪ್ಪಾ ತಂದೆ ನಾಗಪ್ಪಾ ಇತನು ನಮ್ಮಣ್ಣನಿಗೆ ಬೋಸುಡೀ ಮಗನ್ಯಾ ನನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯಾ ನಿನಗೆ ಇವತ್ತು ಬಿಡುವದಿಲ್ಲಾ ಖಲಾಸ್ ಮಾಡಿಸುತ್ತೇನೆ ಅಂತಾ ಬೈಯುತ್ತಾ ಅಲ್ಲೇ ಇದ್ದ ಶಾಮರೆಡ್ಡಿ ಮತ್ತು ಮುಕುಂದರೆಡ್ಡಿ ಹಾಗು ನರಸಿಂಹಲು ಇವರಿಗೆ ಈ ಬೋಸುಡೀ ಮಗನಿಗೆ ಹೋಡೆದು ಕೊಲೆ ಮಾಡಿರಿ ಅಂತ ಹೇಳುತ್ತಿದ್ದಾಗ ಶಾಮರೆಡ್ಡಿ ಇತನು ಈ ಬೋಸುಡಿ ಮಗ ನಮ್ಮೊಂದಿಗೂ ಆವಾಗಾವಾಗ ಜಗಳತೆಗೆಯುತ್ತಾನೆ ಇವನಿಗೆ ಇವತ್ತು ಒಂದು ಗತಿ ಕಾಣಿಸಬೇಕು ಅಂತಾ ಅಲ್ಲೇ ಬಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ನಮ್ಮಣ್ಣ ಮಲ್ಲಾರೆಡ್ಡಿ ಇತನ ತಲೆಯ ಮೇಲೆ ಹೋಡೆದು ಭಾರಿ ರಕ್ತಗಾಯಪಡಿಸಿದ್ದು ಅಲ್ಲದೇ ಭಿಮಪ್ಪಾ ತಂದೆ ನಾಗಪ್ಪಾ ಮತ್ತು ಮುಕುಂದರೆಡ್ಡಿ ಇವರುಗಳು ಈ ಬೋಸುಡೀ ಮಗನಿಗೆ ಇವತ್ತು ಜೀವಂತ ಬೀಡಬೇಡದು ಅಂತಾ ಕಟ್ಟಿಗೆಯಿಂದ ಮೈಕೈಗೆ ಹೋಡೆಬಡೆಮಾಡಿದ್ದು ನರಸಿಂಹಲು ತಂದೆ ಮೋಗಲಯ್ಯ ಇತನು ಕೈಯಿಂದ ಮೈಕೈಗೆ ಹೋಡೆಬಡೆಮಾಡುತ್ತಿದ್ದಾಗ ಅಲ್ಲೇ ಇದ್ದ ನಾನು ಮತ್ತು ನಮ್ಮೂರ ಬಸಪ್ಪಾ ತಂದೆ ಕಿಷ್ಟಪ್ಪಾ ಯಾದವ್, ದೇವಿಂದ್ರಪ್ಪಾ ಜೋಗಿ, ಮೋಗಲಪ್ಪಾ ತಂದೆ ಮಲ್ಲಪ್ಪಾ ನಾಟೇಕರ ಮತ್ತು ಹುಸೇನಪ್ಪಾ ತಂದೆ ಶ್ಯಾಮಪ್ಪಾ ಹರಿಜನ ಇತರರು ಸೇರಿ ನಮ್ಮ ಅಣ್ಣನಿಗೆ ಹೋಡೆಯುವದನ್ನು ಬಿಡಿಸಿಕೊಂಡಿದ್ದು ನಮ್ಮ ಅಣ್ಣನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಬೇವಾಸಾಗಿ ಬಿದ್ದಿದ್ದನ್ನು ನೋಡಿ ಅವನು ಸತ್ತು ಹೋಗಿದ್ದಾನೆ ಅಂತಾ ತಿಳಿದು ಅವರೆಲ್ಲರೂ ಅಲ್ಲಿಂದ ಹೋರಟು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಣ್ಣ ಪಟವಾರಿ ಸಾ|| ಕೆರಳ್ಳಿ, ತಾ|| ಚಿಂಚೋಳಿ ರವರ ತಮ್ಮನಾದ ರಾಜಕುಮಾರ ತಂದೆ ಸಿದ್ದಣ್ಣ ಪಟವಾರಿ ಸಾ|| ಕೆರಳ್ಳಿ, ತಾ|| ಚಿಂಚೋಳಿ ರವರು ದಿನಾಂಕ 25-06-2017 ರಂದು ಮಧ್ಯಾಹ್ನ ಸೇಡಂಗೆ ಕೆಲಸಕ್ಕೆಂದು ಬಂದು ಸೇಡಂ ಚಿಂಚೋಳಿ ರೋಡಿನ ಮೇಲೆ ಸೇಡಂ ಬಸ್ಸ ಡಿಪೋ ಎದುರುಗಡೆ ಹೋಗುತ್ತಿರುವಾಗ ಬಸ್ಸ ನಂ ಕೆಎ 32 ಎಫ್ 1179 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಬಸ್ಸನ್ನು ಅತಿ ವೇಗ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನನ್ನ ತಮ್ಮನಗೆ ಅಪಘಾತ ಮಾಡಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 June 2017

Kalaburagi District Press Note

ಃಃ ಪತ್ರಿಕಾ ಪ್ರಕಟಣೆ ಃಃ
            ಶ್ರೀ ಎನ್. ಶಶಿ ಕುಮಾರ್ ಪೊಲೀಸ್ ಅಧೀಕ್ಷಕರು ಕಲಬುರಗಿರವರು ನಗರದಲ್ಲಿ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕುಖ್ಯಾತ ರೌಡಿಗಳ ವಿರುದ್ಧ ಈಗಾಗಲೇ ದಾಖಲಾದ ಚೌಕ ಪೊಲೀಸ್ ಠಾಣೆ ಗುನ್ನೆ ಸಂ: 46/2017 ಕಲಂ 143, 147, 148, 341, 324, 326, 109, 107 ಸಂಗಡ 149 ಐಪಿಸಿ ಪ್ರಕರಣದಲ್ಲಿ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ 2000 ರ ಕಲಂ 3 ಅನ್ನು ಅಳವಡಿಸಲು ಅನುಮತಿ ಕೋರಿ ವರದಿ ಸಲ್ಲಿಸಿದ್ದು ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ, ಕಲಬುರಗಿರವರಾದ ಶ್ರೀ ಆಲೋಕ್ ಕುಮಾರ್ ರವರು ದಿನಾಂಕಃ 23.06.2017 ರಂದು 5 ಜನ ಕುಖ್ಯಾತ ರೌಡಿಗಳ ವಿರುದ್ಧ ಈ ಕಾಯ್ದೆಯ ಕಲಂ 3 ಅನ್ನು ಅಳವಡಿಸಲು ಅನುಮತಿ ನೀಡಿ ಈ ಪ್ರಕರಣದ ಮುಂದಿನ ತನಿಖೆಯನ್ನು ಶ್ರೀ ಎಸ್.ಎಸ್. ಹುಲ್ಲೂರು ಪೊಲೀಸ್ ಉಪಾಧೀಕ್ಷಕರು, ಡಿ.ಸಿ.ಆರ್.ಬಿ. ಘಟಕ ಕಲಬುರಗಿ ಇವರಿಗೆ ವಹಿಸಿ ಆದೇಶ ಹೊರಡಿಸಿರುತ್ತಾರೆ. 
            ಪ್ರಕರಣದ ಪ್ರಾರಂಭಿಕ ತನಿಖೆಯು ಶ್ರೀ ಕಪಿಲ್ದೇವ ಪೊಲೀಸ್ ನಿರೀಕ್ಷಕರು ಡಿಸಿಬಿ ಕಲಬುರಗಿಯವರು ಕೈಗೊಂಡಿದ್ದು ತನಿಖೆ ಕಾಲಕ್ಕೆ ಕಲೆ ಹಾಕಿದ ಮಾಹಿತಿಯ ಪ್ರಕಾರ ಈ ಕೆಳಗಿನ 5 ಜನ ಆರೋಪಿತರು ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುವುದರಿಂದ ಇವರುಗಳ ವಿರುದ್ಧ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ 2000 ರ ಕಲಂ 3 ಅನ್ನು ಅಳವಡಿಸಲು ವರದಿ ಸಲ್ಲಿಸಿದ್ದು ಇರುತ್ತದೆ.
1. ಸತೀಶ ರೆಡ್ಡಿ ಅಲಿಯಾಸ್ ಮಾಕರ್ೆಟ್ ಸತೀಶ್ ಅಲಿಯಾಸ್ ಸಂಗಮ್ ಸತ್ಯಾ ಸಾ: ಯಾಕೂಬ್ ಮನಿಯಾರ        
    ಚಾಳ್ ಕಲಬುರಗಿ.
2. ವಿಕ್ರಮ್ ಪ್ರಸಾದ್ ತಂದೆ ಬಸವರಾಜ ಮೂಲಿಮನಿ ಸಾ: ಮಾಲಗತ್ತಿ, ತಾ: ಚಿತ್ತಾಪೂರ.
3. ಮಲ್ಲಿಕಾಜರ್ುನ ಅಲಿಯಾಸ್ ಕರಿ ಚಿರತೆ ತಂದೆ ಶಿವಾನಂದ ವಿಶ್ವಕರ್ಮ, ಸಾ: ನಂದೂರ,ತಾ:ಜಿ: ಕಲಬುರಗಿ.
4. ನಾಗರಾಜ ಅಲಿಯಾಸ್ ಸ್ಮಾರ್ಟ್ ನಾಗಾ ತಂದೆ ವೆಂಕಟೇಶ್ ಯಾದವ್, ಸಾ: ಕಂಬಳೇವಾಡಿ, ತಾ:
    ಬಸವಕಲ್ಯಾಣ.
5. ವಿಕ್ಕಿ ಅಲಿಯಾಸ್ ಶಿವ್ಯಾ ಅಲಿಯಾಸ್ ಬಿಲ್ಡರ್ ವಿಕ್ರಮ್ ತಂದೆ ರಾಜು ಬಿಲ್ದಾನ್ ಅಲಿಯಾಸ್ ರೆಡ್ ಲಾನ್ ಸಾ:
    ಮೆಹತರ ಗಲ್ಲಿ ಗಾಜಿಪೂರ ಕಲಬುರಗಿ.
ಸತೀಶ ರೆಡ್ಡಿ ಅಲಿಯಾಸ್ ಮಾರ್ಕೆಟ್ ಸತೀಶ್ ಈತನ ವಿರುದ್ಧ ಈಗಾಗಲೇ ಕೊಲೆ, ಕೊಲೆಗೆ ಯತ್ನ, ಸುಲಿಗೆ, ದರೋಡೆ, ದರೋಡೆಗೆ ಪ್ರಯತ್ನ, ಅಪಹರಣ, ದೊಂಬಿ ಹೀಗೆ ಸುಮಾರು 15 ಪ್ರಕರಣಗಳು ದಾಖಲಾಗಿರುತ್ತವೆ.

ವಿಕ್ರಮ್ ಪ್ರಸಾದ ತಂದೆ ಬಸವರಾಜ ಮೂಲಿಮನಿ ಈತನ ವಿರುದ್ಧ ಕೊಲೆ, ಕೊಲೆಗೆ ಯತ್ನ, ಅಪಹರಣ, ಸುಲಿಗೆ,
ಅತ್ಯಾಚಾರ, ಪೊಲೀಸ್ ಅಭಿರಕ್ಷೆಯಿಂದ ಪಾರು ಇತ್ಯಾದಿ 9 ಪ್ರಕರಣಗಳು ದಾಖಲಾಗಿರುತ್ತವೆ.

ಮಲ್ಲಿಕಾರ್ಜುನ ಅಲಿಯಾಸ್ ಕರಿ ಚಿರತೆ ಈತನ ವಿರುದ್ಧ ಕೊಲೆಗೆ ಪ್ರಯತ್ನ, ದೊಂಬಿ ಪ್ರಕರಣ ಇತ್ಯಾದಿ 3 ಪ್ರಕರಣಗಳು ದಾಖಲಾಗಿರುತ್ತವೆ.

ನಾಗರಾಜ ಅಲಿಯಾಸ್ ಸ್ಮಾರ್ಟ ನಾಗಾ ಈತನ ವಿರುದ್ಧ ಕೊಲೆ, ಕೊಲೆಗೆ ಪ್ರಯತ್ನ, ದೊಂಬಿ ಪ್ರಕರಣ ಇತ್ಯಾದಿ 3 ಪ್ರಕರಣಗಳು ದಾಖಲಾಗಿರುತ್ತವೆ.
ವಿಕ್ಕಿ ಅಲಿಯಾಸ್ ಶಿವ್ಯಾ ಈತನ ವಿರುದ್ಧ ಕೊಲೆ, ಅಪಹರಣ, ಜೀವ ಬೆದರಿಕೆೆ ಇತ್ಯಾದಿ 9 ಪ್ರಕರಣಗಳು
ದಾಖಲಾಗಿರುತ್ತವೆ.

ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ ಈ ಕಾಯ್ದೆಯು ಐಪಿಸಿ ಕಾಯ್ದೆಗೆ ಹೋಲಿಸಿದರೆ ಕಠೋರ ಕಾಯ್ದೆಯಾಗಿದ್ದು ಇದರಲ್ಲಿ ಭಾಗಿಯಾದ ಆರೋಪಿತರು ಕಠಿಣ ಶಿಕ್ಷೆಗೆ ಒಳಪಡುತ್ತಾರೆ. ಆದ್ದರಿಂದ ಇಂತಹ ಕಠೋರ ಕಾಯ್ದೆಯ ಅನುಬಂಧಗಳನ್ನು ಮೇಲ್ಕಂಡ ಕುಖ್ಯಾತ ರೌಡಿಗಳ ವಿರುದ್ಧ ದಾಖಲಿಸಿ ನಗರದಲ್ಲಿ ರೌಡಿ ಚಟುವಟಿಕಗಳನ್ನು ನಿಯಂತ್ರಿಸಲು ತೆಗೆದುಕೊಂಡ ಮಹತ್ವದ ಕ್ರಮ ಇದಾಗಿರುತ್ತದೆ. ಇಂತಹ ಒಂದು ಕ್ರಮವನ್ನು ಉತ್ತರ ಕರ್ನಾಟಕದಲ್ಲಿಯೇ ಅದರಲ್ಲೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೊಟ್ಟ ಮೊದಲನೆಯದಾಗಿ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ 2000 ರ ಕಲಂ 3 ಅಳವಡಿಸಲು ದಿಟ್ಟ ಕ್ರಮ ಕೈಗೊಳ್ಳಲಾಗಿದೆ.

22 June 2017

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಹಮ್ಮದ ದಸ್ತಗೀರ ಪಾಶಾ ತಂದೆ ಮಹಮ್ಮದ ಮಶಾಕ ಶಹಾಬಾದವಾಲೆ ಸಾ; ಇಸ್ಲಾಮಾಬಾದ ಕಾಲೂನಿ ಕಲಬುರಗಿ ಇವರು ದಿನಾಂಕ.21-6-2017 ರಂದು  ಮುಂಜಾನೆ ತನ್ನ ಮೋಟಾರ ಸೈಕಲ್ ನಂ.ಕೆ.ಎ.329796 ನೆದ್ದರ ಮೇಲೆ ತಾನು ಮತ್ತು ತನ್ನ ಮಗ ಮಹಮ್ಮದ ರಿಯಾನ ಇಬ್ಬರು ಕೂಡಿಕೊಂಡು ಹಾಗರಗಾ ಕ್ರಾಸ ಕಡೆಗೆ ಮೊಟಾರ ಸೈಕಲ್ ಮೇಲೆ ಹೋಗುತ್ತಿರುವಾಗ ನಾನು ಮೋಟಾರ ಸೈಕಲ್ ನಡೆಯಿಸುತಿದ್ದು,ನನ್ನ ಮಗ ಮಹಮ್ಮದ ರಿಯಾನ ನನ್ನ ಹಿಂದುಗಡೆ ಕುಳಿತಿದ್ದನು 10-30 ಎ.ಎಂ.ಕ್ಕೆ. ಮಹಮ್ಮದ ರಫೀಕ ಚೌಕ ದಾಟಿ  ಹಾಗರಗಾ ರಿಂಗರೋಡ ಕಡೆಗೆ ಹೋಗುತಿದ್ದಾಗ ಪೀರಬಂಗಾಲಿ ದರ್ಗಾದ ಎದರುಗಡೆ ಹೋಗುತಿದ್ದಾಗ ನನ್ನ ಹತ್ತಿರ ಇದ್ದ ಒಂದು ಸಾಮಾನು ಕೆಳಗೆ ಬಿದ್ದಿದ್ದು ಆಗ ನನ್ನ ಮಗ ಕೆಳಗೆ ಇಳಿದು ಸಾಮಾನು ತೆಗೆದುಕೊಳ್ಳುವಾಗ  ಅದೆ ವೇಳೆಗೆ ನಮ್ಮ ಹಿಂದಿನಿಂದ ಒಂದು ಮೋಟಾರ  ಸೈಕಲ್ ಕೆ.ಎ.32 ಇ.ಬಿ.3983 ನೆದ್ದರಸವಾರನ್ನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿ ಹೊಡೆದನು ಇದರಿಂದ ನನ್ನ ಮಗ ಜೋರಾಗಿ ಕೆಳಗೆ ಬಿದ್ದನು ಆಗ ನಾನು ಓಡುತ್ತಾ ಹೋಗಿ ನನ್ನ ಮಗನಿಗೆ ಎಬ್ಬಿಸಲು ಆತನ  ಬಲಕಿವಿಯ ಹಿಂದುಗಡೆ ತಲೆಗೆ ಭಾರಿ ರಕ್ತಗಾಯ, ಬಲಗಡೆ ಕಿವಿಗೆ ರಕ್ತಗಾಯ, ಎಡಗಾಲು ಮೊಳಕಾಲಿಕೆಳಗೆ ಗಾಯವಾಗಿರುತ್ತದೆ.ಅಷ್ಟರಲ್ಲಿ ಈಘಟನೆಯನ್ನು ನೋಡಿ ಬಂದ ಇಬ್ರಾಹಿಂ ಪಟೇಲ್ ತಂದೆ ಚಾಂದಪಟೇಲ್,ಸೈಯದ ಮಾಜಿದ ಅಲಿ ತಂದೆ ಲಾಯಕ ಅಲಿ ಸಾ; ಎಂ.ಎಸ್.ಕೆ.ಮಿಲ್ಲ ಕಲಬುರಗಿ. ಇವರು ಬಂದಿದ್ದು ಎಲ್ಲರೂ ಕೂಡಿಕೊಂಡು ಬಂದಿದ್ದು ಸದರಿ ಅಪಘಾತ ಪಡಿಸಿದ್ದ ಮೋಟಾರ ಸೈಕಲ್ ಕೆ.ಎ.32 ಇ.ಬಿ.3983 ನೆದ್ದರ ಚಾಲಕ ತನ್ನ ಮೋಟಾರ ಸೈಕಲ್ ಬಿಟ್ಟು ಜನರು ಸೇರುವಷ್ಟರಲ್ಲಿ ಅದರ ಚಾಲಕ ಮೋಟಾರ ಸೈಕಲ್ ಬಿಟ್ಟು ಓಡಿಹೋಗಿರುತ್ತಾನೆ ಸದರಿಯವನಿಗೆ ನೋಡಿದ್ದಲ್ಲಿ ಗುರ್ತಿಸುತ್ತೇನೆ.ನಂತರ ನಾನು ಮತ್ತು ಇಬ್ರಾಹಿಂಪಟೇಲ್ ತಂದೆಚಾಂದಪಟೇಲ್,ಸೈಯದ ಮಾಜಿದ ಅಲಿ ತಂದೆ ಲಾಯಕ ಅಲಿ ಸಾ; ಎಂ.ಎಸ್.ಕೆ.ಮಿಲ್ಲ ಕಲಬುರಗಿ ಮೂರು ಜನರು ಕೂಡಿಕೊಂಡು ಒಂದು ಆಟೊರಿಕ್ಷಾದಲ್ಲಿ ನನ್ನ ಮಗನಿಗೆ ಕೂಡಿಸಿಕೊಂಡು ಉಪಚಾರ ಕುರಿತು ಎ.ಎಸ್.ಎಂ. ಆಸ್ಪತ್ರೆ ಕರದುಕೊಂಡು ಬಂದು ಸೇರಿಕೆ ಮಾಡಿದ್ದು ನನ್ನ ಮಗ ರಿಯಾನ ತಂದೆ  ದಸ್ತಗೀರ ಪಾಶಾ ವಯ;6 ವರ್ಷ  ಇತನು ಎ.ಎಸ್.ಎಂ. ಆಸ್ಪತ್ರೆಯಲ್ಲಿ   ಇತನು ಉಪಚಾರ ಪಡೆಯುತಿದ್ದು, ಉಪಚಾರದಲ್ಲಿ  ಗುಣಮುಖನಾಗದೆ ದಿನಾಂಕ 22-06-2017 ರಂದು 00-30 ಎ.ಎಂ.ಕ್ಕೆ.  ಎ.ಎಸ್.ಎಂ. ಆಸ್ಪತ್ರೆಯಲ್ಲಿ  ಮೃತ ಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ 21/06/2017 ರಂದು ಶಹಾಭಾದ ಪಟ್ಟಣದ ಹೊನಗುಂಟಾ ಕ್ರಾಸ್ ಹತ್ತಿರ ಹಣಮಂತ್ರಾಯ ತಂದೆ ನಾಗಣ್ಣ ಮರಬೋಳಿ ಈತನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ್ ಬರೆದ ಚೀಟಿ ಕೊಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಐ. ಶಾಹಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ಧಾಳಿ ಮಾಡಿ ಹಣಮಂತ್ರಾಯ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂದಪಟ್ಟ ನಗದು ಹಣ 320 /- ರೂ ಹಾಗೂ ಒಂದು ಮಟಕಾ ನಂಬರ್ ಬರೆದ ಚೀಟಿ , ಮತ್ತು ಒಂದು ಬಾಲ ಪೆನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು  ಸದರಿಯವನೊಂದಿಗೆ ಮರಳಿ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ನೀಲಮ್ಮ ಗಂಡ ಚಂದ್ರಕಾಂತ ಕಂಟಿಕರ್‌ ಸಾ: ಹಾಗರಗುಂಡಗಿ ಇವರು ದಿನಾಂಕ 19/06/2017 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ  ನಾನು ಮನೆಯಲ್ಲಿದ್ದು ಗಂಡ ಚಂದ್ರಕಾಂತ ಇವರು ಹೊರಗಡೆ ಹೋಗಿದ್ದಾಗ ಅದೇ ಸಮಯಕ್ಕೆ ನಮ್ಮ ಮನೆಯ ಮುಂದೆ  ಯಾರೋ ನನ್ನ ಹೆಸರಿನಿಂದ ಕರೆದಾಗ ನಾನು ಮನೆಯ ಹೊರಗೆ ಬಂದು ನೋಡಿದಾಗ ಮನೆಯ ಮುಂದೆ ನಮ್ಮೂರಿನ  ಜಗಪ್ಪ ತಂದೆ ಶಿವಶರಣಪ್ಪ ಹುಣಚಗೇರಿ ಆತನ ತಮ್ಮ ಮರೇಪ್ಪಾ ಇಬ್ಬ ರುಯಿದ್ದು ಅವರಲ್ಲಿ ಜಗಪ್ಪ ಬೋಸಡಿ ಮಗಳೇ ನಿನ್ನ ತಮ್ಮನ ಹತ್ತಿರ 22000/- ರೂಪಾಯಿಗಳು ತೆಗೆದು ಕೊಂಡ ವಿಷಯ ನಮ್ಮ ತಾಯಿಗೆ ಯಾಕೆ ಹೇಳಿದ್ದಿ ರಂಡಿ ಮಗಳೇ ಅಂತಾ ಅವ್ಯಾಚ್ವವಾಗಿ ಬೈದು ನನ್ನ ಕೈ ಹಿಡಿದು ಜಗ್ಗಿ ಕೈಗಳಿಂದ ನನ್ನ ಎಡ ಕಿವಿಯ ಹತ್ತಿರ, ಬಲ ಬುಜದ ಹತ್ತಿರ, ಬೆನ್ನ ಹಿಂದೆ ಹೊಡೆದು ಕಾಲಿನಿಂದ ನನ್ನ ಹೊಟ್ಟೆಯ ಕೆಳಭಾಗದಲ್ಲಿ ಒದ್ದು ಗುಪ್ತಗಾಯ  ಪಡಿಸಿದನು. ಅವರಿಂದ ಬಿಡಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಮರೆಪ್ಪಾ ಈತನು ನನ್ನ ಸೀರೆ ಹಿಡಿದು ಎಳೆದು ಮಾನ ಭಂಗ ಮಾಡಲು ಪ್ರಯತ್ನ ಮಾಡಿ ರಂಡಿ  ನೀನು ನಮ್ಮ ಮನೆಗೆ ಬಾ ಹಣಕೊಡುತ್ತೇವೆ ಅಂತಾ ಬೈಯು ತ್ತಿರುವಾಗ ವಿಷಯ ಗೊತ್ತಾಗಿ ನನ್ನ ಗಂಡ ಓಡಿ ಬಂದು ಯಾಕೆ ನನ್ನ ಹೆಂಡತಿಗೆ ಹೊಡೆಯುತ್ತಿದ್ದಿರಿ  ಅಂತಾ ಕೇಳಿದ್ದಕ್ಕೆ ಇಬ್ಬರು ನನ್ನ ಗಂಡನಿಗೂ ಕಪಾಳ ಮೇಲೆ ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.