POLICE BHAVAN KALABURAGI

POLICE BHAVAN KALABURAGI

13 July 2011

GULBARGA DIST. MURDER CASE ACCUSED PERSONS ARRESTED


ಕಳೆದ ಮೂರು ತಿಂಗಳ ಹಿಂದೆ ಬರ್ಬರ ಹತ್ಯೆ ಮಾಡಿ ನಾಪತ್ತೆಯಾದ ಆರೋಪಿಗಳ ಬಂದನ

ಶ್ರೀ ಗುರಯ್ಯ ತಂದೆ ಪಂಚಯ್ಯ ಹಿರೇಮಠ ರವರು ಸಾ|| ಅಫಜಲಪೂರ ರವರು ನನ್ನ ಮಗನಾದ ವೀರಭದ್ರಯ್ಯ ಇತನಿಗೆ ಕೆಲವು ರೌಡಿ ಜನರು ಗುಂಪು ಕಟ್ಟಿಕೊಂಡು ಹರಿತವಾದ ಅಯುಧದಿಂದ ಹೊಡೆದು ಕೊಲೆ ಮಾಡಿ ರಮೇಶ ಪದಕಿ ಹೊಲದ ಬಾಂದಾರಿಯ ರೋಡ ಎಡಭಾಗದ ಮುಳ್ಳಿನಲ್ಲಿ ಬಿಸಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಮಾನ್ಯ ಎಸ.ಪಿ ಸಾಹೇಬ ಗುಲಬರ್ಗಾ ರವರ ಮತ್ತು ಮಾನ್ಯ ಹೆಚ್ಚುವರಿ ಎಸ.ಪಿ ಸಾಹೇಬರ ಮಾರ್ಗದರ್ಶನ ಮೇರೆಗೆ ಮತ್ತು ಎಸ.ಬಿ ಸಾಂಬಾ ಆಳಂದ ಡಿ.ಎಸ.ಪಿ ರವರ ನೇತ್ರತ್ವದಲ್ಲಿ ಅಪಜಲಪೂರ ವೃತ್ತ ನಿರೀಕ್ಷಕರಾದ ಕೆ. ರಾಜೇಂದ್ರ ರವರು ತನಿಖೆ ವಹಿಸಿಕೊಂಡು ಕೊಲೆ ಮಾಡಿದ ಆರೋಪಿಗಳಾದ ಶಿವ @ ಶಿವಾನಂದ ತಂದೆ ಕಲ್ಲಪ್ಪಾ ಪಾಟೀಲ್ ಸಾ|| ಗುಟ್ಯಾಳ ತಾ|| ಇಂಡಿ ಹಾ||ವ|| ಅಫಜಲಪೂರ,ಸಿದ್ದರಾಮ @ ಸಿದ್ದು ತಂದೆ ನಾಗಣ್ಣ ನಿಂಬಾಳ ಸಾ|| ಕಾರ ಬೋಸಗಾ ಹಾ|| ವ|| ಅಫಜಲಪೂರ, ಗಣೇಶ ತಂದೆ ಬಸವರಾಜ ರಾಂಪೂರೆ ಸಾ|| ಅಫಜಲಪೂರ, ನಾಗೇಶ ತಂದೆ ಹಣಮಂತ ಬಾಗೆವಾಡಿ ಸಾ|| ಅಫಜಲಪೂರ, ಪ್ರೇಮಕುಮಾರ ತಂದೆ ಸುಭಾಶ ಕಡಣಿ ಸಾ|| ಅಫಜಲಪೂರ ಸಂಜಯಕುಮಾರ ತಂದೆ ಅವಣ್ಣ ಬಂಗಿ ಸಾ|| ಅಫಜಲಪೂರ, ಭೀಮು @ ಭೀಮಾಶಂಕರ ತಂದೆ ಮಹಾದೇವ ಈರಶೇಟ್ಟಿ ಸಾ|| ಕಾಸಲಿಂಗ ಜೇವೂರ ಹಾ|| ವ|| ಅಫಜಲಪೂರ ಇಲ್ಲರೆಲ್ಲರೂ ಇರುವಿಕೆಯ ಮಾಹಿತಿ ಪಡೆದುಕೊಂಡು ಕೊಲೆ ಮಾಡಿದವರನ್ನು ವಶಕ್ಕೆ ತೆಗೆದಕೊಂಡಿದ್ದು ಇರುತ್ತದೆ. ಪತ್ತೆ ಕಾರ್ಯದಲ್ಲಿ ತೊಡಿಗದ್ದ ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ. ರಾಜೇಂದ್ರ , ಪಿ.ಎಸ.ಐ ಶ್ರೀ ಮಂಜುನಾಥ ಎಸ. ಹಾಗು ಸಿಬ್ಬಂದಿಯವರಾದ ರಾಮಚಂದ್ರ ಹೆಚ.ಸಿ, ಮಾರುತಿ ಹೆಚಸಿ, ಸಾಯಿಬಣ್ಣ , ನರಸರೆಡ್ಡಿ ಮತ್ತು ಅರವಿಂದ ಎಲ್ಲರಿಗೂ ಮಾನ್ಯ ಎಸ.ಪಿ ಸಾಹೇಬ ಗುಲಬರ್ಗಾ ರವರು ಪತ್ತೆ ಕಾರ್ಯ ಮಾಡಿದಕ್ಕೆ ಪ್ರಶಂಸಿರುತ್ತಾರೆ . ತನಿಖೆ ಮುಂದುವರೆದಿರುತ್ತದೆ .

GULBARGA DIST REPORTED CRIMES

ಕಾಣೆಯಾದ ಮನುಷ್ಯನ ಪ್ರಕರಣ:
ಆಳಂದ ಠಾಣೆ
:
ಶ್ರೀ ಬಸವಣಪ್ಪಾ ತಂದೆ ಶಿವರಾಯ ಪೊಲೀಸ್ ಪಾಟೀಲ್ ಮು|| ಶಕಾಪೂರ ರವರು ನನ್ನ ಮಗನಾದ ನಾಗಶೇಟ್ಟಿ ತಂದೆ ಬಸವಣಪ್ಪಾ ಪಾಟಿಳ್ ಇತನು ದಿನಾಂಕ: 11-07-2011 ರಂದು ಶುಕ್ರವಾರ ಶಕಾಪೂರ ಗ್ರಾಮದಿಂದ ಗುಲಬರ್ಗಾ ಆಸ್ಪತ್ರೆಗೆ ಹೋಗುತ್ತೆನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ . ಕಾಣೆಯಾದ ಮನುಷ್ಯನ ಚಹರೆ ಪಟ್ಟಿ ಸಾದರಣ ಮೈಕಟ್ಟು ಕಪ್ಪು ಬಣ್ಣ , ಬದಾಮ ಕಲರ್ ಶರ್ಟ ಲೈನಿಂಗ ಪ್ಯಾಂಟ ಕನ್ನಡ ಭಾಷೆ ಮಾತನಾಡುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕಾಣೆಯಾದ ಮನುಷ್ಯನ ಸುಳಿವು ದೊರೆತಲ್ಲಿ ಕಂಟ್ರೊಲ್ ರೂಮ ಗುಲಬರ್ಗಾ 08472-263608, 263604 ಸಿಪಿಐ ಆಳಂದ 94808083539 ಪಿ.ಎಸ.ಐ ಆಳಂದ 94808083563 ಅಥವಾ 08477 202222 ಅಳಂದ ಠಾಣೆ ರವರಿಗೆ ಸಂಪರ್ಕಿಸಲು ಕೋರಲಾಗಿದೆ.)

ಹಲ್ಲೆ ಪ್ರಕರಣ :
ಮಾಡಬೂಳ ಠಾಣೆ :
ಶ್ರೀ ಶಂಕ್ರಯ್ಯ ಸ್ವಾಮಿ ತಂದೆ ವೀರಯ್ಯ ಸ್ವಾಮಿ ಸಾ:ಶಹಾಬಾಜಾರ ಗುಲ್ಬರ್ಗಾ ರವರು ನಾನು

ನಿನ್ನೆ ದಿನಾಂಕ:-12/07/2011 ರಂದು ರಾತ್ರಿ ಕೆಲಸ ಮುಗಿಸಿ ಆಫೀಸ್ ಕೋಣೆಯಲ್ಲಿ ನಾನು ಮತ್ತ ನನ್ನ ಜೊತೆ ಹೆಲ್ಪರ ಕೆಲಸ ಮಾಡುತ್ತಿದ್ದ ಬಾಬು ತಂದೆ ಭೀಮಶಾ ಕಟ್ಟಿಮನಿ ಇಬ್ಬರು ಕೂಡಿ ಮಲಗುತ್ತಿದ್ದೇವು. ಆಗ ಪಪ್ಪು ಪಟೇಲ್ ತಂದೆ ಮಹಿಬೂಬ ಪಟೇಲ್ ಸಾ:ಮುಗಟಾ ಈತನು ಮಧ್ಯರಾತ್ರಿ 2 ಗಂಟೆಗೆ ಬಂದು ಮಲಗಿದ ಕೋಣೆಯ ಬಾಗಿಲಿಗೆ ಬಡೆಯುತ್ತಿದ್ದಾಗ ನಾವು ನಿದ್ರೆಯಲ್ಲಿ ಬಾಗಿಲು ತೆರೆದಾಗ ಅವಾಚ್ಯವಾಗಿ ಬೈದು ಕ್ರಶರ ಮಶೀನ ಯಾಕೆ ಚಾಲು ಮಾಡಿದ್ದಿ. ನಿನ್ನ ಮಾಲಿಕನು ನನಗೆ ಕೊಡ ತೊಗೊಳ್ಳುವ ವ್ಯವಹಾರ ಇನ್ನು ಮುಗದಿಲ್ಲ ಅಂತ ಸಿಕ್ಕಪಟ್ಟಿ ಒದ್ದು, ಹೊಡೆದು ತನ್ನಲ್ಲಿದ್ದ ಚಾಕು ತೆಗೆದು ಕಕ್ಕಾಬಿಕ್ಕಿ ತಿವಿದನು. ಆಗ ಶರೀರ ರಕ್ತಗಾಯವಾಗಿರುತ್ತದೆ. ಖಾಲಾಸ ಮಾಡುತ್ತೇನೆ ಅಂತ ಜೀವದ ಬೆದರಿಕೆ ಹಾಕಿ, ನನ್ನನ್ನು ಹಿಡಿದು ಆಫೀಸ ಕೋಣೆಯ ಒಳಗೆ ಕಟ್ಟಿ ಹಾಕಿ ಲಾಕ ಮಾಡಿ ಹೋಗಿದ್ದು. ಎನಾದರೂ ಕ್ರಶರ ಮಶೀನ ಚಾಲು ಮಾಡಿದರೆ ನಿನಗೆ ಮತ್ತು ನಿನ್ನ ಮಾಲಿಕನಿಗೆ ಖಾಲಾಸ ಮಾಡುತ್ತೇನೆ ಅಂತ ಜೀವ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ:

ಸ್ಟೇಶನ ಬಜಾರ ಠಾಣೆ: ಶ್ರೀ ಆರ್.ರವಿಂದ್ರನಾಥ ಪಿಎಸ್ಐ[ಕಾ.ಸು] ಸ್ಟೇಷನ ಬಜಾರ ಪೊಲೀಸ ಠಾಣೆ ಗುಲಬರ್ಗಾ ರವರು ಠಾಣೆ ಸರಹದ್ದಿನಲ್ಲಿ ಪೆಟ್ರೋಲಿಂಗ್ ಕರ್ತವ್ಯ ಕುರಿತು ಮಹಲ-ಇ-ಶಾಹಿ ಅಥಿತಿ ಗೃಹ ಲೋಕೊಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಥತಿ ಗೃಹದ ಒಳ ಅವರಣದಲ್ಲಿ ಕೆಲವು ಜನರು ಅಪರಿಚಿತ ಗಂಡು ಮನುಷ್ಯನ ಶವ ವಯಸ್ಸು ಅಂದಾಜು 55-60 ವರ್ಷ ಇದ್ದಿದ್ದು ಕಂಡು ಬರುತಿದ್ದು ಆತನ ಮೈ ಮೇಲೆ ಧರಿಸಿದ ಒಂದು ಬಿಳಿ ಬಣ್ಣದ ಫುಲ್ ಶರ್ಟ & ಒಂದು ಬಿಳಿ ಬಣ್ಣದ ಫುಲ್ ಬನಿಯಾನ ಹಾಗೂ ಕಂಪನಿಯ ಹಸಿರು ಬಣ್ಣದ ಒಂದು ಅಂಡರ್ ವೇರ್ ಇದ್ದು ಅಲ್ಲದೆ ಒಂದು ಬಿಳಿ ಬಣ್ಣದ ಪ್ಯಾಂಟ ಇದ್ದು ಟೊಂಕದಲ್ಲಿ ಕರಿ ಉಡದಾರ ಕೊರಳಲ್ಲಿ ಕೆಂಪು ದಾರದಲ್ಲಿ ಒಂದು ರುದ್ರಾಕ್ಷಿ ಮತ್ತು ಕೊರಳಲ್ಲಿ ನೀಲಿ ಮತ್ತು ಬಿಳಿ ಮಣಿ ಸರ ಇದ್ದು ಇದರಲ್ಲಿ ಗೋಲಾಕಾರವಾದ ಚಿಕ್ಕದಾದ ಅಂಬೇಡ್ಕರ ಭಾವಚಿತ್ರ ಉಳ್ಳದ್ದು ಇದ್ದು ಮೃತನ ಶವವನ್ನು ನೋಡಲಾಗಿ ಇತನ ತಲೆಯ ಎಡ ಭಾಗದಕ್ಕೆ ಭಾರಿ ರಕ್ತಗಾಯವಾಗಿ ಮಾಂಸ ಕಾಣುತಿದ್ದು ಅಲ್ಲದೆ ಸ್ಥಳದಲ್ಲಿ ಮಣ್ಣಿನ ಮೆಲೆ ರಕ್ತ ಬಿದ್ದಿದ್ದು ಇತನ ಬಲಗೈ ಹೆಬ್ಬರಳ ಸಂದಿಯಲ್ಲಿ ರಕ್ತಗಾಯವಾಗಿದ್ದು ಅಲ್ಲದೆ ಇತನ ಎಡಗೈಯಲ್ಲಿ ಕೈ ಗಡಿಯಾರ ಇದ್ದು ಮತ್ತು ಇತನು ಧರಿಸಿದ ಶರ್ಟನ ಪಾಕಿನಲ್ಲಿ ಜೇಸ್ಕಾಂ ಕಂಪನಿಯ ವಿದ್ಯೂತ್ ಬಿಲ್ ಆರ.ಆರ. ನಂ 55972 ನೇದ್ದು ಸಿಕ್ಕಿದ್ದು ಅಲ್ಲದೆ ಶವದ ಪಕ್ಕದಲ್ಲಿ ಎರಡು ಸಿಮೆಂಟಿನ ಕಲ್ಲುಗಳು ಬಿದ್ದು ಇರುತ್ತದೆ ಕಾರಣ ಅಪರಿಚಿತ ವ್ಯೆಕ್ತಿಗೆ ಯಾರೋ ದುಶರ್ಕ್ಮಿಗಳು ಇತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು ಕಂಡು ಬರುತ್ತಿದ್ದು ಈ ಘಟನೆಯು ದಿನಾಂಕ 12.07.2011 ರಂದು 7.30 ರಿಂದ 13.07.2011 ರ ಬೆಳಗಿನ ಅವಧಿಯಲ್ಲಿ ಮಧ್ಯದಲ್ಲಿ ಈ ಕೊಲೆ ಜರುಗಿದ್ದು ಕಂಡು ಬರುತ್ತದೆ ಕೊಲೆಗೀಡಾದ ವ್ಯೆಕ್ತಿ ಅಪರಿಚಿತ ವ್ಯೆಕ್ತಿ ಇದ್ದು , ಈ ಕೊಲೆ ಮಾಡಿದವರು ಯಾರು ಮತ್ತು ಎತಕ್ಕಾಗಿ ಕೊಲೆ ಮಾಡಿದ್ದಾರೆ ಅಂತ ಸದ್ಯಕ್ಕೆ ತಿಳಿದು ಬಂದಿರುವದಿಲ್ಲಾ ಅದ್ದರಿಂದ ಮುಂದಿನ ಕ್ರಮ ಜರುಗಿಸುವ ಕುರಿತು ಕೊಟ್ಟ ಸರ್ಕಾರಿ ತರ್ಪೆಯಾಗಿ ಪಿರ್ಯಾದಿ ಸಲ್ಲಿಸಿದದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 


 


 

GULBARGA DISTRICT REPORTED CRIMES

ಅಪಘಾತ ಪ್ರಕರಣ:

ಫರಹತಾಬಾದ ಠಾಣೆ : ಪರಶುರಾಮ ತಂದೆ ಸಾಯಬಣ್ಣ ಮಂಜೂಳಕರ ವಯ: 20 ವರ್ಷ ಸಾ:ಮನೆ ನಂ: 11 2383/4 ಲಕ್ಷ್ಮಿ ನಗರ ಹೀರಾಪೂರ ಗುಲಬರ್ಗಾ ರವರು ನಾನು ದಿನಾಂಕ: 12-7-2011 ರಂದು ಮದ್ಯಾಹ್ನ ಜೆವರ್ಗಿ ಕಡೆಯಿಂದ ನನ್ನ ಟಂ ಟಂ ನಂ: ಕೆಎ 32 ಎ 6243 ನೇದನ್ನು ಚಲಾಯಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 218 ರ ಮೂಲಕ ಫರಹತಾಬಾದದ ಕೆ.ಇ.ಬಿ ಹತ್ತಿರ ಬರುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಒಂದು ಹಾಲಿನ ಟ್ಯಾಂಕರ ನಂ: ಕೆಎ 14 ಡಿ 4515 ನೇದ್ದರ ಚಾಲಕನು ತನ್ನ ಟ್ಯಾಂಕರನ್ನು ಅತಿವೇಗದಿಂದ, ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಟಂ ಟಂ ಕ್ಕೆ ಡಿಕ್ಕಿ ಪಡಿಸಿ, ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಸಂಚಾರಿ ಠಾಣೆ : ಚಂದ್ರಕಾಂತ ತಂದೆ ಕಾಶಿನಾಥ ವ: 78 ವರ್ಷ ಸಾ: ಮಕ್ತಮಪೂರ ಗುಲಬರ್ಗಾ ರವರು ದಿನಾಂಕ:09/07/2011 ರಂದು ಸಾಯಂಕಾಲ್ ನಾನು ಸರಾಫ್ ಬಜಾರದ ಕಡೆಗೆ ನಡೆದುಕೊಂಡು ಬರುವಾಗ ಗಣೇಶ ಮಂದಿರ ಕಡೆಯಿಂದ ಯಾರೋ ಒಬ್ಬ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಹಿಂದಿನಿಂದ ಬಂದು ಬಲಗಾಲ ತೊಡೆಗೆ ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ ಒಂದು ಸಾವು :

ಗ್ರಾಮೀಣ ಠಾಣೆ : ಶ್ರೀ ಶೇಖಬುರಾನ ತಂದೆ ಅಬ್ದುಲ ಖಾದರ ಜಿಲಾನಿ ಉಃ ಲಾರಿ ಮೇಕ್ಯಾನಿಕ ಕೆಲಸ ಸಾಃ ಖಿಲ್ಲಾ ಹೆಡ ಪೋಸ್ಟರ್ ಹತ್ತಿರ ಗುಲಬರ್ಗಾ ರವರು ನಾನು ದಿನಾಂಕ 12/7/2011 ರಂದು ಮಧ್ಯಾಹ್ನ ಅಂಗಡಿಯಲ್ಲಿದ್ದಾಗ ನನಗೆ ಪರಿಚಯದ ಮಹ್ಮದ ಅತೀಕ ಊರ ರಹೇಮಾನ ತಂದೆ ಖಾಸೀಮ ಅಲಿ ಪರವಾನಾ ಸಾ|| ಬುಲಂದ ಪರವೇಜ ಕಾಲನಿ ಗುಲಬರ್ಗಾ ಮತ್ತು ಮಹ್ಮದ ಮುಕ್ಕಿರೋದ್ದಿನ ತಂದೆ ಮೈನೋದ್ದಿನ ಮಾರುಪವಾಲೆ ಸಾಃ ಜವಾಹರ ಹಿಂದ ಶಾಲೆ ಗುಲಬರ್ಗಾ ಇವರಿಬ್ಬರು ತಮ್ಮ Hero Honda Passion M/c No. KA-32-Q-0553 ಮೇಲೆ ಬಂದು ನನಗೆ ಅವರಿಬ್ಬರು ಮುಸ್ಲಿಂ ಚೌಕ ಹತ್ತಿರ ನಮ್ಮ ಕಟ್ಟಿಗೆ ತುಂಬಿದ ಲಾರಿ ಬ್ಯಾಟರಿ ರಿಪೇರಿ ಮಾಡಲು ಅಂತ ತಿಳಿಸಿದ್ದ ಮೇರೆಗೆ ಮೋಟಾರ ಸೈಕಲ್ ಮೇಲೆ ಕುಳಿತು ಕೊಂಡು ಆಳಂದ ಚಕ್ಕ ಪೋಸ್ಟ್ ದಿಂದ ಕಾಕಡೆ ಚೌಕ ರಿಂಗ ರೋಡಿನ ಸರ್ಕಲ್ ಬಂದಾಗ ಹುಮನಾಬಾದ ರಿಂಗ ರೋಡ ಕಡೆಯಿಂದ ಒಬ್ಬ ಟ್ಯ್ರಾಕ್ಟರ್ ಚಾಲಕ ಟ್ರ್ಯಾಕ್ಟರ ಚಾಲಕ ಅತೀವೇಗ ಮತ್ತು ನಿಲರ್ಕ್ಷತನದಿಂದ ನಡೆಸುತ್ತ ಬಂದವನೆ ಕಾಕಡೆ ಚೌಕ ಸರ್ಕಲ್ ದಲ್ಲಿ ವೇಗದಲ್ಲಿ ಒಮ್ಮೆಲ್ಲೆ ರೈಟ್ ಟರ್ನ ಮಾಡಿದವನೆ ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದನು ಇದರಿಂದಾಗಿ ನಾವು ಮೋಟಾರ ಸೈಕಲ್ ಮೇಲೆ ಇದ್ದ 3 ಜನರು ರೋಡಿಗೆ ಬಿದ್ದೆವು ಟ್ರ್ಯಾಕ್ಟರ್ ಚಾಲಕ ಸ್ವಲ್ಪ ಮುಂದೆ ಹೋಗಿ ಟ್ಯ್ರಾಕ್ಟರ್ ನಿಲ್ಲಿಸಿ ಓಡಿ ಹೋದನು ಟ್ರ್ಯಾಕ್ಟರ ನಂಬರ ನೋಡಲಾಗಿ KA-32-TA-1226-1227 ಇರುತ್ತದೆ. ಇದ್ದರಿಂದಾಗಿ ಮೋಟಾರ ಸೈಕಲ ಮೇಲೆ ಇದ್ದ 3 ಜನರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಉಪಚಾರ ಕುರಿತು ಆಸ್ಪತ್ರೆಗೆ ದಾಖಲ ಮಾಡಿದಾಗ ವೈದ್ಯರು ಮಹ್ಮದ ಅತೀಕ ಇತನು ಈಗಾಗಲೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಅಫಜಲಪೂರ ಠಾಣೆ : ಶ್ರೀ ಕೈಮೊದ್ದಿನ ತಂದೆ ಖಾಸಿಂಸಾಬ ಜೇಸ್ಕಾಂ ಅಪೀಸ್ ಅಫಜಲಪೂರ ಸಬ್ ದಿವಿಜನ್ ರವರು ದಿನಾಮಕ: 09-07-2011 ರ ಮಧ್ಯರಾತ್ರಿ ನಂದರ್ಗಾ ಮತ್ತು ಗೌರ (ಬಿ) ಗ್ರಾಮದ ಮಧ್ಯದಲ್ಲಿ ಕಂಬಕ್ಕೆ ಹಾಕಿದ ಅಲುಮಿನಿಯಂ ವೈರ ಅಕಿ 40,000-00 ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ಥಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಲಾಗಿದೆ