POLICE BHAVAN KALABURAGI

POLICE BHAVAN KALABURAGI

05 February 2012

Gulbarga Dist Reported Crimes

ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಲೋಕೇಶ ತಂದೆ ಮಲ್ಲಿಕಾರ್ಜುನ ಜಮಾದಾರ ಸಾ:ಕರುಣೇಶ್ವರ ನಗರ ಹಾ:ವ:ಪ್ಲಾಟ ನಂ.16ಗಣೇಶ ನಗರ ಹೊಸ ಜೇವರ್ಗಿ ರೋಡ ಗುಲಬರ್ಗಾ ರವರು ನಾನು ದಿನಾಂಕ:01.02.2012ರಂದು ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರ ನ್ಯಾಯಾಲಯ ಗುಲಬರ್ಗಾದಲ್ಲಿ ಎಸ್.ಸಿ.ನಂ.14/2012 ರ ಕೇಸಿನಲ್ಲಿ ನ್ಯಾಯಾಲಯಕ್ಕೆ ದ್ವೀಚಕ್ರ ವಾಹನ ನಂ. ಕೆಎ-32 ಆರ್-4339 ನೇದ್ದರ ಮೇಲೆ ಬಂದು ಕೋರ್ಟಿ ಬಂದಿದ್ದು ನನ್ನ ಜಾಮೀನುದಾರರು ನ್ಯಾಯಾಲಯಕ್ಕೆ ಬಂದು ಜಾಮೀನು ಕೊಡದ ಕಾರಣ ಅದೇ ದಿನದಂದು ಅಂದರೆ ದಿನಾಂಕ:01.02.2012 ರಂದು ನ್ಯಾಯಾಲಯವು ಪೊಲೀಸರನ್ನು ಕರೆಯಿಸಿ ಜೇಲಿಗೆ ಕಳುಹಿಸಿದ್ದು ಮುಂದೆ ದಿನಾಂಕ:03.02.2012 ರಂದು ನನಗೆ ಜಾಮೀನು ದೊರೆತು ಅಂದೇ ರಾತ್ರಿ 7.30 ಗಂಟೆಗೆ ಜೇಲಿನಿಂದ ಹೊರಗೆ ಬಂದು ನ್ಯಾಯಾಲಯದಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನವನ್ನು ತರಲು ಹೋದಾಗ ನನ್ನ ವಾಹನವು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.13/2012 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಆಳಂದ ಠಾಣೆ:
ಶ್ರೀ ಲಿಂಬಾಜಿ ತಂದೆ ಪ್ರಹ್ಲಾದ ವಿಟೋಬನೆ ಸಾಅಣೂರ ಹಾವಹೊದಲೂರು ರವರು ನಾನು ಒಂದು ವರ್ಷದಿಂದ ಹೊದಲೂರು ಗ್ರಾಮದ ಅಶೋಕ ಬನಶಟ್ಟಿ ಇವರ ಹತ್ತಿರ ಒಕ್ಕಲೂತನ ಕೆಲಸ ಮಾಡುತ್ತಿದ್ದು ನನ್ನ ಹೆಂಡತಿ ಮಗನೊಂದಿಗೆ ಅವರ ಜಾಗೆಯಲ್ಲಿ ಕೇರು ಕಟ್ಟಿಕೊಂಡು ವಾಶಿಸುತ್ತಿದ್ದೆನೆ. ದಿನಾಂಕ 05/02/2012 ರಂದು ಪ್ರತಿ ದಿವಸದಂತೆ ಬೆಳಿಗ್ಗೆ 07.00 ಗಂಟೆಗೆ ಕಬ್ಬಿಗೆ ನೀರು ಬಿಡಲು ಹೊಲಕ್ಕೆ ಬಂದೆನು ಕಬ್ಬಿನ ರಕ್ಷಣೆ ಸಲುವಾಗಿ ಮುಳ್ಳು ಹಾಕ್ಕಿದ್ದು, ಮುಳ್ಳು ಸರದಿದ್ದು ನೋಡಿ ನಾನು ಹಾಗೆ ನೀರಿನ ಪೈಪು ಕುಡಿಸಲು ಹೋಗಿ ಪೈಪ ಕುಡಿಸಿ ಬರುವಾಗ ಕಬ್ಬು ನೋಡುತ್ತಾ ಹಾಗೆ ಮುಂದೆ ಬಂದಾಗ ರೋಡಿನಿಂದ ಅಂದಾಜು 30’ ಮೇಲೆ ಕಬ್ಬನ್ನು ಆಕಡೆ ಇಕಡೆ ಸರದಿದ್ದು ನೋಡಿದಾಗ ಒಬ್ಬ ಮನುಷ್ಯ ಶವ ಬಿದ್ದಿದ್ದು ನೋಡಿ ನನಗೆ ಭಯವಾಗಿ ಶವ ಬಿದ್ದ ವಿಷಯ ನಮ್ಮ ಅಶೋಕ ಮಾಲೀಕರ ಅಣ್ಣ ಬಂಡೆಪ್ಪ ಬನಶೆಟ್ಟಿರವರಿಗೆ ತಿಳಿಸಿದಾಗ ಅವರು ನನ್ನೊಂದಿಗೆ ತೋಟಕ್ಕೆ ಬಂದು ಕಬ್ಬಿನಲ್ಲಿ ಬಿದ್ದ ಶವ ನೋಡಿ ಆಳಂದ ಪೊಲೀಸ ಠಾಣೆಗೆ ಪೋನ ಮುಖಾಂತರ ತಿಳಿಸಿದರು. ಮೃತ ವ್ಯಕ್ತಿಯನ್ನು ಪೊಲೀಸರು ಬಂದು ನೋಡಲಾಗಿ ಮೈತನ ಎರಡು ಕೈ ಬಟ್ಟಿಯಿಂದ ಕಟ್ಟಿ, ಮುಖ ಮುಚ್ಚಿದ್ದರಿಂದ ಗುಲ್ಬರ್ಗಾದ ಡಾಗ ಸ್ಕ್ವಾಡ ಕರೆಯಿಸಿದಾಗ ಡಾಗ ಸ್ಕ್ವಾಡ ಬಂದು ಹುಡುಕಾಡಿರುತ್ತದೆ. ನಂತರ ಶವದ ಮುಖಕ್ಕೆ ಕೈಗೆ ಕಟ್ಟಿದ ಬಟ್ಟೆ ಪೊಲೀಸ ಅಧಿಕಾರಿಗಳು ಬಂದು ತೆಗೆಯಿಸಿ ನೋಡಿದಾಗ ಬಲ ಕಿವಿಯಿಂದ ರಕ್ತ ಹರಿದಿದ್ದು ತಲೆಯ ಮೇಲೆ ಹೊಡೆದಿದ್ದು ಮಾಂಸ ಕಾಣಿಸುತ್ತಿದ್ದು ಎಡಗಣ್ಣಿನಿಂದ ಮೂಗಿನ ವರೆಗೆ ಕಂದುಗಟ್ಟಿದ ಗಾಯವಾಗಿದ್ದು ತೆಲೆಯ ಹಿಂಬಾಗಕ್ಕೆ ರಕ್ತಗಾಯವಾಗಿದ್ದು ಹಾಗು ಇತರೇ ಕಡೆಗಳಲ್ಲಿ ಕಂದು ಗಟ್ಟಿದ ಗಾಯವಾಗಿದ್ದು ಕಂಡು ಬಂದಿರುತ್ತವೆ.ಮೈತ ಸದರಿ ಮನುಷ್ಯನ ವಯಸ್ಸು ಅಂದಾಜು 35-40 ವರ್ಷದವನಿರುತ್ತಾನೆ ಸದರಿಯವನ ಮೈಮೇಲೆ ಒಂದು ಡಾರ್ಕ ನೀಲಿ ಬಣ್ಣದ ಪ್ಯಾಂಟ ದರಿಸಿದ್ದು ಶವವು ಬಲ ಮಗ್ಗಲಾಗಿದ್ದು ಮುಖಕ್ಕೆ ಕಟ್ಟಿದ ಬಟ್ಟೆಗೆ ಒಂದು ಗೊಣಿ ಚಿಲ ಹತ್ತಿದ್ದು ರಕ್ತ ಹತ್ತಿರುತ್ತದೆ. ಸದರಿ ಶವವು ಯಾರದು ಎಂಬುವುದು ಗೊತ್ತಾಗಿರುವುದಿಲ್ಲ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಗೊಣಿ ಚಿಲದಲ್ಲಿ ಹಾಕಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ನಮ್ಮ ಮಾಲೀಕರ ಕಬ್ಬಿನ ಹೊಲದಲ್ಲಿ ಬಿಸಾಕಿ ಹೊಗಿರುತ್ತಾರೆ ಅಂತಾ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 27/2012 ಕಲಂ 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಬಾಬು ಪಟೇಲ ತಂದೆ ಮಹಿಬೂಬ ಪಟೇಲ ಪೋಲೀಸ ಬಿರಾದಾರ ಸಾ: ಶೇಳಗಿ ತಾ: ಚಿತ್ತಾಪೂರ ಜಿ:ಗುಲಬರ್ಗಾರವರು ನಾನು ದಿನಾಂಕ 04/02/2012 ರಂದು 8-30 ಸುಮಾರಿಗೆ ಶೇಳಗಿ ಯಿಂದ ಗುಲಬರ್ಗಾಕ್ಕೆ ಶನಿವಾರ ಸಂತೆಗೆ ಕುರಿ ಖರೀದಿ ಕುರಿತು ನನ್ನ ಬಜಾಜ ಕೆಎ 32 ವೈ 9362 ಮೇಲೆ ಕುಳಿತುಕೊಂಡು  ಹೊರಟಿದ್ದು  ಬೆಳಗಿನ 8:30 ಗಂಟೆಯ ಸುಮಾರಿಗೆ ಹುಮನಾಬಾದ ರಿಂಗ ರೋಡ ಮಧ್ಯದಲ್ಲಿ ಸೇಡಂ ರಿಂಗ ರೋಡ  ಕಡೆಯಿಂದ ಟವರಸ ಲಾರಿ ಕೆಎ 32 ಬಿ 2857 ಚಾಲಕ ಅತೀವೇಗದಿಂದ ಮತ್ತು ನಿಲಕ್ಷತನದಿಂದ ನಡೆಸುತ್ತ ಬಂದು ನನ್ನ ಗಾಡಿಗೆ ಡಿಕ್ಕಿ ಹೊಡೆದು ಗಾಡಿ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:36/2012 ಕಲಂ  279, 337 ಐಪಿಸಿ  ಸಂಗಡ 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.