POLICE BHAVAN KALABURAGI

POLICE BHAVAN KALABURAGI

05 March 2013

GULBARGA DISTRICT REPORTED CRIMES


ಮಂಗಳಸೂತ್ರ ದರೋಡೆ ಮಾಡಿದ ಆರೋಪಿತನ ಬಂಧನ,
ಬಂಧಿತನಿಂದ 3 ತೊಲೆ ಬಂಗಾರದ ಆಭರಣ ವಶ.
ದಿನಾಂಕ;16-02-2013 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಶ್ರೀಮತಿ ನಿರ್ಮಲಾ ಗಂಡ ಜಗದೀಶ ಸಾ|| ವಿರೇಂದ್ರ ಪಾಟೀಲ್ ಬಡವಾಣೆ ಗುಲಬರ್ಗಾ ರವರು ಶಹಾಬಜಾರದಿಂದ ತಮ್ಮ ಮನೆಗೆ ಹೋಗುತ್ತಿರುವಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಆ ಮಹಿಳೆಯ ಕೊರಳ್ಳಲಿದ್ದ  3 ತೊಲೆ ಬಂಗಾರದ ಮಂಗಳಸೂತ್ರ ದರೋಡ ಮಾಡಿಕೊಂಡು ಹೋದ ಆರೋಪಿತನ ಪತ್ತೆ ಕುರಿತು ತನಿಖೆ ಕೈಕೊಂಡ ಚೌಕ ಪೊಲೀಸ್ ಠಾಣೆ ಪೊಲೀಸ್ ಇನ್ಸಪೇಕ್ಟರಾದ ಶ್ರೀ, ಬಿ.ಬಿ.ಭಜಂತ್ರಿ ಪೊಲೀಸ್ ಠಾಣೆ, ಪಿ.ಎಸ.ಐ ರವರಾದ ಶ್ರೀ ನಟರಾಜ, ಚಿತ್ತರಂಜನ್, ಡಿ. ಹೇಮಂತಕುಮಾರ, ಹಾಗೂ ಸಿಬ್ಬಂದಿಯವರಾದ  ಶಿವಾನಂದ, ಬಂದೆನವಾಜ, ಮಹಾಂತೇಶ ರವರು ಮಂಗಳ ಸೂತ್ರ ದರೋಡೆ ಮಾಡಿದ ಆರೋಪಿತನಾದ ಅಜಯಕುಮಾರ @ ಅಜಯ ತಂದೆ ವಿಜಯ ಕಾಂಬಳೆ ವಯಾ|| 19 , ಸಾ|| ಮಾಂಗರವಾಡಿ ಗುಲಬರ್ಗಾ ಇತನನ್ನು ದಸ್ತಿಗಿರಿ ಮಾಡಿ, ದರೋಡೆ ಮಾಡಿದ ಮಂಗಳಸೂತ್ರ ವಶಪಡಿಸಿಕೊಂಡು ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ; ಶ್ರೀ ಸತೀಷಕುಮಾರ ತಂದೆ ಸಿದ್ದಪ್ಪ ಕಡಗಂಚಿ  ಸಾ: ಹಡಲಗಿ ತಾ: ಆಳಂದ ಹಾ;ವ ಭಗತಸಿಂಗ ಚೌಕ ಗುಲಬರ್ಗಾ ರವರು  ನಾನು ದಿನಾಂಕ :04-03-2013 ರಂದು ಬೆಳಿಗ್ಗೆ  10=30 ಗಂಟೆಗೆ ಸಣ್ಣೂರ ಗ್ರಾಮದಿಂದ ಅನ್ನಪೂರ್ಣ ಕ್ರಾಸ್ ಮುಖಾಂತರ ಎನ್.ವಿ.ಕಾಲೇಜಕ್ಕೆ ಮೋಟಾರ ಸೈಕಲ್ ನಂ: ಕೆಎ-32 ಎಸ್ 0407 ನೇದ್ದರ ಮೇಲೆ ಹೋಗುವಾಗ ಪಂಡಿತ  ರಂಗ ಮಂದಿರ ಎದುರಿನ ರೋಡ ಮೇಲೆ ಸಿದ್ದಿ ಷಾ ಕ್ರಾಸ್ ಕಡೆಯಿಂದ ಅಟೋರೀಕ್ಷಾ ನಂ:ಕೆಎ-32 ಬಿ-8768 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಟೋರೀಕ್ಷಾ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:13/2013 ಕಲಂ: 279,337  ಐ.ಪಿ.ಸಿ. ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆಕಸ್ಮಿಕ ಬೆಂಕಿ ಅಫಘಾತ :
ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:04-03-2013 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಗುಲಬರ್ಗಾದ ಹೀರಾಪೂರನ ಸೆಂಟ್ರಲ್ ಗೋಡನ ನಂ.-2 ಸಂಗ್ರಹ IIC10 , IIC11& IIC12 ನೇದ್ದಕ್ಕೆ  ಆಕಸ್ಮಿಕವಾಗಿ ಬೆಂಕಿ ಹತ್ತಿ ಅಂದಾಜು ಕಿಮ್ಮತ್ತು 26,13,218 /- ರೂ ಬೆಲೆ ಬಾಳುವ ಅಕ್ಕಿ ಸುಟ್ಟಿರುತ್ತವೆ. ಅಂತಾ ಶ್ರೀ ಮನೀತ ಕುಮಾರ ಲಕರಾ  ವಿಯರ ಹೌಸ ಮ್ಯಾನೇಜರ ಸೆಂಟ್ರಲ್ ವಿಯರ ಹೌಸ ಹೀರಾಪೂರ ಗುಲಬರ್ಗಾರವರು ಲಿಖಿತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಆಕಸ್ಮಿಕ ಬೆಂಕಿ ಅಫಘಾತ ಸಂಖ್ಯೆ 2/2013 ಕಲಂ ಆಕಸ್ಮಿಕ ಬೆಂಕಿ ಅಫಘಾತ ನೇದ್ದರ  ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ಪೊಲೀಸ್ ಠಾಣೆ:ಶಿವಲೀಲಾ ತಂದೆ ದೇವಿಂದ್ರಪ್ಪಾ ಪಾಟೀಲ ಸಾ:ಬಸವೇಶ್ವರ ನಗರ ಶಹಾಬಾದ ರವರು ನನ್ನ ಅಕ್ಕನ ಮಗನಾದ ಸರತಕುಮಾರ ಇತನಿಗೆ ಮನೆ ಒಳಗಡೆ ಹೋಗು ಅಂತಾ ಬೈದು ಒಳಗೆ ಕಳುಹಿಸಿದಾಗ ನಮ್ಮ ಮನೆಯ ಎದರುಗಡೆ ಮನೆಯವರಾದ ಬಸವರಾಜ ತಂದೆ ಶಿವಾನಂದ, ನಾಗರಾಜ, ದಾನಪ್ಪಾ, ಶಿವಾನಂದ, ಸುನಂದಾಬಾಯಿ ರವರು ಬಂದು ನಮಗೆ ಚಿಕ್ಕ ಹುಡುಗನ ಮೇಲೆ ಹಾಕಿ ನಮಗೆ ಏಕೆ ಬೈಯುತ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2013 ಕಲಂ, 147, 323, 354, 504, 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ಪೊಲೀಸ್ ಠಾಣೆ:ಶ್ರೀಮತಿ  ಸುನಂದ ಗಂಡ ಶಿವಾನಂದ ದೇವರಮನಿ ವ:45 ಸಾ:ಬಸವೇಶ್ವರ ನಗರ ಶಹಾಬಾದ ರವರು ನಾನು ಮತ್ತು ನನ್ನ ಸೊಸೆ ಜಗದೇವಿ ಮನೆಯಲ್ಲಿದ್ದಾಗ ನಮ್ಮ ಮನೆಯ ಎದರುಗಡೆ ಇರುವ ದೇವಿಂದ್ರಪ್ಪಾ ಮಾಲಿ ಪಾಟೀಲ, ಭೀಮಾಶಂಕರ ತಂದೆ ದೇವಿಂದ್ರಪ್ಪಾ,ಸೋಮಶೇಖರ ತಂದೆ ದೇವಿಂದ್ರಪ್ಪಾ, ವಿಜಯಲಕ್ಷಿ  ತಂದೆ ದೇವಿಂದ್ರಪ್ಪಾ ರವರು  ನಮ್ಮ ಮನೆಯ ಎದುರು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:32/2013 ಕಲಂ, 323, 324, 354, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:03-03-2013 ರಂದು ಸಾಯಂಕಾಲ 5-00 ಪಿ.ಎಮ್.ದ ಸುಮಾರಿಗೆ ನನ್ನ ತಮ್ಮನಾದ ಸನ್ನಪ್ಪ ತಂದೆ ಮತ್ತಪ್ಪ ಮಂಗಾ ಹಾಗೂ ನನ್ನ ಮಗನಾದ ಚಿನ್ನಪ್ಪ ಇಬ್ಬರೂ ಕರ್ಚಖೇಡ ಗ್ರಾಮಕ್ಕೆ ಹೋಗಿದ್ದರು. ದಿನಾಂಕ:04-03-2013 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಿಮ್ಮ ತಮ್ಮನಾದ ಸಣ್ಣಪ್ಪ ಹಾಗೂ ನಿನ್ನ ಮಗನಾದ ಚಿನ್ನಪ್ಪ ಹಾಗೂ ಹಂಗನಳ್ಳಿ ಗ್ರಾಮದ ಪೀರಪ್ಪ ತಂದೆ ದುರ್ಗಪ್ಪ ಹರಸೂರ ಇವರು ಮೋಟಾರು ಸೈಕಲ್ ಮೇಲೆ ಸೇಡಂದಿಂದ ಮಳಖೇಡ ಕಡೆಗೆ ಹೋರಟಾಗ  ಪೆಟ್ರೊಲ್ ಪಂಪ್ ಎದುರುಗಡೆ ಗುಲಬರ್ಗಾ ಕಡೆಯಿಂದ ಬಂದ ಲಾರಿ ನಂ-AP04-X-3901 ನೇದ್ದರ ಚಾಲಕನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪೀರಪ್ಪ ಹರಸೂರ ಇತನು ಚಲಾಯಿಸುವ ಮೋಟಾರು ಸೈಕಲ್ ನಂ-KA-32-EB-6929 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಮೂರು ಜನರು ಮೋಟಾರು ಸೈಕಲ್ ದೊಂದಿಗೆ ಕೆಳಗೆ ಬಿದ್ದು ಮೂರು ಜನರು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ ಲಾರಿ ಚಾಲಕನು ತನ್ನ ಲಾರಿಯನ್ನು ಪೆಟ್ರೊಲ್ ಪಂಪ್ ಒಳಗಡೆ ನಿಲ್ಲಿಸಿ ಅಲ್ಲಿಂದ ಓಡಿ ಹೋಗಿರುತ್ತಾನೆ. ನಾವು ಬಂದು ನೋಡಲು 3 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು  ಈ ಘಟನೆಗೆ ಕಾರಣನಾದ ಲಾರಿ ಚಾಲಕನ  ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಶ್ರೀ ಕಲ್ಲಪ್ಪ @ ಕಲ್ಯಾಣಿ ತಂದೆ ಮತ್ತಪ್ಪ ಮಂಗಾ ಸಾ:ಮಳಖೇಡ ಗ್ರಾಮ, ತಾ:ಸೇಡಂ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ:51/2013 ಕಲಂ-279,304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ. ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಾರಾಣಾಂತಿಕ ಹಲ್ಲೆ ಪ್ರಕರಣ:
ಕೊಂಚಾವರಂ ಪೊಲೀಸ್ ಠಾಣೆ:ದಿನಾಂಕ:03-03-13 ರಂದು ಬಸ್ಸ ನಿಲ್ದಾಣದಲ್ಲಿರುವಾಗ ಯಾವದೇ ಕಾರಣವಿಲ್ಲದೇ ನನ್ನ  ಗಂಡ ಗೋವಿಂದನಿಗೆ ಅದೇ ತಾಂಡಾದ ತಾರಾಸಿಂಗ ತಂದೆ ಭೀಮ್ಲಾ ಇತನು ಗೋವಿಂದ ಇತನಿಗೆ ನನ್ನ ಅತ್ತಿಗೆ ಜೋತೆ ಸಂಬಂಧ ಇಟ್ಟುಕೊಂಡಿರುತ್ತಾನೆ.  ಅಂತಾ ಚಾಕುವಿನಿಂದ ಹೊಟ್ಟೆಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:08/2013 ಕಲಂ: 307, 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.