POLICE BHAVAN KALABURAGI

POLICE BHAVAN KALABURAGI

01 May 2013

GULBARGA DISTRICT REPORTED CRIME


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:01/05/2013 ರಂದು ಬೆಳ್ಳಿಗೆ 10:15 ರಿಂದ 10:45 ರ ವರೆಗೆ ಗಾಜಿಪುರದಲ್ಲಿ ಪರೀವಿಕ್ಷಣೆ ಮಾಡುತ್ತಿರುವಾಗ ಕರ್ನಾಟಕ ಜನತಾ ಪಕ್ಷದ ಪದಾಧಿಕಾರಿಯಾದ ಶ್ರೀ ಬಾಬುರಾವ ಮುಡಬಿ ಮತ್ತು ಪಕ್ಷದ ಇತರೆ ಕಾರ್ಯಕರ್ತರು  ಮತ್ತು ಗಾಜಿಪೂರ ನಗರದ ಜನರನ್ನು ನಾಟಿಕಾರಗಲ್ಲಿಯ ಮರಗಮ್ಮ ದೇವಸ್ಥಾನ ಮತ್ತು ಬಾಬು ಜಗಜೀವನರಾಮ ಸಮುದಾಯ ಭವನದ ಆವರಣದ ಒಳಗಡೆ ಕರ್ನಾಟಕ ಜನತಾ ಪಕ್ಷಕ್ಕೆ ಮತ ಕೋರಿ ಪ್ರಚಾರ ಭಾಷಣ ಮಾಡಿರುತ್ತಾರೆ,  ಸದರಿ ಪ್ರಚಾರವು ರಿರ್ಕಾಡಿಂಗ್ ಮಾಡಿಕೊಳ್ಳಲಾಗಿದೆ. ಮತ್ತು 10:50ಕ್ಕೆ ಡಾ|| ಅಂಬೇಡ್ಕರ ಸಮುದಾಯ ಭವನ ಗಾಜಿಪೂರದಲ್ಲಿಯು ಸಹ ಪ್ರಚಾರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಇದು ಚುನಾವಣೆ ಮಾದರಿ ನೀತಿ ಸಂಹಿತೆಯ ಉಲಂಘನೆ ಆಗಿರುವದು ಸ್ಪಷ್ಟವಾಗಿರುತ್ತದೆಅಂತಾ ಶ್ರೀ.ವಿ.ಆರ್ ಗಂಗಾ ಕಾರ್ಯನಿರ್ವಾಹಕ ಇಂಜನಿಯರ ಮತ್ತು ಎಮ್.ಸಿ.ಸಿ ಪ್ಲಾಯಿಂಗ್ ಸ್ಕ್ವಾಡ್ ಗುಲಬರ್ಗಾ ದಕ್ಷೀಣ ಮತಕ್ಷೇತ್ರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:81/2013 ಕಲಂ: 123133 ಆರ್.ಪಿ. ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ

GULBARGA DISTRICT

                      :: ಪೊಲೀಸ್ ಪ್ರಕಟಣೆ ::

ದಿನಾಂಕ:02-05-2013 ರಂದು ಗುಲಬರ್ಗಾ ಮಹಾ ನಗರಕ್ಕೆ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ಸೋನಿಯಾಗಾಂಧಿ ರವರು ಕಾಂಗ್ರೇಸ್ ಪಕ್ಷದ ವತಿಯಿಂದ ವಿಧಾನಸಭಾ ಚುನಾವಣೆ ಪ್ರಚಾರ ಕುರಿತು ಆಗಮಿಸುತ್ತಿದ್ದು, ಅವರ ಜೊತೆಗೆ ಇನ್ನೂ ಅನೇಕ ಗಣ್ಯ ವ್ಯಕ್ತಿಗಳು ಆಗಮಿಸುತ್ತಿರುವದರಿಂದ ಭದ್ರತಾ ದೃಷ್ಠಿಯಿಂದ ನಾಳೆ ದಿನಾಂಕ:02-05-2013 ರಂದು ಬೆಳಿಗ್ಗೆ 10-30 ಗಂಟೆಯಿಂದ ಮಧ್ಯಾಹ್ನ 1-00 ಗಂಟೆಯವರೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ (ಜಿ.ಜಿ.ಎಚ್) ವೃತ್ತದಿಂದ ಹಳೆ ಡಿ.ಪಿ.ಓ ವರೆಗಿನ ರಸ್ತೆ ಹಾಗೂ ಜಗತ್ ವೃತ್ತದಿಂದ ಗೋವಾ ಹೊಟೇಲ್ ಹಾಗೂ ಮಾನ್ಯ ಧರ್ಮಸಿಂಗ ರವರ ಮನೆಯ ವರೆಗೆ ಇರುವ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಸಂಪೂರ್ಣವಾಗಿ ನಿರ್ಭಂದಿಸಲಾಗಿದೆ. ಸಾರ್ವಜನಿಕರಿಗೆ ಸುಗಮ ಸಂಚಾರ ಕುರಿತು ಸಂಚಾರಿ ಸಿಬ್ಬಂದಿಯವರನ್ನು ನೇಮಿಸಿ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆ ವೃತ್ತದಿಂದ ನೇರವಾಗಿ ಟೌನ ಹಾಲ್ ಕ್ರಾಸ್ ಮುಖಾಂತರ ಅಥವಾ ಅದಕ್ಕೂ ಮೊದಲು ಕುಳಗೇರಿ ಕ್ರಾಸ್ ಮುಖಾಂತರ ಇರುವ ರಸ್ತೆ ಉಪಯೋಗಿಸಬಹುದಾಗಿದೆ. ಹಾಗೂ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ವೆಂಕವ್ವ ಮಾರ್ಕೆಟ ರಸ್ತೆ ಮುಖಾಂತರ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರುತ್ತದೆ. ಮತ್ತು ಜಗತ್ ವೃತ್ತದಿಂದ ಪಟೇಲ್ ವೃತ್ತದ ಕಡೆಗೆ ನೇರವಾಗಿ ಸಂಚರಿಸಬಹುದಾಗಿದೆ. ಕಾರಣ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ.   

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ: 30/04/2013 ರಂದು ಬೆಳಿಗ್ಗೆ 11-00 ಗಂಟೆಗೆ ನಿಂಬಾಳ ಗ್ರಾಮದ ಬಸ್ಸ ನಿಲ್ದಾಣ ಚೆಕ್ಕ ಪೊಷ್ಟ ಹತ್ತಿರ ಜೀಪ ನಂ ಎಮ್. ಹೆಚ್.15 ಕೆ-2880 ನೇದ್ದರ ಚಾಲಕ ಮಾಹಾಂತಪ್ಪಾ ತಂದೆ ಭೀಮಾಶಂಕರ ಚಟ್ಟರಕಿ ಸಾಃ ಮಾದನಹಿಪ್ಪರಗಾ ಇವರು ಕೆ.ಜೆ.ಪಿ. ಪಕ್ಷದ ಪರವಾಗಿ ಪರವಾನಿಗೆ ಇಲ್ಲದೆ ಪ್ರಚಾರ ಮಾಡುತ್ತಿದ್ದಾಗ  ನಾನು ಮತ್ತು ನನ್ನ ತಂಡದವರು ವಾಹನ  ಚೆಕ್ಕ ಮಾಡಲು ಕೆ.ಜೆ.ಪಿ. ಪಕ್ಷದ ಚಿನ್ಹೆವುಳ 3 ಟಾವಲಗಳು ಹಾಗೂ ಕರ್ನಾಟಕ ವಿಧಾನ ಸಭಾ ಚುಣಾವಣೆ 2013 ಆಳಂದ ಮತ ಕ್ಷೇತ್ರ ಕೆ.ಜೆ.ಪಿ. ಪಕ್ಷದ ಮಾದರಿ ಮತ ಯಂತ್ರವುಳ್ಳ ಕರ ಪತ್ರಗಳು ಪರವಾನಿಗೆ ಪಡೆಯದೆ ಜೀಪ ಚಾಲಕನು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾನೆ ಅಂತಾ ಶ್ರೀ ನಾಗಪ್ಪ ಬಿರಾದಾರ ಎಸ್.ಎಸ್.ಟಿ. ತಂಡದ ಮುಖ್ಯಸ್ಥರು ನಿಂಬಾಳ ಚೆಕ್ಕ ಪೊಸ್ಟ, ತಾ:ಆಳಂದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:37/2013 ಕಲಂ ಕಲಂ 133 ಆಪ್. ದಿ ರೀಪ್ರೀವೆನ್ಸನ್ ಆಫ್ ದಿ ಪೀಪಲ್ ಆಕ್ಟ 1951 ಮತ್ತು ಕಲಂ 188 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಗುಲಬರ್ಗಾ ಅಫಜಲಪೂರ ಮುಖ್ಯ ರಸ್ತೆಯಲ್ಲಿಯ ಶರಣಸಿರಸಗಿ ಗ್ರಾಮದ ಶ್ರೀ ರಚಿ-ಕುಮಾರ ಆಳಂದ ಇವರ ಅಂಗಡಿ ಶೆಟ್ಟರ ಮೇಲ್ಬಾಗದಲ್ಲಿ ಬಿಜೆ.ಪಿ ಪಕ್ಷದ ಚಿಹ್ನೆ ಮತ್ತು ಅಭ್ಯರ್ಥಿಯ ಭಾವಚಿತ್ರವುಳ ಸ್ಟಿಕರಗಳು ಅಂಟಿಸಿದ್ದು ಇರುತ್ತದೆ. ಸ್ಟಿಕರಗಳು ಅಂಟಿಸಿದ್ದರಿಂದ ತೆಗೆಯಲು ಆಗಿರುವದಿಲ್ಲ. ಬಿ,ಜೆ,ಪಿ  ಪಕ್ಷದ ಗುಲ್ಬರ್ಗಾ ದಕ್ಷಿಣ ವಿಧಾನ ಸಭಾ ಮತಕ್ಷೇತ್ರ ಅಭ್ಯರ್ಥಿ ದತ್ರಾತ್ರೇಯ ತಂದೆ ಚಂದ್ರಶೇಖರ ಪಾಟೀಲ ಸಾ:ಗುಲಬರ್ಗಾ ರವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ,ಡಾ||  ಡಿ ಎಮ್ ಮಣ್ಣೂರ ಮ್ಯಾಜಿಸ್ಟ್ರೇಟ ಪ್ಲಾಯಿಂಗ ಸ್ವ್ಕಾಡ್‌  ಎಮ್ಸಿಸಿ ಮಾದರಿ ಚುನಾವಣೆ ನೀತಿ ಸಂಹೀತೆ ಅಧಿಕಾರಿ ಗುಲಬರ್ಗಾ ದಕ್ಷಿಣ ವಿಧಾನಸಭಾ ಚುನಾವಣೆ ಅಧಿಕಾರಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 221/2013 ಕಲಂ,[3] The Karnataka Open Places (Prevention of Disfigurement ) Act 1981  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಉನ್ಯಾ ಚವ್ಹಾಣ  ಮ್ಯಾಜಿಸ್ಟ್ರೇಟ ಪ್ಲಾಯಿಂಗ ಸ್ವ್ಕಾಡ್‌  ಎಮ್ಸಿಸಿ ಮಾದರಿ ಚುನಾವಣೆ ನೀತಿ ಸಂಹಿತೆ ಅಧಿಕಾರಿಗಳು ಗಸ್ತುವಿನಲ್ಲಿದ್ದಾಗ ಜೆ.ಡಿ.ಎಸ ಪಕ್ಷದ   ಅಭ್ಯರ್ಥಿ  ಶ್ರೀ,   ಶಶೀಲ್ ಜಿ. ನಮೋಶಿ , ಮತ್ತು ಹೆಚ.ಡಿ ಕುಮಾರ ಸ್ವಾಮಿ ಭಾವ ಚಿತ್ರ ಮತ್ತು  ಪಕ್ಷದ ಚಿಹ್ನೆವುಳ್ಳ  ಸ್ಟೀಕರ್ಪಾಂಪ್ಲೆಟಗಳು ಯಳವಂತಗಿ (ಕೆ) ಗ್ರಾಮದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ದೂರವಾಣಿ ಕಂಬಕ್ಕೆ ಅಂಟಿಸಿ ಸಾರ್ವಜನಿಕ ಸ್ಥಳವನ್ನು   ವಿರೂಪಗೊಳಿಸಿಚುನಾವಣೆ ನೀತಿ ಉಲ್ಲಂಘಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:222/2013 ಕಲಂ, ಕಲಂ,[3] The Karnataka Open Places (Prevention of Disfigurement ) Act 1981  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.