POLICE BHAVAN KALABURAGI

POLICE BHAVAN KALABURAGI

18 May 2014

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಮಲ್ಲಿನಾಥ ತಂದೆ ಜಯಪ್ರಕಾಶ ಗಣಜಲಖೇಡ ಸಾ:ಕಮಲನಗರ  ತಾ:ಆಳಂದ  ಜಿ: ಗುಲಬರ್ಗಾರವರಿಗೆ ರವರು ಬಸವ ಕಲ್ಯಾಣದ ಎಮ್.ಡಿ ಸಲ್ಲಿಮೊದ್ದಿನ ರವರ ಲಾರಿ  ಮೇಲೆ ಚಾಲಕನಾಗಿ ಕೇಲಸ ಮಾಡುತ್ತಿದ್ದು ನನ್ನಂತೆ ಇರ್ಫಾನ ಅಂತಾ ಚಾಲಕನು ಸಹ ಕೇಲಸ ಮಾಡುತ್ತಿದ್ದಾನೆ. ದಿನಾಂಕ 16.05.2014 ರಂದು ರಾತ್ರಿ ವೇಳೆಯಲ್ಲಿ ಮಾರುತಿ ರೈಸ ಮಿಲನಲ್ಲಿ  ರೈಸ ಲೋಡ ಮಾಡಿಕೊಂಡು ರಾತ್ರಿ 10.30 ಗಂಟೆ ಸುಮಾರಿಗೆ ರಾಯಚೂರದಿಂದ ಬಾಂಬೆಗೆ ಹೋಗಲು ಅಲ್ಲಿಂದ ಹೋರಟಿರುತ್ತೇವೆ. ಸದರಿ ಲಾರಿಯನ್ನು ನಮ್ಮ ಇನ್ನೋಬ ಚಾಲಕನಾದ ಇರ್ಫಾನ ಈತನು ಚಲಾಯಿಸುತ್ತಿದ್ದನ್ನು ಮುಂದೆ ರಾಷ್ಟ್ರಿಯ ಹೆದ್ದಾರಿ 218 ರಸ್ತೆಯ ಮೇಲೆ ಫರಹತಾಬಾದ ದಾಟಿ ಕೆರೆಯಂಗಳ ಹತ್ತಿರ ದಿನಾಂಕ 17.05.2014 ರಂದು ನಸುಕಿನ ಜಾವಾ 4 ಗಂಟೆ ಸುಮಾರಿಗೆ ನಮ್ಮ ಲಾರಿ ನಂ ಎಮ್. ಹೆಚ್ 12 ಎಫ್.ಝೆಡ್ 3093 ನೇದ್ದನ್ನು ನಮ್ಮ ಚಾಲಕನಾದ ಇರ್ಫಾನ ಇತನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಗೆ ಪಲ್ಟಿಗೊಳಿಸಿರುತ್ತಾನೆ ಇದರಿಂದ ನನಗೆ ಹಣೆಗೆ ಮತ್ತು ಬಲಗೈ ಮೋಳಕೈ ಹತ್ತಿರ ರಕ್ತಗಾಯವಾಗಿರುತ್ತದೆ ನಮ್ಮ ಚಾಲಕ ಇರ್ಫಾನ ಈತನಿಕೆ ಯಾವುದೆ ಗಾಯ ವಗೈರೆಯಾಗಿರುವುದಿಲ್ಲಾ. ನಮ್ಮ ಚಾಲಕನು ಲಾರಿಯನ್ನು ಪಲ್ಟಿಗೊಳೀಸಿದ ನಂತರ  ತಾನೂ ಸ್ಥಳದಲ್ಲಿ ನಿಲ್ಲದೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಮಲ್ಲಿಕಾರ್ಜುನ್‌ ತಂದೆ ಶಿವಶರಣಪ್ಪ ರಸ್ತಾಪೂರ ಸಾ:ರೆವನೂರ ತಾ:ಜೇರ್ಗಿ ಇವರು ಈಗ ಸುಮಾರು 6 ತಿಂಗಳಿನಿಂದ ಜೇವರ್ಗಿಯ ಶ್ರೀಮಂತ ಗುತ್ತೆದಾರ ಇವರ 407 ಟೆಂಪೊದ ನಂ ಕೆಎ-32 ಬಿ-0497 ನೆದ್ದರ ಮೇಲೆ ಚಾಲಕ ಅಂತಾ ಕೆಲಸ ಮಾಡುತ್ತಿದ್ದು ದಿನಾಂಕ 14/05/2014 ರಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ  ನಾನು ನಮ್ಮ 407 ಟೆಂಪೊದ ನಂ ಕೆಎ-32 ಬಿ-0497 ನೆದಕ್ಕೆ ಆಯಿಲ್ ಚೇಂಜ ಮತ್ತು ಟೆಂಪೊದ ಅಲ್ಪ-ಸ್ವಲ್ಪ ಕೆಲಸ ಇದ್ದು ಅದನ್ನು  ಮಾಡಿಸುವ ಸಲುವಾಗಿ ಜೇವರ್ಗಿಯಿಂದ ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗಿರುತ್ತೆನೆ.ಗುಲಬರ್ಗಾದಲ್ಲಿ ಗಾಡಿಯ ಕೆಲಸ ಮುಗಿಸಿಕೊಂಡು ಮರಳಿ ಜೇವರ್ಗಿಗೆ ಸಾಯಂಕಾಲ 4.30 ಗಂಟೆಯ ಸುಮಾರಿಗೆ ಗುಲಬರ್ಗಾದಿಂದ 407 ಟೆಂಪೊ ನಂ ಕೆಎ-32 ಬಿ-0497 ನೇದ್ದನ್ನು ತೆಗೆದುಕೊಂಡು ಹೊರಟಿರುತ್ತೆನೆ. ಸದರಿ  ಟೆಂಪೋವನ್ನು ನಾನೆ ನಡೆಸುತ್ತಿದ್ದೆನು. ಮುಂದೆ ರಾಷ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಫಿರೋಜಾಬಾದ ದರ್ಗಾದ ಹತ್ತಿರ ಸಾಯಂಕಾಲ 6 ಗಂಟೆಯ ಸುಮಾರಿಗೆ ಹೊಗುತ್ತಿದ್ದಾಗ ನಮ್ಮ ಎದುರುಗಡೆಯಲ್ಲಿ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಆಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಂತೆ ಒಮ್ಮೆಲೆ ತನ್ನ ಲಾರಿಯನ್ನು ಯಾವುದೆ ಸೂಚನೆ ಇಲ್ಲದೆ  ಬ್ರೆಕ್‌ ಮಾಡಿದ್ದರಿಂದ ಆ ಲಾರಿಯ ಹಿಂದೆ ಹೊಗುತ್ತಿದ್ದ ನಾನು ನಮ್ಮ ಟೆಂಪೊವನ್ನು ಆ ಲಾರಿಗೆ ಹೋಗಿ ಡಿಕ್ಕಿಯಾಗಿರುತ್ತದೆ. ಇದರಿಂದ ನನಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲ. ನಂತರ ಸದರಿ ಲಾರಿ ನಂಬರ ನೋಡಲಾಗಿ ಕೆಎ 12/6719 ಅಂತಾ ಇದ್ದು ಅದರಲ್ಲಿ ಹೆಚ್‌ಪಿ ಕಂಪನಿಯ ಖಾಲಿ ಸಿಲಿಂಡರ್‌ಗಳನ್ನು ತುಂಬಿದ್ದ ಲೋಡ ಇರುತ್ತದೆ. ಅದರ ಚಾಲಕನ ಹೆಸರು ರಾಚಯ್ಯ ಹೀರೆಮಠ ಅಂತಾ ಗೊತ್ತಾಗಿದ್ದು ತನ್ನ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶ್ರೀರಾಮ ತಂದೆ ನರಸಿಂಗರಾವ ಮೆಂಕಜಿ ರವರು ದಿನಾಂಕ 17-05-2014 ರಂದು ಬೆಳಿಗ್ಗೆ 9-30 ಗಂಟೆಗೆ ತನ್ನ ಕಾರ ನಂಬರ ಕೆಎ-32 ಎನ್-2310 ನೇದ್ದನ್ನು ಅನ್ನಪೂರ್ಣ ಕ್ರಾಸದಿಂದ ಜಗತ ಸರ್ಕಲ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆಮಂತ್ರಣ ಹೋಟಲ ಎದುರಿನ ರೋಡಿನ ಮೇಲೆ ಹಿಂದಿನಿಂದ ಟಂಟಂ ನಂಬರ ಕೆಎ-32 ಬಿ-3095 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರಿನ ಎಡಗಡೆಯಿಂದ ಓವರ ಟೇಕ ಮಾಡಿ ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಾರ ಡ್ಯಾಮೇಜ ಮಾಡಿ ತನ್ನ ಟಂಟಂ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.