POLICE BHAVAN KALABURAGI

POLICE BHAVAN KALABURAGI

11 June 2015

Kalaburagi District Reported Crimes

ಮಟಕಾ ಜೂಜಾಜಟದಲ್ಲಿ ನಿರತ ವ್ಯಕ್ತಿಯ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 10-06-2015 ರಂದು ಸ್ಟೇಷನ ಏರಿಯಾದ ಒನವೇ ರೋಡನಲ್ಲಿ ವಿಠಲ ಮಂದಿರ ಹತ್ತೀರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್.ಎಸ್ ದೊಡ್ಡಮನಿ ಪಿ.ಎಸ್.ಐ (ಕಾಸು) ಸ್ಟೇಷನ ಬಜಾರ ಪೊಲೀಸ್ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ವಿಠಲ ಮಂದಿರ ಹತ್ತೀರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಇಬ್ಬರೂ ಹೋಗಿ ಬರುವ ಸಾರ್ವಜನಿಕರಿಂದ 1/- ರೂ ಗೆ 80/-ರೂ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಒಮ್ಮೆಲೆ ಸುತ್ತುವರೆದು ಹಿಡಿಯುತ್ತಿದ್ದಾಗ ಅವರಲ್ಲಿ ಒಬ್ಬನು ಓಡಿ ಹೋಗಿದ್ದು ಇನ್ನೊಬ್ಬನ ವಿಚಾರಿಸಲು ಆತನು ತನ್ನ ಹೆಸರು ಈಶ್ವರ ತಂದೆ ಲಿಂಗಪ್ಪಾ ಪೂಜಾರಿ ಸಾಃ ಮನೆ ನಂ.1-534 ವಿಠಲ ಮಂದಿರ ಹತ್ತೀರ ಸ್ಟೇಷನ ಏರಿಯಾ ಕಲಬುರಗಿ ಅಂತಾ ಹೇಳಿದನು. ಸದರಿಯವನ ಹತ್ತಿರ ನಗದು ಹಣ 4520/- ರೂ ಮತ್ತು ಒಂದು ಬಾಲ ಪೆನ್ನು ಹಾಗು ಒಂದು ಮಟಕಾ ಬರೆದ ಚೀಟಿ ಜಪ್ತಿ ಮಾಡಿಕೊಂಡು. ನಂತರ ಓಡಿ ಹೋದವನ ಹೆಸರು ಈಶ್ವರ ಟೇಲರ ಅನ್ನಪೂರ್ಣ ಕ್ರಾಸ ಹತ್ತಿರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನೊಂದಿಗೆ ಸ್ಟೇಷನ  ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ದಿ|| ಗುರುಲಿಂಗಯ್ಯ ಗುಡಿ ಸಾಃ ಲಾಲಗೆರಿ ಬ್ರಹ್ಮಪೂರ ಕಲಬುರಗಿ ಇವರು ಕಲಬುರಗಿ ನಗರದ ಜಿಲ್ಲಾಧಿಕಾರಿ ಕಾರ್ಯಲಯದಲ್ಲಿ ಎಫ.ಡಿ.ಎ ಅಂತಾ ಕೆಲಸ ಮಾಡುತ್ತಿದ್ದು ನನಗೆ ಕುಮಾರಿ ಭವಾನಿ ಎಂಬ 14 ವರ್ಷದ ಮಗಳು ಇರುತ್ತಾಳೆ ನನ್ನ ಗಂಡ ಗುರುಲಿಂಗಯ್ಯ ರವರು ಯಾವುದೊ ಕಾಯಿಲೆಯಿಂದ 2015ನೇ ಸಾಲಿನಲ್ಲಿ ಮೃತಪಟ್ಟಿರುತ್ತಾನೆ ನಾನು ಬಾಡಿಗೆಯಿಂದ ಇದ್ದ ಮನೆಯಲ್ಲಿ ರಮೇಶ ಚಿಚಕೊಡಿ ಇವರು ಕೂಡ ಅದೇ ಮನೆಯಲ್ಲಿ ಬಾಡಿಗೆಯಿಂದ ಇದ್ದರು ಆಗ ರಮೇಶ ಇತನು ಪರಿಚಯವಾಗಿದ್ದು ಇರುತ್ತದೆ ಅಲ್ಲಿಂದ ನಾನು ಬೇರೆ ಕಡೆ ಮನೆ ಬಾಡಿಗೆ ಪಡೆದುಕೊಂಡು ನನ್ನ ಮಗಳೊಂದಿಗೆ ವಾಸವಿದ್ದು ರಮೇಶ ಇವನು ದಿನಾಲು ನಮ್ಮ ಮನೆಗೆ ಬಂದು ಹೊಗುತ್ತಿದ್ದನು ಅವನು ನನ್ನ ಜೊತೆಯಲ್ಲಿ ಇದ್ದು ನನಗೆ ಪ್ರತಿಯಿಂದ ನೋಡಿಕೊಳ್ಳುತ್ತಿದ್ದನು ನಾನು ಯಾವಗಲು ಬೇರೆ ಯಾರನ್ನು ಮದುವೆ ಆಗುವದಿಲ್ಲ ನಿನ್ನ ಜೊತೆಯಲ್ಲಿಯೇ ಇರುತ್ತೆನೆ ಅಂತಾ ಹೇಳಿ ಇಲ್ಲಿಯವರೆಗೆ ನನ್ನ ಜೊತೆಯಲ್ಲಿ ಇದ್ದನು ನಾನು ಕೂಡ ಅವನಿಗೆ ನಂಬಿ ಅವನು ಜೊತೆಯಲ್ಲಿ ಸ್ನೇಹ ದಿಂದ ವರ್ತಿಸುತ್ತಿದ್ದೆ ದಿಃ 31/05/15 ರಂದು ರಮೇಶ ಇತನು ನಮ್ಮ ಮನೆಗೆ ಬಂದು ನಾನು ಮತ್ತು ನನ್ನ ತಾಯಿ ಒತ್ತಾಯ ದಿಂದ ದಿಃ 12/06/15 ರಂದು ಮದುವೆ ಮಾಡಿಕೊಳ್ಳುತ್ತಿದ್ದೆನೆ ಅಂತಾ ತಿಳಿಸಿದಾಗ ನಾನು ಅವನಿಗೆ ಹೇಳಿದ್ದೆನೆಂದರೆ ನೀನು ಯಾರನ್ನು ಮದುವೆ ಮಾಡಿಕೊಳ್ಳುವದಿಲ್ಲವೆಂದು ನನ್ನ ಜೊತೆಯಲ್ಲಿ ಪ್ರಿತಿಸಿಕೊಂಡು ಇರುತ್ತಿದ್ದಿ ಈಗ ಬೇರೆ ಕಡೆ ಏಕೆ ಮದುವೆ ಮಾಡಿಕೊಳ್ಳುತ್ತಿರಿವೆ ಎಂದು ನಾನು ಹೇಳಿದ್ದು ದಿಃ 09/06/15 ರಂದು ಮಧ್ಯಾಹ್ನ 01-00 ಗಂಟೆ ಸುಮಾರಿಗೆ ರಮೇಶ ನಮ್ಮ ಮನೆಗೆ ಬಂದಿದ್ದು ಅವನ ಮದುವೆ ಸಂಬಂಧ ನಾವಿಬ್ಬರು ತಕರಾರು ಮಾಡುತ್ತಿದ್ದು ಆಗ ರಮೇಶ ತಾಯಿ ಲಲೀತಾಬಾಯಿ ಇತನ ಅಣ್ಣ ಯೋಗೇಶ ಬಂದು ನನಗೆ ಯಳೆದಾಡಿ ಅವಾಚ್ಯವಾಗಿ ಬೈದು ಬೆನ್ನಿನ ಮೇಲೆ ಹೊಟ್ಟೆಯ ಮೇಲೆ ಹೊಡೆಬಡೆ ಮಾಡಿರುತ್ತಾರೆ ರಮೇಶ ಕೂಡ ನನಗೆ ಕಾಲಿನಿಂದ ಹೊಟ್ಟೆಗೆ ವದ್ದು ನನ್ನ ಎಡಗೈ ತೊರಬೆರಳನ್ನು ಒತ್ತಿ ಹಿಡಿದು ತಿರುವಿಸಿ ಗುಪ್ತಗಾಯ ಮಾಡಿರುತ್ತಾನೆ ರಮೇಶ ಇತನು ನನ್ನ ಜೊತೆ ಪ್ರೀತಿಸಿಕೊಂಡು ಈಗ ನನ್ನ ಮರ್ಯದೆ ಹಾಳು ಮಾಡುತ್ತಿದ್ದಾನೆ ಅಲ್ಲದೆ ಇಂದು ದಿಃ 10/06/15 ರಂದು ಬೆಳಗ್ಗೆ 07-00 ಗಂಟೆ ಸುಮಾರಿಗೆ ಒಬ್ಬ ಸಣ್ಣ ಹುಡುಗ ನಮ್ಮ ಮನೆಗೆ ಬಂದು ರಮೇಶ ಅಣ್ಣ ನಿಮಗೆ ಅವರ ಮನೆಗೆ ಕರೆದಿದ್ದಾನೆ ಎಂದು ಹೇಳಿ ಹೊದನು ಆಗ ನಾನು ಏನಾದರು ಕೆಲಸ ಇರಬಹುದು ಅಂತಾ 08-00 ಗಂಟೆಗೆ ಅವರ ಮನೆಗೆ ಹೋಗಿದ್ದು ಅಲ್ಲಿ ರಮೇಶ ಇವನ ತಾಯಿ ಲಲಿತಾಬಾಯಿ ಅವರ ಅಣ್ಣ ಯೇಗೇಶ ಇವರು ಒಮ್ಮಲೆ ಅವಾಚ್ಯ ಶಬ್ದಗಳಿಂದ ಬೈಯುತ್ತ ಲಲಿತಾಬಾಯಿ ಕೈಯಿಂದ ಕಾಲಿನಿಂದ ಒಂದು ಬೀದರ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಎರಡು ಕಾಲಿನ ಮೇಲೆ ಎರಡು ಕೈ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಯೋಗೇಶ ಇವನು ಅವಾಚ್ಯ ಶಬ್ದಗಳಿಂದ ಬೈದು ನನ್ನ ಓಡನಿಯನ್ನು ಜಗ್ಗಡಿ ಅಲ್ಲಿದೆ ಕೂದಲು ಹಿಡಿದು ಯಳೆದಾಡಿರುತ್ತಾನೆ ಮತ್ತು ಲಲಿತಾಬಾಯಿ ಗುಪ್ತ ಜಾಗದೆ ಮೇಲೆ ಕಾಲಿನಿಂದ ವದ್ದಿರುತ್ತಾಳೆ ನನ್ನ ಕೊರಳಲ್ಲಿದ್ದ 20 ಗ್ರಾಂ ಬಂಗಾರದ ಚೈನ್ ಲಲಿತಾಯಿ ಇವಳು ತೆಗೆದುಕೊಂಡು ಅವಳ ಕೊರಳಲ್ಲಿ ಹಾಕಿಕೊಂಡಿರುತ್ತಾಳೆ ನನ್ನ ಬ್ಯಾಗನಲ್ಲಿ ಇದ್ದ ಫೋಟುಗಳು ಮತ್ತು ಇತರೆ ಕಾಗದ ಪತ್ರಗಳು ತೆಗೆದುಕೊಂಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalaburagi District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ದಿನಾಂಕ 10/06/2015 ರಂದು ಮಧ್ಯಾನ್ಹ  ನನ್ನ ಗಂಡನು ಮನೆಗೆ ಬಂದು ಊಟ ಮಾಡುತ್ತಿದ್ದನು. ಅದೇ ಸಮಯಕ್ಕೆ ನಮ್ಮ ಓಣಿಯ ಇಲಿಯಾಸ ತಂದೆ ಮಹೆಬೂಬಮಿಯ ಸಾ:ಮೋಮಿನಪುರ ಸೇಡಂ ಈತನು ಬಂದು ಮನೆ ಹೊರಗೆ ನಿಂತು ನನ್ನ ಗಂಡನ ಹೆಸರು ತೆಗೆದುಕೊಂಡು ಕರೆದನು. ನನ್ನ ಗಂಡನು ಊಟ ಬಿಟ್ಟು ಬಾಗಿಲಿನಲ್ಲಿ ನಿಂತು ನೋಡಿ ಇಲಿಯಾಸ ತನ್ನ ಹಣ ಕೇಳಲು ಬಂದಿರುತ್ತಾನೆ ಅಂತಾ ನನಗೆ ಹೇಳಿ ಕೈತೊಳೆದುಕೊಂಡು ಮನೆ ಹೊರಗೆ ಹೋದನು. ಮನೆಯ ಹೊರಗೆ ಸ್ವಲ್ಪ ಮುಂದೆ ಇರುವ ಲಾಲೇ ಹೈದರ ಆಶರಖಾನ ಮುಂದೆ ರೋಡಿನ ಮೇಲೆ ಸದರಿ ಇಲಿಯಾಸ ತಂದೆ ಮಹೆಬೂಬಮಿಯ ಈತನು ನನ್ನ ಗಂಡನ ಜೊತೆಗೆ ಬಾಯಿ ಮಾಡುವ ಮತ್ತು ಚೀರುವ ಸಪ್ಪಳ ಕೇಳಿ ನಾನು ಮತ್ತು ನನ್ನ ಮಕ್ಕಳು ಮನೆ ಹೊರಗೆ ಬಂದು ನಿಂತು ನೋಡಲಾಗಿ ಸದರಿ ಇಲಿಯಾಸ ಈತನು ನನ್ನ ಗಂಡನಿಗೆ ಕೈಗಡ ತೆಗೆದುಕೊಂಡ ಹಣ ಕೊಡುವಂತೆ ಮಾಕೇ ಲೌಡೇ ಮೇರೆ ಪೈಸೆ ದೇ ನೈತೋ ತೇರೆ ಖಲಾಸ ಕರತೂಂ  ಅಂತಾ ನನ್ನ ಗಂಡನ ಅಂಗಿ ಹಿಡಿದು ಹಿಗ್ಗಾ ಮುಗ್ಗಾ ಮಾಡಿ ಹೊಟ್ಟೆಗೆ ಎದೆಗೆ ಕೈ ಮುಷ್ಥಿ ಮಾಡಿ ಹೊಡೆಯ ಹತ್ತಿದ್ದನು. ಆಗ ನಾನು ಅಲ್ಲದೇ ನನ್ನ ಮೈದುನನಾದ ಯಾಸೀನ ತಂದೆ ಶೇಖ ಮಕಬೂಲ ಅಹ್ಮದ ಇಬ್ಬರೂ ಕೂಡಿ ನನ್ನ ಗಂಡನಿಗೆ ಇಲಿಯಾಸನಿಂದ ಬಿಡಿಸಿಕೊಳ್ಳುವಷ್ಟರಲ್ಲಿಯೇ ಇಲಿಯಾಸ್ ಈತನು ನನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ಜೋರಾಗಿ ಎಡಗಡೆ ಕಪಾಳಕ್ಕೆ ಹೊಡೆದಾಗ ನನ್ನ ಗಂಡನು ಒಮ್ಮೆಲೆ ಚಕ್ಕರ ಬಂದು ರೋಡಿನ ಮೇಲೆ ಬಿದ್ದು ಬಿಕ್ಕುತ್ತಿದ್ದನು. ಇದನ್ನು ನೋಡಿ ಇಲಿಯಾಸ ಈತನು ಅಲ್ಲಿಂದ ಓಡಿ ಹೋದನು. ಆಗ ನಾನು ಮತ್ತು ನನ್ನ ಮೈದುನನಾದ ಯಾಸಿನ ಇಬ್ಬರೂ ಕೂಡಿ ನನ್ನ ಗಂಡನ ಬಾಯಿಯಲ್ಲಿ ಸ್ವಲ್ಪ ನೀರು ಹಾಕಿದ್ದು ಅವನು ಕುಡಿಯಲಿಲ್ಲ. ನಂತರ ತಕ್ಷಣ ಒಂದು ಅಟೋದಲ್ಲಿ ಹಾಕಿಕೊಂಡು ಸೇಡಂ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ತಂದು ಸೇರಿಕೆ ಮಾಡಿದಾಗ ಕರ್ತವ್ಯ ನಿರತ ವೈದ್ಯಾಧಿಕಾರಿಗಳು ನನ್ನ ಗಂಡನು ಶೇಖ ಮಹೆಬೂಬ ಈತನು ಮೃತಪಟ್ಟಿರುತ್ತಾನೆ ಅಂತಾ ತಿಸಿರುತ್ತಾರೆ ಅಂತಾ ಶ್ರೀಮತಿ ರಿಹಾನಾಬೇಗಂ ಗಂಡ ಶೇಖ ಮಹಿಬೂಬ ಸಾ : ಮೊಮಿನಪೂರ ಸೇಡಂ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಲತ್ಕಾರ ಮಾಡಿದ ಪ್ರಕರಣ :
ಮಾಡಬೂಳ ಠಾಣೆ : ಈಗ್ಗೆ  5-6 ತಿಂಗಳು ಹಿಂದೆ ಕುಮಾರಿ ಇವಳು ತಮ್ಮ ಗ್ರಾಮದ ರಾಜು ಮಂಗಲಗಿ ಇವರ ಹೊಲಕ್ಕೆ ತೊಗರಿ ಬಡೆಯಲು ಕೂಲಿ ಕೆಲಸಕ್ಕೆ ಹೋಗಿದ್ದು ಮದ್ಯಾಹ್ನ 12 ಗಂಟೆ ಸುಮಾರಿಗೆ ಹೋದಾಗ ನನಗೆ ಪರಿಚಯದ ಲಕ್ಷ್ಮಣ ತಂದೆ ಗೋವಿಂದ ಬಂಡಿ ವಡ್ಡರ ಅವನ ಸಂಗಡ ಚಂದ್ರಶಾ ತಂದೆ ಹಣಮಂತ ಪೂಜಾರಿ ನನ್ನ ಹತ್ತಿರ ಬಂದವರೆ ನಾನು ಹೊಲದ ಬದುವಿನ ಭಾಜು ನಾಲದಲ್ಲಿ   ಚಂದ್ರಶಾ ಪೂಜಾರಿ ಈತನು ಬಂದವನೆ ನನಗೆ ತೆಕ್ಕೆಗೆ ಹಿಡಿದು ನಾನು ಚಿರದಂತೆ ಬಾಯಿ ಒತ್ತಿ ಹಿಡಿದನು. ಆಗ ಲಕ್ಷ್ಮಣನು ಬಂದು ನನ್ನ ಮೈಮೇಲಿನ ಲಂಗಾ ಮತ್ತು ಪುಲಕಾ ಬಿಚ್ಚಿದ ಜಬರಿ ಸಂಭೋಗ ಮಾಡಿದ್ದು ನಂತರ ಚಂದ್ರಶಾ ಪೂಜಾರಿ ಸಹ ಜಬರಿ ಸಂಭೋಗ ಮಾಡಿ ಈ ವಿಷಯ ಯಾರ ಮುಂದೆ ಯಾದರು ಹೇಳಿದರೆ ನನಗೆ ಜೀವ ಸಹಿತ ಬಿಡುವುದಿಲ್ಲಾ. ಅಂತಾ ಜೀವದ ಬೆದರಿಕೆ ಹಾಕಿ ಹೋದರು. ಅದರಿಂದ ಇಲ್ಲಿಯವರೆಗೆ ತಮ್ಮ ಮುಂದೆ ತಿಳಿಸಿರುವುದಿಲ್ಲಾ ಅಂತಾ ನನ್ನ ಮುಂದೆ ಹೇಳಿರುತ್ತಾಳೆ ಅಂತಾ ಶ್ರೀ ಭೀಮರಾಯ ತಂದೆ ಸಿದ್ದಯ್ಯಾ ಬಂಡಿ ವಡ್ಡರ ಸಾ: ಇಂಗಿನಕಲ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 09.06.2015 ರಂದು ರಾತ್ರಿ ಶ್ರೀಮತಿ ಬಸಮ್ಮ ಗಂಡ ಬಸವರಾಜ ಗುಡುರ ಸಾ|| ಶಖಾಪುರ ಎಸ್.ಎ  ರವರು ತನ್ನ ಮಕ್ಕಳೋಂದಿಗೆ ನನ್ನ ಮನೆಯಲ್ಲಿದ್ದಾಗ ನಮ್ಮೂರಿನ ನಾಗಣ್ಣ ತಂದೆ ದೇವಪ್ಪ ತಳವಾರ ಈತನು ತನ್ನ ಸಂಗಡ 24 ಜನರೊಂದಿಗೆ ಗುಂಪುಕಟ್ಟಿಕೊಂಡು ಬಂದು ನಮಗೆ ಮೊನ್ನೆ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಾಗಣ್ಣನ ಸೋಸೆ ಸೋತ ವಿಷಯದ ವೈಶಮ್ಯದಿಂದ ನಮಗೆ ಅವಾಚ್ಯವಾಗಿ ಬೈದು ನನಗೆ ಸಿರೆ ಹಿಡಿದು ಎಳೆದಾಡಿ ಮಾನಭಂಗ ಮಾಡಿ ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯತ್ ಹರಿದು ಜಾನುವಾರು ಸಾವು ಪ್ರಕರಣ :
ಚೌಕ ಠಾಣೆ : ದಿನಾಂಕ 10.06.2015 ರಂದು ಶ್ರೀ ರಾಮ ತಂದೆ ರಾಣೋಜಿ ಗೌಳಿ ಸಾ:ಆದರ್ಶ ಶಾಲೆಯ ಹತ್ತಿರ ಗಂಜ ಬ್ಯಾಂಕ ಕಾಲೋನಿ ಕಲಬುರಗಿ ಇವರು ದಿನಾಂಕ 10.06.2015 ರಂದು ಬೆಳಿಗ್ಗೆ 11 ಎ.ಎಂ.ಕ್ಕೆ ನಾನು ಮನೆಯಿಂದ ಎಮ್ಮೆಗಳನ್ನು ಮೈಯಿಸಿಕೊಂಡು ಬರುವ ಕುರಿತು ಕಾಟನ ಮಾರ್ಕೇಟ ನೆಹರು ಗಂಜ ನೋವಾ ಅಂಗಡಿಯ ಮುಂದೆಗಡೆ ರಸ್ತೆಯ ಬದಿಯಿಂದ ಎಮ್ಮೆಗಳನ್ನು ಹೊಡೆದುಕೊಂಡು ಸಂತೆಯಲ್ಲಿ ನೀರು ಕುಡಿಸಲು ಹೋಗಿದ್ದು ನಾಲೆಯಲ್ಲಿ ಕರೆಂಟ ಹರಿದು ಬಂದಿದ್ದು ಗೊತ್ತಾಗದೇ ಒಮ್ಮೇಲೆ ಎರಡು ಎಮ್ಮೆಗಳು ನೀರು ಕುಡಿಯಲು ಹೋದಾಗ ಕರೆಂಟ ಹತ್ತಿ ನಾಲೆಯಲ್ಲಿ ಬಿದ್ದು ಮೃತ ಪಟ್ಟಿದ್ದು ಎರಡು ಎಮ್ಮೆಗಳಲ್ಲಿ ಒಂದು ಎಮ್ಮೆ ಅಂದಾಜು ಕಿಮ್ಮತ್ತು 80,000/- ರೂ, ಇನ್ನೊಂದು ಕೋಣದ ಅಂದಾಜು ಕಿಮ್ಮತ್ತು 40,000/- ರೂ ಹೀಗೆ ಒಟ್ಟು ಎರಡು ಸೇರಿ 1,20,000/- ರೂ ಆಗುತ್ತಿದ್ದು ಸದರಿ ಎರಡು ಎಮ್ಮೆಗಳು ನಾಲೆಯಲ್ಲಿ ನೀರು ಕುಡಿಯಲು ಹೋದಾಗ ನಾಲೆಯ ಪಕ್ಕದಲ್ಲಿರುವ ಕೆ.ಇ.ಬಿ ಕರೆಂಟು ನೀರಿನಲ್ಲಿ ಹರಿದು ಎಮ್ಮೆಗೆ ಕರೆಂಟ ಶಾರ್ಟ ಹತ್ತಿ ಸ್ಥಳದಲ್ಲಿಯೆ ಸತ್ತಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಹಾನಿಯಾದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಬಸವರಾಜ ತಂದೆ ಕಲ್ಲಪ್ಪ ಕುಂಬಾರ ಸಾ|| ಮಾಗಣಗೇರಾ ಇವರು ದಿನಾಂಕ 05-06-2015 ರಂದು ಮದ್ಯಾನ 3 ಗಂಟೆಯ ಸುಮಾರಿಗೆ ನಾನು, ನನ್ನ ಅಣ್ಣ ಈರಗಂಟೆಪ್ಪ ನನ್ನ ಅತ್ತಿಗೆಯಾದ ಶ್ರೀಮತಿ ಕಾಸಿಬಾಯಿ ಗಂಡ ಮಡಿವಾಳಪ್ಪ ಹಾಗು ಮಾವನಾದ ಸಿದ್ದಪ್ಪ ಮಲಕಪ್ಪ ಕುಂಬಾರ ನಾವೆಲ್ಲರೂ ಎಂದಿನಂತೆ ನಮ್ಮ ಕಬ್ಬಿನ ಹೊಲದಲ್ಲಿ ಬೆಳೆಗೆ ನೀರು ಬಿಡುತ್ತಿದ್ದಾಗ, ನಮ್ಮ ಹೊಲದ ಪಕ್ಕದಲ್ಲಿ ಸರ್ವೆ ನಂ 112 ಜಮೀನು ಮಳ್ಳಿ ಗ್ರಾಮದ ಶ್ರೀ ಅಬ್ದುಲ್ ಮಜೀದ ರವರ ಹೊಲ ಇರುತ್ತದೆ. ಹೊಲವನ್ನು ಭೀಮಣ್ಣ ತಂದೆ ತಮ್ಮಣ್ಣ ಕೆಂಭಾವಿ ಇತನು ಲೀಜಿಗೆ ಹಾಕಿಕೊಂಡು ಸದರಿ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದು  ಭೀಮಣ್ಣ ತಂದೆ ತಮ್ಮಣ್ಣ ಕೆಂಭಾವಿ ಹಾಗು ಇತನ ಮಗ ತಮ್ಮಣ್ಣ ತಂದೆ ಭೀಮಣ್ಣ ಇವರು  ಹೊಲದಲ್ಲಿಯ ಹತ್ತಿ ಕಟ್ಟಿಗೆ ಬೆಂಕಿ ಹಚ್ಚುತ್ತಿದ್ದರು.  ಬೆಡವೆಂದರು ಬೆಂಕಿಯನ್ನು ಹಚ್ಚಿ ಬೆಂಕಿಯು ನಮ್ಮ ಹೊಲದ ಕಬ್ಬಿಗೆ ಹತ್ತಿ ಕಬ್ಬು ಮತ್ತು ಕೃಷಿ ಬಳಕೆಯ ಪ್ಲಾಸ್ಟಿಕ್  ಪೈಪುಗಳು ಸುಟ್ಟು ಸುಮಾರು 2 ಲಕ್ಷ 20 ಸಾವಿರ ರೂಪಾಯಿಗಳಷ್ಟು ಸುಟ್ಟು ಹಾನಿಯಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.