POLICE BHAVAN KALABURAGI

POLICE BHAVAN KALABURAGI

10 December 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ಶ್ರೀ.ಪರಮೇಶ್ವರ ತಂದೆ ಗುರುಲಿಂಗಪ್ಪ ಬೇಡಜುರಗಿ ಸಾ: ಸುಲ್ತಾನಪೂರ ಗಲ್ಲಿ ಆಳಂದರವರು ರವರ ಮಗ ಶರಣಬಸಪ್ಪಾ ಇವನು ತನ್ನ ಮೋಟರ್ ಸೈಕಲ ನಂ: ಕೆ.ಎ:32 ಇ.ಹೆಚ್:2487 ರ ಮೇಲೆ ಮಾದನ ಹಿಪ್ಪರಗಾ ಗ್ರಾಮಕ್ಕೆ ಆಗಾಗ ಹೋಗಿ ಬರುವದು ಮಾಡುತ್ತಾನೆ. ದಿನಾಂಕ:09/12/2015 ರಂದು ಸಾಯಂಕಾಲ ಶರಣಬಸಪ್ಪನು ತನ್ನ ಮೋಟರ್ ಸೈಕಲ ನಂಬರ್ ಕೆ.ಎ:32 ಇ.ಹೆಚ್:2487 ಮೇಲೆ ತನ್ನ ಹೆಂಡತಿ ಶ್ರೀಮತಿ.ಸುಗಲಾಬಾಯಿ ಮಾದನ ಹಿಪ್ಪರಗಾ ಗ್ರಾಮದಲ್ಲಿದ್ದು ತನ್ನ ಹೆಂಡತಿ ಮನೆಗೆ ಹೋಗಿ ಬರುತ್ತೆನೆ ಎಂದು ಮನೆಯಿಂದ ಹೋದನು ನಂತರ 07:30 ಗಂಟೆಗೆ ನನಗೆ ನನ್ನ ಸಂಬಂಧಿಕರಾದ ಶ್ರೀ.ಧಾನಪ್ಪಾ ತಂದೆ ಶಿವಣ್ಣಾ ಭಕರೆ ಮು|| ಮಾದನ ಹಿಪ್ಪರಗಾ ಇವರು ಪೋನ್ ಮುಖಾಂತರ ತಿಳಿಸಿದೆನೆಂದರೆ ನಿಮ್ಮ ಮಗ ಶರಣಬಸಪ್ಪಾ ಇತನು ತನ್ನ ಮೋಟರ್ ಸೈಕಲ ಮೇಲೆ ಮಾದನ ಹಿಪ್ಪರಗಾ ಕಡೆಗೆ ಬರುವಾಗ ಯಾವುದೋ ವಾಹನ ಅವನ ಮೋಟರ್ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ಶರಣಬಸಪ್ಪಾನಿಗೆ ಭಾರಿ ಗಾಯವಾಗಿ ಮೃತಪಟ್ಟಿರುತ್ತಾನೆ ಎಂದು ತಿಳಿಸಿಜಮಗಾ(ಜೆ) ದಿಂದ 01 ಕೀ.ಮೀ ಅಂತರದಲ್ಲಿ ಘಟನೆ ಸಂಭವಿಸಿರುತ್ತದೆ ಅಲ್ಲಿಗೆ ಬನ್ನಿರಿ ಅಂತಾ ಹೇಳಿದಾಗ ನಾನು ಹಾಗೂ ನಮ್ಮ ಗಲ್ಲಿಯ ಜನರು ಕೂಡಿ ಜಮಗಾ(ಜೆ) ದಾಟಿ ಅಂದಾಜು 01 ಕಿ.ಮೀ ಮೇಲೆ ಮಾದನ ಹಿಪ್ಪರಗಾ ರೋಡಿನ ಕಡೆಗೆ ಹೋಗುವ ರೋಡಿಗೆ ಬಂದು ನೋಡಲಾಗಿ ನನ್ನ ಮಗನ ಶವ ಅಂಗಾತಾಗಿ ಬಿದ್ದಿದ್ದು ಅಪಘಾತದಿಂದ ಆತನ ತಲೆ ಒಡೆದು ಮೆದಳು, ಮಾಂಸ ಹೊರ ಬಂದು ಬಲಗಾಲು ಮೋಳಕಾಲು ಕೆಳಭಾಗ ಮುರಿದು ರಕ್ತ ಮಾಂಸ ಎಲಬು ಹೊರಬಂದಿದ್ದು ಅವನು ಚಲಾಯಿಸುತ್ತಿದ್ದ ವಾಹನ ಅಲ್ಲಿಯೇ ಬಿದ್ದಿದ್ದು ನನ್ನ ಮಗನಿಗೆ ಯಾವುದೋ ವಾಹನ ಚಾಲಕನು ತನ್ನ ವಾಹನ ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ನನ್ನ ಮಗನ ಮೋಟರ್ ಸೈಕಲಿಗೆ ಡಿಕ್ಕಿ ಹೊಡೆದು ವಾಹನ ಸಮೇತ ಓಡಿಸಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ದಿನಾಂಕ:09-12-2015 ರಂದು ಸಾಯಂಕಾಲ 03-45 ಗಂಟೆಗೆ ನನಗೆ ಪರಿಚಯವಿದ್ದ  ಶ್ರೀಶೈಲ್ ಗುಡಿಸಲಕರ್ ಇವರು ಫೊನ ಮಾಡಿ ನನಗೆ ತಿಳಿಸಿದ್ದೇನೆಂದರೆ, ನಿನ್ನ ತಂದೆಯವರು ಕೊಂಕನಳ್ಳಿಯಿಂದ ಸೇಡಂಕ್ಕೆ ತನ್ನ ಸ್ಕೂಟಿ ನಂ-KA32V7605 ನೇದ್ದರ ಮೇಲೆ ಹೊರಟಾಗ ಶೆಟ್ಟಿ ಹೂಡಾ ದಾಟಿ ವ್ಹೇರಹೌಸ್ ಮುಂದುಗಡೆ ಕಲಬುರಗಿ ಸೇಡಂ ರೋಡಿನ ಮೇಲೆ ಹೊರಟಾಗ ಸೇಡಂ ಕಡೆಯಿಂದ ಒಂದು ಇನೋವಾ ಕಾರ ನಂ-KA32N6360 ನೇದ್ದರ ಚಾಲಕನು ತನ್ನ ವಾಹನ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ನಿಮ್ಮ ತಂದೆಯ ಸ್ಕೂಟಿಗೆ ಅಪಘಾತಪಡಿಸಿದ್ದು, ಅವರ ಬಲಗಾಲ ತೊಡೆಯ ಸಂದಿಯಲ್ಲಿ, ಮೊಳಕಾಲಿಗೆ ಹಾಗೂ ಬಲಗಾಲ ಪಾದಕ್ಕೆ ಭಾರಿ ರಕ್ತಗಾಯವಾಗಿರುತ್ತದೆ. ಮತ್ತು ಇನ್ನೊವಾ ಕಾರ ಚಾಲಕ ಅಪಘಾತಪಡಿಸಿ ತನ್ನ ಕಾರ ನಿಲ್ಲಿಸದೇ ಅಲ್ಲಿಂದ ಓಡಿಹೋಗಿರುತ್ತಾನೆ ಅವನಿಗೆ ನೋಡಿದರೆ ನಾನು ಗುರುತಿಸುತ್ತೇನೆ ಅಂತ ಹೇಳಿದನು. ಆಗ ನಾನು ನನ್ನ ಮಗನಾದ ಮುನೀಂದ್ರ ಮತ್ತು ನನ್ನ ತಮ್ಮನಾದ ವೆಂಕಟೇಶ ಎಲ್ಲರೂ ಸ್ಥಳಕ್ಕೆ ಹೋಗಿ ನೋಡಲು ಸದರಿ ಘಟನೆ ಆಗಿದ್ದು ನಿಜವಿತ್ತು. ನಂತರ ನಮ್ಮ ತಂದೆಯವರಿಗೆ 108 ಅಂಬ್ಯೂಲೆನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಗೆ ತಂದಾಗ ಡಾಕ್ಟರ ರವರು ನಮ್ಮ ತಂದೆಗೆ ನೋಡಿ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀ ಸತೀಶ ತಂದೆ ಚಂದಪ್ಪ ಊಡಗಿ, ಸಾ:ಇಂದಿರಾನಗರ, ಸೇಡಂ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಶರಣಮ್ಮಾ ಗಂಡ ದಿ|| ಉದಯಕುಮಾರ ಶಹಾಬಾದಿ ಸಾ: ಪ್ಲಾಟ ನಂಬರ 9-13 ಮಹಾದೇವ ನಗರ ಹತ್ತಿರ ಶೇಖರೋಜಾ ಕಲಬುರಗಿ ಇವರ ಮಗ  ವಿನಯಕುಮಾರ ತಂದೆ ಉದಯಕುಮಾರ ಶಹಬಾದಿ ವಯ: 16 ವರ್ಷ ವಯಸ್ಸಿನ 8ನೇ ತರಗತಿ ಒದುತ್ತಿದ್ದು  ಇತನು ದಿನಾಂಕ 03.12.2015 ರಂದು ಬೆಳ್ಳಿಗ್ಗೆ 11.00 ಗಂಟೆಗೆ ಮನೆಯಿಂದ  ಹೊರ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ. ನಾನು ಅಲ್ಲಿ ಇಲ್ಲಿ ನಮ್ಮ ಸಂಬಂಧಿಕರ ಮತ್ತು ಪರಿಚಯಸ್ತರ ಮನೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.