POLICE BHAVAN KALABURAGI

POLICE BHAVAN KALABURAGI

06 October 2016

KALABURAGI DISTRICT REPORTED CRIMES

ವರದಕ್ಷಿಣೆ ಕಿರುಕುಳ  ಪ್ರಕರಣ:
ಅಫಜಲಪೂರ ಠಾಣೆ : ಶ್ರೀಮತಿ ಅನಸುಬಾಯಿ ಗಂ. ಸಿದ್ದಪ್ಪ  ಬೆಳ್ಳಿಕಟ್ಟಿ ಸಾ: ಹವಳಗಾ ಇವರು ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಹೇಳಿಕೆ ಫಿಯಾದಿ ಸಲ್ಲಿಸಿದ್ದೇನೆಂದರೆ ತಾನು ಮದುವೆಯಾದಗಾನಿಂದಲೊ ತನ್ನ ಗಂಡ ಹಾಗೂ ಮಾವ ಇಬದಬರಿ ಸೇರಿಕೊಂಡು ತನ್ನ ಗಂಡನಿಗೆ ಇನ್ನೊಂದು  ಮದುವೇ ಮಾಡುವ ಕುರಿತು ಕಿರುಕುಳ ನೀಡುತ್ತಿದ್ದು ಹೀಗೆ ದಿನಾಂಕ 04-10-2016 ರಂದು ತನ್ನ ಗಂಡ ಸಿದ್ದಪ್ಪ ಹಾಗೂ ಮಾವ ಮುತ್ತಪ್ಪ ಇಬ್ಬರು ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಗಂಡ ತನಗೆ ಎಳೆದು ನೆಲಕ್ಕೆ ಹಾಕಿದನು, ಮಾವನು ಕೈ ಯಿಂದ ಕಾಲಿನಿಂದ ಹೊಡೆದು ನನ್ನನ್ನು ಕೊಲೆ ಮಾಡುವ ಉದ್ದೇಶದಿಂಧ ನನ್ನ ಕ್ರಿಮಿನಾಶಕ ಔಷದಿಯನ್ನು ಬಾಯಲ್ಲಿ ಹಾಕಿ ಇಬ್ಬರು ಮನ ಬಂದಂತೆ ಹೊಡೆಯುತ್ತಿದ್ದಾಗ ಸಪ್ಪಳ ಕೇಳಿ ಬಾಜು ಹೊಲದಲ್ಲಿ ಮನೆ ಮಾಡಿಕೊಂಡು ಇದ್ದ ನ್ನ ತಾಯಿಯಾದ ಭಾಗಮ್ಮ ಇವರು ಬಂದಾಗ ಬಿಟ್ಟು ಹೋಗಿರುತ್ತಾರೆ. ನಂತರ ನ್ನ ತಮ್ಮ ಮಲ್ಲಪ್ಪ ಹಾಗೂ ತಾಯಿ ಭಾಗಮ್ಮ ಇಬ್ಬರು ಕೂಡಿಕೊಂಡು ಖಾಸಗಿ ವಾಹನದಲ್ಲಿ ಸರಕಾರಿ ದವಾಖಾನೆಗ ತೋರಿಸಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ನನ್ನ ಗಂಡ ಹಾಗೂ ಮಾವನು ವಿಷ ಕುಡಿಸಿ ಸಾಯಿಸಿ ಮಗನಿಗೆ ಇನ್ನೊಂದು ಲಗ್ನ ಮಾಡುವ ಉದ್ದೇಶ ಟ್ಟುಕೊಂಡು ಈ ರೀತಿ ಮಾಡಿದ್ದು ಇರುತ್ತದೆ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಕೊಟ್ಟ ಹೇಳಿಕೆ ಫೀರ್ಯಾಧಿ ಸಾರಾಂಶದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ :  
ಅಫಜಲಪೂರ ಠಾಣೆ: ದಿನಾಂಕ 05-10-2016 ರಂದು ಪಿಎಸ್ಐ ಅಫಜಲಪೂರ ಠಾಣೆ ರವರು ಠಾಣೆಯಲಿದ್ದಾಗ ಅಫಜಲಪೂರ ಪಟ್ಟಣದ ಅಕ್ಕಮಹಾದೇವಿ ಗುಡಿಯ ಮುಂದಿನ ಸಾರ್ವಜನಿಕ  ಖುಲ್ಲಾ ಜಾಗದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಸೊಂದಪ್ಪ ತಂದೆ ಪರಮೇಶ್ವರ ಹೊಸ್ಮನಿ ಇವರನ್ನು ಠಾಣೆಗೆ ಬರಮಾಡಿಕೊಂಡು. ದಾಳಿ ವಿಷಯ ತಿಳಿಸಿ ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿಎಸ್.ಐ ಅಫಜಲಪೂರ ಠಾಣೆ ಮತ್ತು ಠಾಣೆಯ ಸಿಬ್ಬಂದಿ 1) ಚಂದ್ರಕಾಂತ ಸಿಹೆಸಿ-449, 2) ಅರವಿಂದ ಸಿಪಿಸಿ-501 3)ಶರಣಪ್ಪ ಸಿಪಿಸಿ-881 4) ಪಂಡಿತ ಸಿಪಿಸಿ-1119 ರವರನ್ನು ಸಂಗಡ ಕರೆದುಕೊಂಡು ಖಾಸಗಿ ವಾಹನದಲ್ಲಿ ಪಂಚರು ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಯೊಂದಿಗೆ ಹೋಗಿ, ಅಕ್ಕಮಹಾದೇವಿ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು  ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿ ಜೂಜಾಡುತಿದ್ದ 5 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1)ಬಸವರಾಜ ತಂದೆ ಬಾಬು ಕೋಳಕೂರ ಸಾ||ಅಕ್ಕಮಹಾದೇವಿ ನಗರ ಅಫಜಲಪೂರ 2)ಶಿವಾನಂದ ತಂದೆ ಮಾಹದೇವ ಹೆಗ್ಗಿ ಸಾ||ಅಕ್ಕಮಾಹದೇವಿ ನಗರ ಅಫಜಲಪೂರ 3)ಮಳೇಂದ್ರ ತಂದೆ ಭೀಮರಾಯ ಚಿಂಚೋಳಿ ಸಾ||ಎಮ್.ಜಿ ನಗರ ಅಫಜಲಪೂರ, 4)ಮಹಿಬೂಬ ತಂದೆ ದಾವಲಸಾಬ ಮಾಡ್ಯಾಳ ಸಾ||ಲಿಂಬಿತೋಟ ಅಫಜಲಪೂರ  5)ಶಿವಾನಂದ ತಂದೆ ಪರಸಪ್ಪ ಕುಡಕಿ ಸಾ||ಜೈಭೀಮ ನಗರ ಅಫಜಲಪೂರ ಅಂತ ತಿಳಿಸಿದ್ದು ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ ಒಟ್ಟು  13580/-ರೂ ನಗದು ಹಣ  ಮತ್ತು 52 ಇಸ್ಪೆಟ ಎಲೆಗಳು ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜೂಜಾಟ ಆಡುತ್ತಿದ್ದ 5 ಜನರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.