POLICE BHAVAN KALABURAGI

POLICE BHAVAN KALABURAGI

30 October 2017

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 29-10-2017 ರಂದು ಶಿವಪೂರ ಬನ್ನಟ್ಟಿ ಗ್ರಾಮದಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ  ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷಿ ಗುಡಿ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು John Deere ಕಂಪನಿಯದಿದ್ದು ಸದರಿ ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿತ್ತು ಮತ್ತು ಅದರ Model 5050E V5 Chassis No 1PY5050EKHA017828  Engine NO PY3029T259646 ಅಂತಾ ಇದ್ದು ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ  ಇರಬಹುದು. ಸದರಿ ಟ್ರ್ಯಾಕ್ಟರದಲಿದ್ದ ಮರಳಿನ ಅ.ಕಿ 1800/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 29-10-2017 ರಂದು ಶ್ರೀ  ಎಮ್.ಡಿ ಸೈಯದ ಅನಾಸ ಮತ್ತು ಮೃತ ಸೊಹೆಬ ಅಹ್ಮದ ಇವರು ಎಮ್.ಡಿ ನವಾಜಖಾನ ಇತನು ಚಲಾಯಿಸುತ್ತೀರುವ ಕಾರ ನಂಬರ ಕೆಎ-36-ಎನ್-1408 ನೇದ್ದರಲ್ಲಿ ಕುಳಿತು ಹೋಗುವಾಗ ಎಮ್.ಡಿ ನವಾಜ್ ಖಾನ ಇತನು ಕಾರನ್ನು ಸೇಡಂ ರಿಂಗ ರೋಡ ಕಡೆಯಿಂದ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಹೋಗಿ ವಿರೇಶ ನಗರ ಕ್ರಾಸ ಹತ್ತೀರ ರೋಡ ಪಕ್ಕದಲ್ಲಿರುವ ವಿದ್ಯೂತ ದೀಪದ ಕಂಬಕ್ಕೆ ಡಿಕ್ಕಿಪಡಿಸಿ ಹಾಗೆ ಕಾರನ್ನು ರೋಡ ಪಕ್ಕದಲ್ಲಿರುವ ನೀರಿನ ನಾಲೆಯಲ್ಲಿ ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ ಸೊಹೆಬ ಅಹ್ಮದ ಇತನು ಭಾರಿ ಗಾಯ ಹೊಂದಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸುಲಿಗೆ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ವೀರಭದ್ರ ತಂದೆ ಬಸವರಾಜ ರೆಡ್ಡಿ ಸಾ: ಮನೆ ನಂ. 45 ದೇವ ಸೂಗುರ ತಾ:ಜಿ: ರಾಯಚೂರ ಹಾ.ವ: ವೀರಶೈವ ಹಾಸ್ಟೇಲ ಸೇಡಂ ರೋಡ ಕಲಬುರಗಿ ರವರು ದಿನಾಂಕ 28-10-2017  ರಂದು 7:30 ಪಿ.ಎಂ. ಸುಮಾರಿಗೆ ಏಶಿಯನ್ ಮಾಲ ಹತ್ತಿರ ಮೋಬೈಲನಲ್ಲಿ ಮಾತನಾಡುತ್ತಾ ನಿಂತಿರುವಾಗ ಒಬ್ಬ ಹುಡುಗ ನನ್ನ ಹತ್ತಿರ ಬಂದು ನನ್ನ ಕೈಯಲ್ಲಿಯ ಮೋಬೈಲ್ ಕಸಿದುಕೊಂಡು ಸಿದ್ದಿಬಾಷಾ ದರ್ಗಾ ಕಡೆಗೆ ವೇಗವಾಗಿ ಓಡಿಹೋದನು ನಾನು ಕಳ್ಳ ಕಳ್ಳ ಅಂತಾ ಒದರುತ್ತಾ ಬೆನ್ನು ಹತ್ತಿದ್ದು ಅವನು ನನ್ನ ಕೈಗೆ ಸಿಗದೇ ತಪ್ಪಿಸಿಕೊಂಡು ಓಡಿಹೋದನು ಆತನು ಕಸಿದುಕೊಂಡ ಹೊದ ಮೋಬೈಲ್  ಒನ್ ಪ್ಲಸ್ -3 (1+3) ಮೋಬೈಲ್  ಐಎಮ್.ಇ.ಐ ನಂ. 862563031407657, 862563031407640 ಅ.ಕಿ 27,999/- ರೂ ಇರುತ್ತದೆ. ಕಾರಣ ನಾನು ಏಶಿಯನ್ ಮಾಲ ಹತ್ತಿರ ಮೋಬೈಲನಲ್ಲಿ ಮಾತನಾಡುತ್ತಾ ನಿಂತಿರುವಾಗ ನನ್ನ ಕೈಯಲ್ಲಿಯ ಮೋಬೈಲ ಕಸಿದುಕೊಂಡು ತಪ್ಪಿಸಿಕೊಂಡು ಹೋದವನ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಕಾಣೆಯಾದ ಪ್ರಕರಣ :
ಸೇಡಂ ಠಾಣೆ : ಶ್ರೀ ಶರಣಪ್ಪ ಗುಡುಸುಲಕರ ಇವರ ಹೆಂಡತಿಯಾದ ಶ್ರೀದೇವಿ ಗಂಡ ಶರಣಪ್ಪ ಗುಡುಸುಲಕರ ವಯ : 33 ವರ್ಷ ಇವಳು ದಿನಾಂಕ : 24-10-2017 ರಂದು ಸಾಯಂಕಾಲ 6 ಗಂಟೆಗೆ ಅಂಗಡಿಗೆ ಹೊಗಿ ಬರುತ್ತೆನೆಂದು ಹೇಳಿ ಮನೆಯಿಂದ ಹೊದವಳು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ ಏಲ್ಲೊ ಹೊಗಿ ಕಾಣೆಯಾಗಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

29 October 2017

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರಾಚಮ್ಮ ಹಿರೇಮಠ ಸಾ: ಆನೂರ ಹಾ:ವ ಜೆ.ಆರ್ ನಗರ ಖಾದ್ರಿ ಚೌಕ ಕಲಬುರಗಿ ರವರ ಗಂಡನವರು ಸುಮಾರು 05 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ನನ್ನ ಮಕ್ಕಳೆಲ್ಲರ ಮದುವೆ ಆಗಿರುತ್ತದೆ. ನನ್ನ ಮಗಳು ಚಂದ್ರಕಲಾ ಎಂಬಾಕೆಗೆ ದಿನಾಂಕ 23-05-2010 ರಂದು ಬಡದಾಳ ಗ್ರಾಮದ ವೈಜನಾಥ ತಂದೆ ಮಡಿವಾಳಯ್ಯ ವಿರಂತಮಠ (ವಿರಕ್ತಮಠ) ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ನನ್ನ ಮಗಳ ಮದುವೆಯು ಅವಳ ಗಂಡನ ಸೋದರ ಮಾವಂದಿರಾದ ಮಹಾಂತಯ್ಯ ಹಾಗೂ ಪುತ್ರಯ್ಯ ರವರ ಮದ್ಯಸ್ತಿಕೆಯಲ್ಲಿ ಅವರ ಮನೆಯ ಮುಂದೆ ಆಗಿರುತ್ತದೆ. ಇಲ್ಲಿಯವರೆಗೆ ನನ್ನ ಮಗಳಿಗೆ ಮಕ್ಕಳು ಆಗಿರುವುದಿಲ್ಲ. ನನ್ನ ಮಗಳ ಗಂಡ ವೈಜನಾಥನು ಅಫಜಲಪೂರದಲ್ಲಿಯೆ  ಟೆಂಟ ಹೊಡೆಯುವ ಕೂಲಿ ಕೆಲಸ ಮಾಡಿಕೊಂಡು ಶಿವಪ್ಪ ಕನ್ನೋಳ್ಳಿ ಎಂಬುವವರ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತಾನೆ.   ನನ್ನ ಮಗಳಿಗೆ ಮದುವೆಯಾಗಿ ಸುಮಾರು 7 ½ ವರ್ಷ ಕಳೆದರು ಮಕ್ಕಳಾಗದ ಕಾರಣ ನನ್ನ ಮಗಳ ಗಂಡ ವೈಜನಾಥ ಮತ್ತು ಆತನ ತಾಯಿ ಬಸಮ್ಮ ರವರು ದಿನಾಲು ಮಕ್ಕಳಾಗಿರುವುದಿಲ್ಲ ಅಂತ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ. ಈಗ ಸುಮಾರು 03 ತಿಂಗಳ ಹಿಂದೆ ನನ್ನ ಮಗಳ ಗಂಡ ಮತ್ತು ಅತ್ತೆ ಹೊಡೆ ಬಡೆ ಮಾಡಿದ್ದರಿಂದ ನನ್ನ ಮಗ ಮತ್ತು ನಮ್ಮ ಸಂಭಂದಿಕರಾದ ಈರಯ್ಯಸ್ವಾಮಿ ರವರು ಬಂದು ನನ್ನ ಮಗಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಈಗ ಒಂದು ವಾರದ ಹಿಂದೆ ನನ್ನ ಮಗಳ ಗಂಡ ವೈಜನಾಥನು ನಮ್ಮ ಮನೆಗೆ ಬಂದು ಇನ್ನು ಮುಂದೆ ನಾನು ನನ್ನ ಹೆಂಡತಿಗೆ ಯಾವುದೆ ರೀತಿ ಕಿರುಕುಳ ಕೊಡುವುದಿಲ್ಲ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಹೇಳಿದ್ದರಿಂದ ನಾವು ನಮ್ಮ ಮಗಳಿಗೆ ಕಳುಹಿಸಿ ಕೊಟ್ಟಿರುತ್ತೇವೆ.  ದಿನಾಂಕ 27-10-2017 ರಂದು ಬೆಳಿಗ್ಗೆ ಅಫಜಲಪೂರದ ರಾಜುಸ್ವಾಮಿ ಎಂಬುವವರು ನನಗೆ ಪೋನ ಮೂಲಕ ತಿಳಿಸಿದ್ದೆನೆಂದರೆ, ನಿಮ್ಮ ಮಗಳಾದ ಚಂದ್ರಕಲಾಳಿಗೆ ಅವಳ ಗಂಡ ವೈಜನಾಥನು ಮದ್ಯರಾತ್ರಿ 01:00 ಗಂಟೆಯ ಸುಮಾರಿಗೆ ಅವರು ಬಾಡಿಗೆಯಿಂದ ವಾಸವಾಗಿದ್ದ ಮನೆಯಲ್ಲಿಯೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟ ಕೈಯಿಂದ ಹೊಡೆದು ಕುತ್ತಿಗೆ ಹಿಚುಕಿ  ಕೊಲೆ ಮಾಡಿರುತ್ತಾನೆ ಅಂತಾ ತಿಳಿಸಿರುತ್ತಾರೆ. ವಿಷಯ ಗೊತ್ತಾದ ನಂತರ ಬೆಳಿಗ್ಗೆ 09:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ವಿರಾಜ, ಮೈದುನರಾದ ವೀರಯ್ಯಸ್ವಾಮಿ ಹಾಗೂ ನಮ್ಮ ಸಂಭಂದಿಕರಾದ ಈರಯ್ಯಸ್ವಾಮಿ, ಲಲಿತಾಬಾಯಿ, ಮಹಾದೇವಿ, ವಿಶ್ವನಾಥ, ಸಿದ್ದಯ್ಯ ಮತ್ತಿತರರು ಕೂಡಿ ಅಫಜಲಪೂರಕ್ಕೆ ಬಂದು, ಶಿವಪ್ಪ ಕನ್ನೋಳ್ಳಿ ಎಂಬುವವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದ ಕೋಣೆಯಲ್ಲಿ ನನ್ನ ಮಗಳ ಶವ ನೋಡಿರುತ್ತೇವೆ.ನನ್ನ ಮಗಳು ಚಂದ್ರಕಲಾಳ ಕೊಲೆ ಮಾಡಲು ಕಾರಣವೆನೆಂದರೆ, ಮದುವೆಯಾಗಿ 7 ½ ಕಳೆದರು ಮಕ್ಕಳಾಗದ ಕಾರಣ, ನನ್ನ ಮಗಳ ಗಂಡನಾದ ವೈಜನಾಥ ವಿರಂತಮಠ (ವಿರಕ್ತಮಠ), ಮತ್ತು ಆತನ ತಾಯಿ ಬಸಮ್ಮ ವಿರಂತಮಠ (ವಿರಕ್ತಮಠ) ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟ ಬಸಮ್ಮ ವೈಜನಾಥನಿಗೆ ಈ ರಂಡೆಗೆ ಕೊಲೆ ಮಾಡು ನಾನು ನಿನಗೆ ಮತ್ತೊಂದು ಮದುವೆ ಮಾಡುತ್ತೇನೆ ಅಂತ ಪ್ರಚೋದನೆ ಮಾಡಿದ್ದರಿಂದ, ದಿನಾಂಕ 27-10-2017 ರಂದು ಮದ್ಯರಾತ್ರಿ 01:00 ಗಂಟೆಯ ಸುಮಾರಿಗೆ ನನ್ನ ಮಗಳೊಂದಿಗೆ ಆಕೆಯ ಗಂಡ ವೈಜನಾಥನು ಜಗಳ ಮಾಡಿ ಕೈಯಿಂದ ಹೊಡೆದು ಕುತ್ತಿಗೆ ಹಿಚುಕಿ ಕೊಲೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು
ಕಮಲಾಪೂರ ಠಾಣೆ : ಶ್ರೀಮತಿ  ಲಕ್ಷ್ಮೀ ಗಂಡ ಉಮೇಶ ಮಾಳಗೆ ಸಾ:ಭೂಂಯ್ಯಾರ ತಾ:ಜಿ:ಕಲಬುರಗಿ ಇವರು ಭಾವನಾದ ಮಲ್ಲಿಕಾರ್ಜುನ ಮಾಳಗೆ ಇವರ ಹತ್ತೀರ ಫ್ಯಾಶನ ಪ್ರೋ ಮೋಟರ ಸೈಕಲ ನಂ.ಕೆಎ.32 ಇಎಮ್.4928 ನೇದ್ದು ಇದ್ದು. ನನ್ನ ಭಾವನಿಗೆ ಟೆಂಗಳಿ ಗ್ರಾಮದ ಬ್ರಹ್ಮಾನಂದ ತಂದೆ ಭೀಮರಾವ ಇವರ ಪರಿಚಯ ಇದ್ದು. ಅವರು ದಿನಾಂಕ:24.10.2017 ರಂದು ಅವರ ಕೆಲಸದ ಸಲುವಾಗಿ ನಮ್ಮೂರಿಗೆ ಬಂದು ನನ್ನ ಭಾವನವರ ಮೇಲ್ಕಂಡ ಮೋಟರ ಸೈಕಲನ್ನು ತೆಗೆದುಕೊಂಡು ಹೋಗಿರುತ್ತಾರೆ. ಹಿಗಿದ್ದು ದಿನಾಂಕ:25.10.2017 ರಂದು ಬೆಳಿಗ್ಗೆ ನಮ್ಮ ತಾಯಿಯವರಿಗೆ ಆರಾಮ ಇಲ್ಲದ ಕಾರಣ ನಾನು ನನ್ನ ಮಗನಾದ ಆದಿತ್ಯ ಇವನಿಗೆ ಸಂಗಡ ಕರೆದುಕೊಂಡು ನಮ್ಮೂರಿನಿಂದ ನನ್ನ ತವರೂರಾದ ಧನ್ನೂರ ಗ್ರಾಮಕ್ಕೆ ಹೋಗುವ ಕುರಿತು ಕಮಲಾಪೂರ ಬಸ್ ಸ್ಟ್ಯಾಂಡಗೆ ಬಂದು ನಿಂತಾಗ ಮುಂಜಾನೆ 10.45 ಗಂಟೆಯ ಸೂಮಾರಿಗೆ ನನ್ನ ಭಾವ ಮಲ್ಲಿಕಾರ್ಜುನ ಇವರ ಮೇಲ್ಕಂಡ ಮೋಟರ ಸೈಕಲನ್ನು ಬ್ರಹ್ಮಾನಂದ ಈತನು ನಡೆಸಿಕೊಂಡು ಬಸ ನಿಲ್ದಾಣದ ಹತ್ತೀರ ಬಂದಾಗ ನಾನು ಬ್ರಹ್ಮಾನಂದ ಇವರ ಹತ್ತೀರ ಹೋಗಿ ನೀವು ಎಲ್ಲಿಗೆ ಹೋಗುತ್ತಿದ್ದಿರಿ ಅಂತಾ ಕೇಳಲು ಅವರು ಹುಮನಾಬಾದಗೆ ಹೋಗುತ್ತಿರುವುದಾಗ ತಿಳಿಸಿದ್ದು. ಆಗ ನಾನು ನನ್ನ ತವರೂರಾದ ಧನ್ನೂರಗೆ ಹೋಗುತ್ತಿದ್ದು. ನನಗೆ ಮತ್ತು ನನ್ನ ಮಗನಿಗೆ ಹಳ್ಳಿಖೇಡವರೆಗೆ ಬಿಟ್ಟು ಹೋಗುವಂತೆ ಕೇಳಿದಾಗ ಅವರು ಅದಕ್ಕೆ ಒಪ್ಪಿ ನನಗೆ ಹಾಗೂ ನನ್ನ ಮಗ ಆದಿತ್ಯ ಇಬ್ಬರಿಗೂ ಮೇಲ್ಕಂಡ ಮೋ.ಸೈಕಲ ಮೇಲೆ ಕೂಡಿಸಿಕೊಂಡು ಹೋರಟಿದ್ದು. ಬ್ರಹ್ಮಾನಂದ ಈತನು ತಾನು ನಡೆಸುತ್ತಿದ್ದ ಮೋಟರ ಸೈಕಲನ್ನು ಅತಿವೇಗದಿಂದ ಅಡ್ಡಾತಿಡ್ಡಿಯಾಗಿ ನಡೆಸುತ್ತಿದ್ದಾಗ ನಾನು ಅವರಿಗೆ ಮೋ.ಸೈಕಲನ್ನು ನಿಧಾನವಾಗಿ ನಡೆಸಲು ಹೇಳಿದರು ಕೂಡಾ ಅವರು ಹಾಗೆ ನಡೆಸಿಕೊಂಡು ಹೋಗುತ್ತಿದ್ದು. ನಾವು ಕುಳಿತು ಹೋಗುತ್ತಿದ್ದ ಮೋಟರಸೈಕಲ ಮುಂಜಾನೆ 11.00 ಗಂಟೆಯ ಸೂಮಾರಿಗೆ ಕಲಬುರಗಿ ಹುಮನಾಬಾದ ಹೆದ್ದಾರಿ ಕಿಣ್ಣಿಸಡಕ ಗ್ರಾಮದ ಅಂಬೇಡ್ಕರ ಮುರ್ತಿಯ ಹತ್ತೀರದಿಂದ ಹೋಗುತ್ತಿದ್ದಾಗ ಬ್ರಹ್ಮಾನಂದ ಈತನು ತಾನು ನಡೆಸುತ್ತಿದ್ದ ಮೇಲ್ಕಂಡ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಿಲೆ ಸ್ಕೀಡಾಗಿ ಮೋಟರ ಸೈಕಲ ಸಮೇತ ಕೆಡವಿದ್ದು. ನಮಗೆ ಅಪಘಾತವಾದದನ್ನು ನೋಡಿ ಅಲ್ಲೆ ಸ್ಥಳದಲ್ಲಿದ್ದ ನಮಗೆ ಪರಿಚಯದವರಾದ ಮಹೇಶ ಇವರು ಬಂದು ನಮಗೆ ಎಬ್ಬಿಸಿ ನೋಡಲು ನನಗೆ ದವಾಖಾನೆಗೆ ತೋರಿಸುವಂತ ಯಾವುದೇ ಗಾಯಗಳು ಆಗಿರಲಿಲ್ಲ. ನಂತರ ನನ್ನ ಮಗ ಆದಿತ್ಯನಿಗೆ ನೋಡಲು ಅವನ ಬಲಕಾಲ ತೋಡೆಗೆ ಭಾರಿ ರಕ್ತಗಾಯ ಬಲಕೈ ಮೋಣಕೈ ಹಿಂದೆ ತರಚಿದ ಗಾಯ ಹಣೆ ಮತ್ತು ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದವು. ನಂತರ ಬ್ರಹ್ಮಾನಂದ ಈತನು ಮೇಲೆ ಎದ್ದು ಹೆದರಿಕೊಂಡು ತಾನು ನಡೆಸುತ್ತಿದ್ದ ಮೋಟರ ಸೈಕಲನ್ನು ತೆಗೆದುಕೊಂಡು ಓಡಿ ಹೋಗಿರುತ್ತಾನೆ. ನಂತರ ನಮಗೆ ಅಪಘಾತವಾದ ಸುದ್ದಿ ನನ್ನ ಗಂಡ ಉಮೇಶ ಹಾಗೂ ಭಾವ ಮಲ್ಲಿಕಾರ್ಜುನ ಇವರಿಗೆ ಫೊನ ಮುಖಾಂತರ ತಿಳಿಸಿ 108 ಅಂಬುಲೆನ್ಸಗೆ ಕರೆಮಾಡಿ ಅದರಲ್ಲಿ ನಾನು ನನ್ನ ಮಗ ಆದಿತ್ಯ ಈತನಿಗೆ ಉಪಚಾರ ಕುರಿತು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ದಿನಾಂಕ: 25-10-17 ರಂದು ಮುಂಜಾನೆ 9-30 ಗಂಟೆಗೆ ನನ್ನ ಗಂಡ ಭೀಮರಾಯ ಮತ್ತು ನಮ್ಮೂರಿನ ಹುಸೇನಪಟೇಲ್ ಮೇಟಿ ಇಬ್ಬರು ಕೂಡಿ ಹುಸೇನಪಟೇಲ ಇವರ ಸೈಕಲ ಮೊಟಾರ ನಂ ka-32 ED-4145 ನೇದ್ದರ ಮೇಲೆ ಕೆಲಸದ ನಿಮಿತ್ಯ ಯಡ್ರಾಮಿಗೆ ಹೋದರು ಸ್ವಲ್ಪ ಹೊತ್ತಿನಲ್ಲಿ ನಮ್ಮೂರಿನ ಮಹೇಬೂಬಪಟೇಲ ಪೊಲೀಸ್ ಬಿರಾದಾರ ಇವರು ನಮಗೆ ಪೋನ ಮಾಡಿ ಈದಿಗ ಹುಸೇನಪಟೇಲ , ಭೀಮರಾಯ ಇಬ್ಬರೂ ಕೂಡಿ ಸೈಕಲ ಮೊಟಾರ ಮೇಲೆ ಕೆನಾಲ ದಾಟಿ ಹೋರಟಾಗ ಜೇವರಗಿ ಕಡೆಯಿಂದ ಒಂದು ಲಾರಿ ಬಂದಿದ್ದು, ಅದರ ಚಾಲಕನು ಲಾರಿಯನ್ನು ಅತಿ ವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರಸೈಕಲಗೆ ಡಿಕ್ಕಿ ಹೊಡೆದಿದ್ದರಿಂದ ಹುಸೇನಪಟೇಲ , ಭೀಮರಾಯ ಇಬ್ಬರು ಸೈಕಲ ಮೊಟಾರ ಸಮೇತ ರಸ್ತೆಯ ಮೇಲೆ ಬಿದ್ದು, ಭಾರಿ ಗಾಯಗೊಂಡಿದ್ದು, ಲಾರಿ ಚಾಲಕ ತನ್ನ ಲಾರಿ Ka-32 B-0888 ನ್ನು ರಸ್ತೆಯ ಮೇಲೆ ಬಿಟ್ಟು ಓಡಿ ಹೋಗಿರುತ್ತಾನೆ. ಭೀಮರಾಯನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಲು ನಾನು ಮತ್ತು ನನ್ನ ಮಗ ಸೂರ್ಯಕಾಂತ ಇತರರು ಕೂಡಿ ಸ್ಥಳಕ್ಕೆ ಬಂದು ನೋಡಲು ನನ್ನ ಗಂಡನು ಮೃತಪಟ್ಟಿದ್ದು ಅವನೆ ಬೆನ್ನಿನ ತೊಗಲು ಪೂರ್ತಿ ಕಿತ್ತಿದ್ದು, ಬಲಗೈ ಮುರಿದಿರುತ್ತದೆ. ಎದೆಗೆ ಸೊಂಟಕ್ಕೆ ಭಾರಿ ಪೆಟ್ಟಾಗಿ ಗುಪ್ತಾಂಗದಿಂದ ರಕ್ತ ಬಂದಿರುತ್ತದೆ. ಹುಸೇನಪಟೇಲ ಇವನ ಗದ್ದಕ್ಕೆ ಮತ್ತು ಮೂಗಿನ ಮೇಲೆ , ಬಲಗೈ, ಎಡಗೈ ಹಾಗೂ ಎಡಮೊಳಕಾಲಿಗೆ ಭಾರಿರಕ್ತಗಾಯಗಳಾಗಿ ಬಾಯಿಯಿಂದ ರಕ್ತ ಬರುತ್ತಿತ್ತು. ಹುಸೇನಪಟೇಲ ಇವರಿಗೆ ಇಲಾಜು ಕುರಿತು ಮೈಬೂಬಪಟೇಲ ಇವರು ಯಡ್ರಾಮಿ ದವಾಖಾನೆಗೆ ಕರೆದುಕೊಂಡು ಹೋಗಿರುತ್ತಾರೆ ಅಂತಾ ಶ್ರೀಮತಿ ಶರಣಮ್ಮ ಗಂ ಭೀಮರಾಯ ಕಟ್ಟಿಮನಿ ಸಾ:ಸೈದಾಪೂರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಮಿಲಿಂದಕುಮಾರ ತಂದೆ ಗಿರೆಪ್ಪಾ ಸಿಂಗೆ ಸಾ|| ಬಂಗರಗಾ ತಾ|| ಆಳಂದ ಪುಣೆ ಪಟ್ಟಣದ ಪಿಂಪ್ರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ,ದಿನಾಂಕ 13/10/2017 ರಂದು ನನ್ನ ಆರೋಗ್ಯ ಸರಿಯಿಲ್ಲದ ಕಾರಣ ನನ್ನ ತಾಯಿ ನಮ್ಮ ಮನೆಗೆ ಕೀಲಿ ಹಾಕಿಕೊಂಡು ನಮ್ಮ ಬಳಿ ಪೂನಾಕ್ಕೆ ಬಂದಿದ್ದಳು, ಆಗ ನಾನು ನನ್ನ ಹೆಂಡತಿ ಅವಳನ್ನು ದೀಪಾವಳಿ ಮುಗಿಸಿಕೊಂಡು ಹೋಗು ಅಂತಾ ಅಂದಿರುತ್ತೇವೆ, ಆಗ ನಮ್ಮ ತಾಯಿ ಅಲ್ಲೆ ಉಳಿದುಕೊಂಡಿದ್ದು ದಿನಾಂಕ  23/10/2017 ರಂದು ಬೆಳಿಗ್ಗೆ 05.30 ಗಂಟೆಗೆ ನನಗೆ ನಮ್ಮ ತಂಗಿಯಾದ ವಿಜಯಲಕ್ಷ್ಮೀ ಇವಳು ಫೋನ್ ಮಾಡಿ ವಿಷಯ ತಿಳಿಸಿದ್ದೆನೆಂದರೆ ಬಂಗರಗಾ ಗ್ರಾಮದ ನನ್ನ ಮನೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಫೋನ್ ಮೂಲಕ ವಿಷಯ ತಿಳಿಸಿದಾಗ ನಾನು & ನಮ್ಮ ತಾಯಿ ಕೂಡಿಕೊಂಡು ದಿನಾಂಕ 24/10/2017 ರಂದು ಬೆಳಿಗ್ಗೆ 07-00 ಗಂಟೆಗೆ ಪೂನಾದಿಂದ ಬಂದು ನೋಡಲು ನಮ್ಮ ಮನೆಯನ್ನು ಯಾರೋ ಕಳ್ಳರು ಕೀಲಿ ಮುರಿದು ನಮ್ಮ ಮನೆಯ ಟಿಜೋರಿಲ್ಲಿ ಇಟ್ಟಿದ್ದ 1) ಬಂಗಾರದ ಜುಮಕೆಗಳು & ಹುವಾ 15 ಗ್ರಾಂ 2) 5 ಗ್ರಾಂ ಬಂಗಾರದ ಸುತ್ತುಂಗುರ 3) ಬಂಗಾರದ ತಾಳಿ & ಸರ 10 ಗ್ರಾಂ 4) ಬಂಗಾರದ ಲಾಕೇಟ್ 10 ಗ್ರಾಂ ಹೀಗೆ ಒಟ್ಟು 40 ಗ್ರಾಮ ಬಂಗಾರ ಇದರ ಅಂ ಕಿಮ್ಮತ್ತು 80000/- ರೂಪಾಯಿ  04 ತೋಲೆ ಬೆಳ್ಳಿ ಇದರ ಅಂ ಕಿ 1000/- ರೂಪಾಯಿ ಹಾಗೂ 02 ಎಲ್‌ಇಡಿ ಡಿಜೆ ಲೈಟ್ ಅಂ ಕಿ 3000/- ಎರಡು ತಾಮ್ರದ ಕೊಡಗಳು ಅಂ ಕಿ 2000/- ಬೆಲೆ ಬಾಳುವ ಬಟ್ಟೆಗಳು ಅಂ ಕಿ 4000/- ಮತ್ತು ನಗದು ಹಣ 46000/- ರೂಪಾಯಿ ಹೀಗೆ ಒಟ್ಟು ಸುಮಾರು 1 ಲಕ್ಷ 36 ಸಾವೀರ ರೂಪಾಯಿ ಬೆಲೆ ಬಾಳುವ ಬಂಗಾರ & ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಯಾರೋ ಕಳ್ಳರು ದಿ|| 23/10/17 ರ ಮಧ್ಯರಾತ್ರಿ 01-00 ಗಂಟೆಯಿಂದ ಬೆಳಗಿನ 04-00 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯ ಕೀಲಿ ಮುರಿದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 October 2017

KALABURAGI DISTRICT REPORTED CRIMES

ಸುಲಿಗೆ ಪ್ರಕರಣ :
ಚೌಕ ಠಾಣೆ : ಶ್ರೀ ಬಸವರಾಜ ತಂದೆ ವಿಠ್ಠಲರಾವ ಪಾಟೀಲ ಸಾಃ ಸನ್ ರೈಸ್ ಶಾಲೆಯ ಹತ್ತಿರ ವಿಜಯನಗರ ಕಾಲೋನಿ ಆಳಂದ ರೋಡ ಕಲಬುರಗಿ ರವರು ದಿನಾಂಕ 21-10-2017 ರಂದು ಖೂಬಾ ಪ್ಲಾಟ ದಿಂದ ಮನೆಯ ಕಡೆಗೆ ಹೋಗುವಾಗ ಆಳಂದ ರೋಡಿನಲ್ಲಿ ನನ್ನ ಸೈಕಲ ಮೋಟರದಲ್ಲಿಯ ಪೆಟ್ರೋಲ ಆಗಿದ್ದಕ್ಕೆ ನಾನು ಆಳಂದ ರೋಡಿಗೆ ಇರುವ ಆಶಿರ್ವಾದ ಕಲ್ಯಾಣ ಮಂಟಪದ ಹತ್ತಿರ ಇರುವ ಗಜರಾಜ ಪೆಟ್ರೋಲ ಬಂಕಿಗೆ ಹೋದಾಗ ಪೆಟ್ರೋಲ ಬಂಕ ಬಂದ ಆಗಿದ್ದರ ಮೂಲಕ ಅಲ್ಲಿಯೇ 10-15 ನಿಮಿಷ ನಿಂತಿದ್ದು ಬಂಕಿನವರು ಯಾರೂ ಕಾಣದಿದ್ದಕ್ಕೆ ಮನೆಯ ಕಡೆಗೆ ಹೋಗುವಾಗ ಮನೆಯ ಹತ್ತಿರ ಬಂದಾಗ ಹಿಂದಿನಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಮೋಟರ ಸೈಕಿಲ ಮೇಲೆ ಬಂದು ನನಗೆ ತಡೆದರು ಆಗ ನಾನು ಯಾಕೆ ಅಂತಾ ಕೇಳಲು ಮೋಟರ ಸೈಕಲ ಮೇಲೆ ಹಿಂದುಗಡೆ ಕುಳಿತಿದ್ದ ಒಬ್ಬನು ಬಂದು ಪಂಚದಿಂದ ಮುಖದ ಮೇಲೆ ನನಗೆ ಹೊಡೆದನು ಆಗ ನಾನು ಗಾಡಿಯ ಮೇಲಿನಿಂದ ಕೆಳಗೆ ಬಿದ್ದೇನು ನಾನು ಏಳುವಾಗ ಅವನೇ ನನಗೆ ಮತ್ತೊಂದು ಏಟು ಹೊಡೆಯಲು ಬಂದಾಗ ನಾನು ಬಲಗೈ ಯಿಂದ ತಡೆದು ಅವನಿಗೆ ಎರಡು ಏಟು ಹೊಡೆದೆನು ಆಗ ಇನ್ನೊಬ್ಬನು ನನಗೆ ತಲೆಯ ಹಿಂದೆ ಹೊಡೆಯುವಾಗ ನಾನು ಕೆಳಗೆ ಬಿದ್ದೆನು ಆಗ ನಾನು ಬೇಹೋಷ ಸ್ಥಿತಿಯಲ್ಲಿದ್ದಾಗ ನನ್ನ ಬಲಗೈಯಲ್ಲಿದ್ದ 15 ಗ್ರಾಂ ಬಂಗಾರದ ಎರಡು(02) ಉಂಗುರ ಹಾಗೂ 17 ಗ್ರಾಂ ಬಂಗಾರದ ಮಹಾರಾಜಾ ಉಂಗುರ ಅಲ್ಲದೆ ಹತ್ತು ಗ್ರಾಮ ಬೆಳ್ಳಿಯ ಉಂಗುರ ಮತ್ತು ನನ್ನ ಪ್ಯಾಂಟಿನ ಚೋರ ಪಾಕೀಟದಲ್ಲಿ ಇದ್ದ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ (1,20,000=00) ದೋಚಿಕೊಂಡು ಹೋದ ಬಗ್ಗೆ ನಂತರ ನನಗೆ ಗೊತ್ತಾಗಿದೆ ನಾನು ಬಿದ್ದಾಗ ಪಟ್ಟಣ ಗ್ರಾಮದ ಲಕ್ಷ್ಮಿಕಾಂತ ಎಂಬುವವರು ನನಗೆ ಎಬ್ಬಿಸಿದ್ದು ನಾನು ಮನೆಗೆ ಹೋದೆನು ನನ್ನ ಮೂಗಿನ ಮೇಲೆ ಎಡಗಣ್ಣಿನ ಮೇಲೆ ಹಾಗೂ ಕೆಳಗಡೆಯ ಭಾಗಕ್ಕೆ ಬಲ ಕಪಾಳಕ್ಕೆ ರಕ್ತಗಾಯ ಹಾಗೂ ಕಂದು ಗಟ್ಟಿದ ಗಾಯವಾಗಿದ್ದು ಇರುತ್ತದೆ. ಮುಂದೆ ನನಗೆ ನಮ್ಮ ಅಣ್ಣನಾದ ಸಂತೋಷ ಪಾಟೀಲ ತಮ್ಮನಾದ ಚನ್ನವೀರ ಇಬ್ಬರು ಕೂಡಿ ಆಳಂದ ರೋಡಿಗೆ ಇರುವ ಡೆಕ್ಕನ ಆಸ್ಪತ್ರೆಗೆ ಒಯ್ದು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ ನನ್ನ ಮೇಲೆ ಹಲ್ಲೆ ಮಾಡಿ ವ್ಯಕ್ತಿಗಳನ್ನು ಮತ್ತು ಅವರು ಉಪಯೋಗಿಸಿದ ಸೈಕಲ ಮೋಟರನ್ನು ಹಾಗೂ ನನ್ನಿಂದ ದೋಚಿದ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಹಾಗೂ 47 ಗ್ರಾಂ ಬಂಗಾರದ ಮೂರು ಉಂಗುರ ಅದಾಜು ಕಿಮ್ಮತ್ತು 140000=00 ಹಾಗೂ 10 ಗ್ರಾಂ ಬೆಳ್ಳಿಯ ಉಂಗುರ ಪತ್ತೆ ಹಚ್ಚಿ ಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರದ ಹಣ ದುರುಪಯೋಗಪಡಿಸಿಕೊಂಡು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ರಿಯಾಜ ತಂದೆ ಮಹ್ಮದ ನವಾಜ  ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಪ್ರಭಾರಿ ಪೌರಾಯುಕ್ತರು ನಗರ ಸಭೆ ಶಹಾಬಾದ ಇವರು ಶ್ರೀ ಶರಣು ಪೂಜಾರ ಪ್ರಭಾರ  ಪೌರಾಯುಕ್ತರಾಗಿ ದಿನಾಂಕ: 28/03/2017 ರಿಂದ 16/08/2017 ಪ್ರಭಾರ ಪೌರಾಯುಕ್ತರಾಗಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.  ಮತ್ತು ಶ್ರೀ ಪಂಚಾಕ್ಷರಯ್ಯ ಸ್ವಾಮಿ ಸಮುದಾಯ ಸಂಘಟಕರ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತಾರೆ . ಇವರು ಸ್ವಚ್ಚ ಭಾರತ ಮಿಷನ ಖಾತೆಯನ್ನು ನಿರ್ವಹಿಸಿಕೊಂಡು ಬಂದಿರುತ್ತಾರೆ   ಶಹಾಬಾದ ನಗರ ಸಭೆ ಸ್ವಚ್ಚ ಭಾರತ ಮಿಷನ ಯೋಜನೆ ಅಡಿಯಲ್ಲಿ ಮಂಜೂರಾದ ಹಣ ಎಸ್.ಬಿ ಐ ಬ್ಯಾಂಕ ಶಹಾಬಾದ ಖಾತೆ ನಂಬರ 62228547261 ನೇದ್ದಕ್ಕೆ ಜಮಾವಾಗುತ್ತಿದ್ದು  ಸದರಿ ಖಾತೆಯ ಬಗ್ಗೆ ದಿನಾಂಕ: 22/09/2017 ರಂದು  ನಾನು ಎಸ್.ಬಿ ಐ ಬ್ಯಾಂಕ ಶಹಾಬಾದರಲ್ಲಿ ಹೋಗಿ ಪರಿಶೀಲಿಸಿದಾಗ  34 ಲಕ್ಷ್ ರೂ ಸ್ವಚ ಭಾರತ ಮಿಷನ ಯೋಜನೆ ಅಡಿಯಲ್ಲಿ ಯಾವುದೆ ಕಾಮಾಗಾರಿಗಳನ್ನು ಅನುಷ್ಟಾನಗೊಳಿಸದೆ ನೇರವಾಗಿ ಹಣ ಖಾತೆಯಿಂದ 04 ಜನರಿಗೆ ಚಕ್ಕ ಮುಖಾಂತರ ನೀಡಿರುತ್ತಾರೆ   ನಾನು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ ಕಲಬುರಗಿರವರಿಗೆ ಇದರ ಬಗ್ಗೆ ವರದಿ  ಸಲ್ಲಿಸಿರುತ್ತಾನೆ. ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ರವರು ಇದರ ಬಗ್ಗೆ ಲೆಕ್ಕಾ ತನಿಖಾ  ತಂಡ ರಚಿಸಿದ್ದು ತನಿಖೆ ಕೈಗೊಂಡು ಈ ತನಿಖಾ ತಂಡವು ದಿನಾಂಕ: 03/10/2017 ರಂದು ತನಿಖೆಯನ್ನು ನಿರ್ವಹಿಸಿ ವರದಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿರವರಿಗೆ ನೀಡಿದ್ದು ಅವರ ವರದಿಯ ಆಧಾರ ಮೇರೆಗೆ ಶ್ರೀ ಶರಣು ಪೂಜಾರ ಪ್ರಭಾರ ಪೌರಾಯುಕ್ತರು ಮತ್ತು ಪಂಚಾಕ್ಷರಯ್ಯ ಸ್ವಾಮಿ ಸಮುದಾಯ ಸಂಘಟಕರು ಇವರುಗಳು ಶಹಾಬಾದ ನಗರ ಸಭೆಯಲ್ಲಿ ಸ್ವಚ್ಚ ಭಾರತ ಮಿಷನ ಯೋಜನೆ ಅಡಿಯಲ್ಲಿ ಯಾವುದೆ ಕಾಮಗಾರಿಗಳನ್ನು ಅನುಷ್ಟಾನಗೊಳಿಸದೆ ಹಾಗೂ ನಿಯಮ ಬಾಹಿರವಾಗಿ  ನೇರವಾಗಿ ಹಣ ಬ್ಯಾಂಕ ಖಾತೆ ನಂಬರ 62228547261 ರಲ್ಲಿ ಲಭ್ಯವಿರು ಹಣವನ್ನು 1)  ಚಕ್ಕ ನಂಬರ 982084  Date 17/07/2017 800000-00 ರೂ 2) 942085 Date 25/07/2017 1000000-00 ರೂ 3)      0003060 Date 16/08/2017 800000-00 ರೂ 4 ) 0003061 Date 16/08/2017 800000-00 ರೂ 5) 942058 Date 12/06/2017 112000-00 ರೂ  6) 942072 Date 17/07/2017 30000-00 ರೂ 7) 942073 Date 19/07/2017 10000-00  ರೂ  8) 942074 Date 19/07/2017 10000-00 ರೂ 9) 942075 Date 19/07/2017 10000-00 ರೂ  10) 942076 Date 29/07/2017 197685-00  ರೂ ಶ್ರೀ ಶರಣು ಪೂಜಾರ ಪ್ರಭಾರ ಪೌರಾಯುಕ್ತರು ನಗರ ಸಭೆ ಶಹಾಬಾದ ಮತ್ತು ಪಂಚಾಕ್ಷರಯ್ಯ ಸ್ವಾಮಿ ಸಮುದಾಯ ಸಂಘಟಕರು ನಗರ ಸಭೆ ಶಹಾಬಾದ  ಮತ್ತು 1) ಮಾನಸಿಂಗ ತಂದೆ ಶಂಕರಸಿಂಗ 2) ಅಶೋಕ ತಂದೆ ಮುನಿಯಾ ಚವ್ಹಾಣ  3) ಹಣಮಂತ ತಂದೆ ಸಿದ್ದಪ್ಪ  4) ಬಸೀರ ತಂದೆ ಗುಲಾಮ ರಸೂಲ  ಇವರು ಎಲ್ಲಾರೂ  ಸೇರಿ ಖೋಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ಕಡತ ನಿರ್ವಹಿಸಿದೆ ಚೆಕ್ಕ ರೀಜಿಸ್ಟರನಲ್ಲಿ FBAS ಅನ್ಲೈನಲ್ಲಿ ನೊಂದಾಯಿಸಿದೆ ನೇರವಾಗಿ ಚಕ್ಕ ನೀಡಿ  ಹಣವನ್ನು ದುರುಪಯೋಗ ಪಡಿಸಿರುತ್ತಾರೆ . ಸರಕಾರದ ಸ್ಚಚ್ಚ ಭಾರತ ಮಿಷನ ಯೋಜನೆ ಅಡಿಯಲ್ಲಿ  ಹಣವನ್ನು ಮೇಲ್ಕಂಡ ತನಿಖಾ ತಂಡದ ವರದಿಯ ಪ್ರಕಾರ ದಿನಾಂಕ: 12/06/2017   ರಿಂದ ದಿನಾಂಕ: 16/08/2017  ರವರಿಗೆ  ಒಟ್ಟು ಹಣ 37 69 000-00  ರೂಪಾಯಿಗಳು ನಿಯಮ ಬಾಹಿರವಾಗಿ ಖರ್ಚು ಮಾಡಿ  ದುರೊಪಯೋಗ ಪಡಿಸಿಕೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಕ್ರಮಕೂಟ ಕಟ್ಟಿಕೊಂಡು ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ. ಕಲ್ಲಯ್ಯ ಎ.ಎಸ್.ಐ ಜೇವರಗಿ ಠಾಣೆ ರವರು ಆಂದೊಲಾ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸ್ಥಳದಲ್ಲಿದ್ದ  ಹೊಟೇಲಗಳು  ಅಂಗಡಿಗಳು ಮತ್ತು ಪಾನ ಡಬ್ಬಾಗಳು ತೆರವುಗೊಳಿಸಿದ ವಿಷಯದಲ್ಲಿ ಆಂದೊಲಾ ಗ್ರಾಮದಲ್ಲಿ ಖಾದರಸಾಬ ಯಲಗಾರ ಮತ್ತು ಶಿವಪ್ಪ ಲಕ್ಕಾಣಿ ಇವರ ಮದ್ಯದಲ್ಲಿ ಜಗಳಾಗಿದ್ದು .ಸದರಿ ಜಗಳಕ್ಕೆ ಮೂಲ ಕಾರಣ ಆಂದೊಲ ಗ್ರಾಮದ ಸಿದ್ದಲಿಂಗಯ್ಯ ಕೆ. ಸ್ವಾಮಿ ಇವರು ಇರುತ್ತಾರೆ. ಅಲ್ಲದೆ ಜೆವರಗಿ ಪಟ್ಟಣದಲ್ಲಿ ಶ್ರೀರಾಮ ಸೇನಾ ಸಂಘಟನೆಯ ವತಿಯಿಂದ ಪ್ರತಿಷ್ಟಾಪನೆ ಮಾಡಿದ ಗಣೇಶ ವಿಗ್ರಹ ವಿಸರ್ಜನೆ ಮೇರವಣಿಗೆ ಕಾಲಕ್ಕೆ ಸಿದ್ದಲಿಂಗಯ್ಯ ಸ್ವಾಮಿ ಇವರು ಮುಸ್ಲಿಂರ ವಿರುದ್ದವಾಗಿ ಮಾತನಾಡಿ ಪ್ರಚೊದನಕಾರಿ ಬಾಷಣ ಮಾಡಿದ ವಿಷಯದಲ್ಲಿ ಮತ್ತು ಸದರಿ ಸಿದ್ದಲಿಂಗಯ್ಯ ಸ್ವಾಮಿಯವರು ಯಾವಾಗಲೂ ಸಾರ್ವಜನಿಕ ಸಮಾರಂಭಗಳಲ್ಲಿ ಮಾತು ತೆಗದರೆ ಮುಸ್ಲಿಂರ ವಿರುದ್ದ ಮಾತನಾಡುತ್ತಾ ಬಂದಿರುತ್ತಾನೆ. ಅಂತಾ ಮುಸ್ಲಿಂರು ಸದರಿ ಸಿದ್ದಲಿಂಗಯ್ಯ ಸ್ವಾಮಿ ಆಂದೊಲಾ ರವರ ವಿರುದ್ದ ಜೇವರಗಿ ಪಟ್ಟಣದ ನೂರಾರು ಮುಸ್ಲಿಂರು ಆಕ್ರಮ ಕೂಟ ಕಟ್ಟಿಕೊಂಡು, ಸರಕಾರದಿಂದ ಯಾವುದೆ ಪರವಾನಿಗೆ ಪಡೆದುಕೊಳ್ಳದೆ ಪ್ರತಿಭಟನೆ ಮೇರವಣಿಗೆ ಮಾಡಲು ಜೇವರಗಿ ಪಟ್ಟಣದಲ್ಲಿ ಇಂದು ದಿ 23.10.2017 ರಂದು ಸಿದ್ದಲಿಂಗಯ್ಯ ಸ್ವಾಮಿ ರವರ ವಿರುದ್ದ ಪ್ರತಿಭಟನೆ ಮಾಡುತ್ತಿರುವ ವಿಷಯ ಗೋತ್ತಾಗಿ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ  ಕೂಡಿಕೊಂಡು  ಮತ್ತು ನಮ್ಮ  ಇಲಾಖೆಯ ಮೇಲಾಧಿಕಾರಿಗಳು ಕೂಡಿಕೊಂಡು  ಜೇವರಗಿ ಪಟ್ಟಣದ ರೀಲಾಯನ್ಸ್ ಪೆಟ್ರೊಲ್ ಪಂಪ ಹತ್ತಿರ ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ಹೋದಾಗ ಅಲ್ಲಿ ಬಾಬು .ಬಿ. ಪಾಟೀಲ ಮುತ್ತಕೊಡ ಇವರ ನೇತೃತ್ವದಲ್ಲಿ ಜೇವರಗಿ-ಶಹಾಪೂರ ರೋಡಿನಲ್ಲಿ ಪ್ರತಿಭಟನೆ ಮಾಡುತ್ತಾ ಮೇರವಣಿಗೆ ಮುಖಾಂತರವಾಗಿ ಜೇವರಗಿ ತಸೀಲ್ದಾರ  ಕಚೇರಿ  ಕಡೆಗೆ ಹೋಗುತ್ತಿದ್ದಾಗ ನಾನು ಮತ್ತು ನಮ್ಮ ಅದಿಕಾರಿ & ಸಿಬ್ಬಂದಿಯವರು  ಕೂಡಿಕೊಂಡು ಈ ಪ್ರತಿಭಟನೆಗೆ ಮತ್ತು ಮೇರವಣಿಗೆ ಮಾಡಲು ನೀವು ಸರಕಾರದಿಂದ ಪರವಾನಿಗೆ ತೆಗೆದುಕೊಂಡಿರುವುದಿಲ್ಲಾ  ನೀವು ಕಾನೂನು ಬಾಹಿರವಾಗಿ ಅಕ್ರಮ ಕೂಟ ಕಟ್ಟಿಕೊಂಡು ಪ್ರತಿಭಟನೆ ಮೇರವಣಿಗೆ ಮಾಡುತ್ತಿದ್ದಿರಿ ಈ ಮೊದಲೇ ಆಂದೊಲಾ ಗ್ರಾಮದಲ್ಲಿ  ಸರಕಾರಿ ಜಾಗೆಯಲ್ಲಿ ಹೊಟೆಲ ಮತ್ತು ಪಾನ ಡಬ್ಬಾಗಳು ತೆರವುಗೊಳಿಸಿದ ವಿಷಯದಲ್ಲಿ ಹಿಂದು ಮತ್ತು ಮುಸ್ಲಿಂರ ಮದ್ಯ ಜಗಳವಾಗಿರುತ್ತದೆ  ಅದರಿಂದ ಪ್ರತಿಭಟನೆಗೆ ಪರವಾನಿಗೆ ಕೊಟ್ಟಿರುವುದಿಲ್ಲಾ. ಆದ್ದರಿಂದ ತಾವು ಇಲ್ಲಿಂದ ಹೋಗಿರಿ, ನೀವು ಪ್ರತಿಭಟನೆ ಮಾಡುವುದು ಸರಿ ಅಲ್ಲಾ ಎಂದು ನಾನು ಮತ್ತು ನಮ್ಮ ಮೇಲಾಧಿಕಾರಿಗಳು  ಅವರಿಗೆ ಹೇಳಿದಾಗ  ಬಾಬು ಪಾಟೀಲ ಮುತ್ತಕೊಡ  ಹಾಗೂ ಇತರೆ ಮುಸ್ಲಿಂರು ನಾವು ನಿಮ್ಮ ಮಾತು ಕೇಳುವುದಿಲ್ಲಾ ನಾವು ಯಾವುದೆ ಸರಕಾರದಿಂದ ಪರವಾನಿಗೆ ಪಡೆದುಕೊಳ್ಳುವದಿಲ್ಲಾ ಮತ್ತು ನಾವು ಪ್ರತಿಭಟನೆ  ಮಾಡುತ್ತೆವೆ ಎಂದು ಸರಕಾರ ಆಧೇಶ ಉಲ್ಲಂಘನೆ ಮಾಡಿರುತ್ತಾರೆ. ಅಲ್ಲದೆ ಅವರು ನಮಗೆ ತಳ್ಳಾಟ ಮಾಡಿಕೊಂಡು ಪ್ರತಿಭಟನೆಯನ್ನು ಜೇವರಗಿ ಪಟ್ಟಣ ರಿಲಾಯನ್ಸ್ ಪೆಟ್ರೊಲ್ ಪಂಪದಿಂದ ಮಿನಿ ವಿದಾನಸಭೆವರೆಗೆ ಮಾಡುತ್ತಾ ಹೋಗಿದ್ದು, ತಡೆಯಲು ಹೊದಾಗ 1) ಬಾಬು ಬಿ ಪಾಟೀಲ ಸಾಃ ಮುತ್ತಕೊಡ 2) ಸೈಯ್ಯದ ಗೌಸ ಮೈನ್ನೊದ್ದೀನ ಖಾದ್ರಿ, ಸಾಃ ಗಂವ್ಹಾರ, 3) ಇಜಾಜ್ ನಮೋಜಿ, ಸಾಃ ಜೇವರಗಿ  4) ಎಮ್.ಡಿ. ಗೌಸ್, ಸಾಃ ಜೇವರಗಿ  5) ನಬೀ ಪಟೇಲ ಪೊಲೀಸ್ ಪಾಟೀಲ ಸಾಃ ಕಾಸರಬೋಸಗಾ  6) ಶಬ್ಬೀರ ಇನಾಮ್ದಾರ, ಸಾಃ ಜೇವರಗಿ  ಇವರು ಮುಂದೆ ಬಂದು ನಮಗೆ ತಳ್ಳಾಟ ಮಾಡಿರುತ್ತಾರೆ, ಅಲ್ಲದೆ 7) ಮೈಹಿಬೂಬ ಮನೀಯಾರ ಸಾಃ ಮಳ್ಳಿ, 8) ಹಬ್ಬೀಬ ಜಮಾದಾರ ಸಾಃ ಜೈನಾಪೂರ, 9) ಎಮ್.ಡಿ. ಜಮೀರ್ ತಂದೆ ಮೊಹ್ಮದ್ ಸಾಬ ಸಾಃ ಜೇವರಗಿ 10) ಅಪ್ರೋಜ ವೇಲಕಮ್ಮ ಹೊಟೇಲ ಸಾಃ ಜೇವರಗಿ, 11) ಆಮ್ಲಾ ಎಲ್ಕ್ರೇಷನ್ ಸಾಃ ಜೇವರಗಿ  12) ಮೈಹಿಬೂಬ ಇನಮ್ದಾರ, ಸಾಃ ಜೇವರಗಿ  13) ಶೋಬಾ ಬಾಣಿ, 14) ಆಸ್ಲಾಮ್ ಮೊಬೈಲ ಅಂಗಡಿ, ಸಾಃ ಜೇವರಗಿ  15) ದಾವೂದ್ ಜೊಪಡಪಟ್ಟಿ ಜೇವರಗಿ 16) ಶಾರೂಖ ತಂದೆ ಅಬ್ದುಲ್ ಕರೀಮ್ ಸಾಃ ಜೇವರಗಿ  17) ಬಾಬಾ ಕಬ್ಬಿಣ ಅಂಗಡಿ ಸಾಃ ಜೇವರಗಿ 18) ಶಾರೂಖ ಗಿರಣಿ, ಸಾಃ ಜೇವರಗಿ  19) ಮೈಹಿಬೂಬ ಪಟೇಲ ಕೊಬಾಳ, ಸಾಃ ಖಾಜಾಕಾಲೊನಿ ಜೇವರಗಿ  20) ಪಾರೂಖ್ ಪಟೇಲ  ತಂದೆ ಕಾಸೀಮ್ ಪಟೇಲ ಸಾಃ ಮೂದಬಾಳ 21) ಮಕ್ಬೂಲ ಪಟೇಲ ಗುತ್ತೆದಾರ ಮಲ್ಲಾಬಾದ 22) ಶೇರು ಚಿಕ್ಕಜೇವರಗಿ 23) ಅಬ್ದುಲ್ ಸತ್ತಾರ ಥಾರಿ ಸಾಃ ಜೇವರಗಿ  24) ಅಲ್ಲಾಪಟೇಲ ಸಾಃ ಶಿವಪೂರ, 25) ಜಾಫರ್ ಯಾಳವಾರ, 26) ಮುನೀರ್ ಪಾಸಾ ಕಳ್ಳಿ ಸಾಃ ಲಕ್ಕಪ್ಪಲೇಔಟ  ಜೇವರಗಿ  27) ನೀಸಾರ  ಇನಾಮ್ದಾರ, ಸಾಃ ಜೇವರಗಿ  28) ಖುದ್ದುಸ್ ಜೊಪಡ ಪಟ್ಟಿ ಜೇವರಗಿ 29) ಜಾಪರ್ ತರಕಾರಿ ಅಂಗಡಿ, ಸಾಃ ಜೇವರಗಿ  30) ತೈಯಬ್ ಲೊಹಾರ, ಸಾಃ ಜೇವರಗಿ  31) ಹಣಮಂತರಾಯ ಹೂಗಾರ ಸಾಃ ಹರವಾಳ,  32) ಸಂತೊಷ ಬಿಜಾಪೂರ ಸಾಃ ಸಿಂದಗಿ 33) ಅಮೀರ ಜಮಾದಾರ, ಸಾಃ ಜೇವರಗಿ  34) ಮೈಹಿಬೂಬ ಹನೀಫ್ ಸಿಂದಗಿ ಎ.ಎಮ್.ಐ.ಎಮ್ 35) ಬಾಬಾ ದರ್ಪಣ 36) ಮಹ್ಮದ್ ಪಟೇಲ   ಸಾಃ ಜೇವರಗಿ ಎ.ಎಮ್.ಐ.ಎಮ್ 37) ಅನ್ವರ್ ನಮೋಜಿ 38) ಖಾಜಾ ತತ್ತಿ ಅಂಗಡಿ ಜೇವರಗಿ 39) ಎಮ್.ಡಿ. ರವೂಫ್ ಹವಾಲ್ದಾರ, ಸಾಃ ಜೇವರಗಿ  40) ಅಮೀನಸಾಬ ತಂದೆ ನೂರಅಹೇಮದ್ ಸಾಬ ಸಾಃ ಜೇವರಗಿ 41) ರುಕ್ಮು ತೊಲಾ ಮೀಡಚಿ ಸಾಃ ಜೇವರಗಿ 42) ಮೈಹಿಬೂಬ ಸಾಃ ಗಂವ್ಹಾರ, 43) ರಫೀಕ್  ಸಾಃ ಗಂವ್ಹಾರ, 44) ಬಸೀರ ರಂಜಣಗಿ, 45) ಇಬ್ರಾನ್ ಹಾಲಿನ ಅಂಗಡಿ 46) ಸಲೀಮ್ ತಂದೆ ಮೈಹಿಬೂ ಪಟೇಲ ಸಾಃ ಕಾಸರ ಬೊಸಗಾ, 47) ರಾಜಾಪಟೇಲ ತಂದೆ ದಸ್ತಗಿರ ಪಟೇಲ ಸಾಃ ಕಾಸರ ಬೊಸಗಾ 48) ಹುಸೇನ ಪಟೇಲ ತಂದೆ ಖಾಜಾ ಪಟೇಲ ಸಾಃ ಕಸರ ಬೊಸಗಾ   ಇವರೆಲ್ಲರೂ ಹಾಗೂ ಇತರೆ ನೂರಾರು ಜನ ಮುಸ್ಲಿಂ ಜೇವರಗಿ ಪಟ್ಟಣದಲ್ಲಿ ಪ್ರತಿಭಟನೆ ಮಾಡಿರುತ್ತಾರೆ. ನಾನು ಮತ್ತು ನಮ್ಮ ಇಲಾಖೆಯ ಅಧಿಕಾರಿಗಳು ಮೇಲೆ ನಮೂದಿಸಿದವರಿಗೆ ಸರಕಾರ ಪರವಾನಿಗೆ ಪಡೆದುಕೊಳ್ಳದೆ ಪ್ರತಿಭಟನೆ ಮೇರವಣಿಗೆ ಮಾಡುವುದು ಕಾನೂನು ಬಾಹಿರ ಎಂದು ಹೇಳುತ್ತಿದ್ದಾಗ ಮೇಲೆ ನಮೂದಿಸಿದವರು ಅಕ್ರಮ ಕೂಟ ಕಟ್ಟಿಕೊಂಡು ನಮಗೆ ಕೈಯಿಂದ ತಳ್ಳಾಟ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿ ಸರಕಾರದ ಅಧೇಶ ಉಲ್ಲಂಘನೆ ಮಾಡಿರುತ್ತಾರೆ ಕಾರಣ ಅವರ ವಿರುದ್ದ ಕಾನೂನು ಪ್ರಕಾರ ಕ್ರಮ ಜುರಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 October 2017

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ  ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 23-10-2017 ರಂದು ರಾತ್ರಿ ಗುಡ್ಡೆವಾಡಿ ಗ್ರಾಮದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಬರುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಹೋಗುತ್ತಿದ್ದಾಗ ಒಂದು ಮರಳು ತುಂಬಿದ ಟಿಪ್ಪರ ದುಧನಿ ರೋಡಿನ ಕಡೆಗೆ ಹೋಯಿತು, ಆಗ ನಾವು ನಮ್ಮ ಜೀಪಿನಲ್ಲಿ ಸದರಿ ಮರಳು ತುಂಬಿದ ಟಿಪ್ಪರ ಹಿಂದೆ ಚೆಜ್ ಮಾಡುತ್ತಾ ಹೊಗುತ್ತಿದ್ದಾಗ, ಸದರಿ ಮರಳು ತುಂಬಿದ ಟಿಪ್ಪರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಮಾದಾಬಾಳ ತಾಂಡಾ ಹತ್ತಿರ ಟಿಪ್ಪರ ನಿಲ್ಲಿಸಿ ಕತ್ತಲಲ್ಲಿ ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ಕ ಮಾಡಲು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-32 ಸಿ-5067 ಅಂತಾ ಇದ್ದು ಸದರಿ ಟಿಪ್ಪರ ಅ.ಕಿ 10,00,000/-ರೂ  ಇರಬಹುದು. ಸದರಿ ಟಿಪ್ಪರದಲಿದ್ದ ಮರಳಿನ ಅ.ಕಿ 5000/- ರೂ ಇರಬಹುದು. ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಶಾಹಾಬಾದ ನಗರ ಠಾಣೆ : ದಿನಾಂಕ  23/10/201  ರಂದು ಬೆಳಿಗ್ಗೆ ಮುತ್ತಗಾ ಸಿಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರನಲ್ಲಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಮಲ್ಲಿಕಾರ್ಜುನ ಶಿವಪೂರ ಉಪ ತಹಸಿಲ್ದಾರರು ಶಹಾಬಾದ ಗ್ರಾಮ ಲೇಖಾಪಾಲಕರಾದ ಕು. ಪಾರ್ವತಿ  ಮತ್ತು ಬಂಕೂರ ಗ್ರಾಮ ಸಹಾಯಕಿ ಶ್ರೀಮತಿ ಕಾಂತಮ್ಮ ರವರೊಂದಿಗೆ ಶಹಾಬಾದ ನಗರ ಪೊಲೀಸ ಠಾಣೆಗೆ ಬಂದು ಸಿಬ್ಬಂದಿಯವರೊಂದಿಗೆ ಭಂಕೂರ ಗ್ರಾಮದ ಗಣೇಶ ಗುಡಿ ಹತ್ತಿರ ಹೋಗಿ ನಿಂತಾಗ ಭಂಕೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಬರುತ್ತಿರುವುದನ್ನು ನೋಡಿ ತಡೆದು ನಿಲ್ಲಿಸಿದಾಗ ಅದರಲ್ಲಿದ್ದ ಚಾಲಕ ಮತ್ತು  ಇನ್ನೊಬ್ಬ ಓಡಿ ಹೋದರು  ಪರಿಶೀಲಿಸಲಾಗಿ ಅದರಲ್ಲಿ ಮರಳು ತುಂಬಿದ್ದು ಸದರಿ ಟಿಪ್ಪರ ನಂ ಕೆ ಎ 20 ಬಿ 0020 ಇದ್ದು ಅ.ಕಿ 3 ಲಕ್ಷ ರೂ ಅದರಲ್ಲಿಯ ಮರಳು ಅ.ಕಿ 5000/- ರೂ ನ್ನೆದ್ದು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು  ಟಿಪ್ಪರ ಸಮೇತ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸೈಯದ ಜೀಲಾನ ಪಾಶ್ಯಾ ತಂದೆ ಸೈಯದ ರುಕ್ಮೊದಿನ್ ಸಾ: ಮನೆ ನಂ 10-1041/71 ನ್ಯೂ ಗಾಲಿಬ ಕಾಲೋನಿ ಎಮ್.ಎಸ್.ಕೆ.ಮೀಲ್ ಕಲಬುರಗಿ ಇವರು ದಿನಾಂಕ 21.10.2017 ರಂದು ಸಾಯಂಕಾಲ ನಾನು ನನ್ನ ಗೆಳೆಯ ವಿರಜಾ ಮೊಸಿನ ಬೇಗ ಕೂಡಿಕೊಂಡು ಮಹ್ಮದಿ ಚೌಕ ಹತ್ತಿರ ಇರುವ ಬಿಸ್ಮಿಲ್ಲಾ ಹೊಟೇಲಕ್ಕೆ ಚಹಾ ಕುಡಿಯಲು ಹೋಗಿದ್ದು. ಸದರಿ ಹೊಟೇಲದಲ್ಲಿ ಅಬ್ದುಲ ರಸೂಲ ತಂದೆ ಅಬ್ದುಲ ರಸೀದ ಮತ್ತು ಅಬ್ದುಲ ರುಸ್ತಮ ತಂದೆ ಅಬ್ದುಲ ರಸೀದ ಇವರು ಚಹಾ ಕುಡಿಯುತ್ತಿದ್ದು. ಸದರಿಯವರು ನನ್ನನ್ನು ನೋಡಿ ಏ ರಂಡಿ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ನೀನು ನಮಗೆ ಎದರು ಹಾಕಿಕೊಂಡು ಕೆಲಸ ಮಾಡುತ್ತಿ ಸೂಳಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ಸದರಿಯವರಿಗೆ ನಿಮ್ಮ ಹೆಸರಿಗೆ ನಾನು ಬರುವದಿಲ್ಲ ನೀವು ನನಗೆ ವಿನಾಕಾರ ಬೈಯುವದು ಸರಿ ಇರುವದಿಲ್ಲ ಅಂತ ಅಂದಿದ್ದು ಆಗ ಅಬ್ದುಲ ರಸೂಲ ಇತನು ರಂಡಿ ಮಗನೆ ನಮಗೆ ಎದರು ಮಾತನಾಡುತ್ತಿ ಅಂತ ಅನ್ನುತ್ತಾ ಅವನು ಕುಡಿಯುತ್ತಿದ್ದ ಚಾಹಾವನ್ನು ನನ್ನ ಮುಖದ ಮೇಲೆ ಹಾಕಿದ್ದು ಚಹಾ ನನ್ನ ಮುಖದ ಮೇಲೆ ಮತ್ತು ಬಟ್ಟೆಯ ಮೇಲೆ ಬಿದಿದ್ದು ಆಗ ನಾನು ಸದರಿಯವನಿಗೆ ಹೀಗೆಕೆ ಮಾಡುತ್ತಿದ್ದಿ ಅಂತ ಕೇಳುತ್ತಿದ್ದಾಗ ಅಬ್ದುಲ ರಸೂಲ ಮತ್ತು ಅಬ್ದುಲ ರುಸ್ತಮ ಇಬ್ಬರು ಕೂಡಿಕೊಂಡು ನನಗೆ ಹಿಡಿದುಕೊಂಡು ತಮ್ಮ ಕೈಗಳಿಂದ ನನ್ನ ಬೆನ್ನಿನ ಮೇಲೆ ಮತ್ತು ದೇಹದ ಇತರ ಭಾಗದಲ್ಲಿ ಹೊಡೆದು ಗುಪ್ತಗಾಯ ಪಡಿಸಿದ್ದು ಆಗ ನನ್ನ ಗೆಳೆಯ ಮಿರಜಾ ಮೊಸಿನ್ ಬೇಗ ಇತನು ನನಗೆ ಬಿಡಿಸಿಕೊಳ್ಳಲು ಬರುವಷ್ಠರಲ್ಲಿ ಅಬ್ದುಲ ರುಸ್ತಮ ಇತನು ತನ್ನ ಹತ್ತಿರ ಇದ್ದ ತಲವಾರ ತೆಗೆದುಕೊಂಡು ಅದರ ತುಂಬಿನಿಂದ ನನ್ನ ತಲೆಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

23 October 2017

KALABURAGI DISTRICT REPORTED CRIMES

ಕೊಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 21-10-2017  ರಂದು ನನ್ನ ಕೆಲಸ ಮುಗಿಸಿಕೊಂಡು ರಾತ್ರಿ ರಾಘವೆಂದ್ರ ಸ್ವಾಮಿ ಗುಡಿಯ ಪಕ್ಕದಲ್ಲಿ ನನ್ನ ಗೆಳೆಯ ಲಕ್ಷ್ಮಿಕಾಂತ ಪೂಜಾರಿ ಇತನು ಕುಳಿತ್ತಿದ್ದು ನಾನು ಅವನ ಹತ್ತಿರ ಹೋಗಿ ಮಾತನಾಡುತ್ತಾ ಕುಳಿತ್ತಿದ್ದು ರಾತ್ರಿ 9-30 ಗಂಟೆಯ ಸುಮಾರಿಗೆ ದಿನೇಶ ದೇಸಾಯಿ ಬಂದಿದ್ದು ಆಗ ಲಕ್ಷ್ಮಿಕಾಂತ ಇತನು ಸದರಿಯವರಿಗೆ ಮಹಾರಾಜರೆ ಅಂತ ಕರೆದಿದ್ದು ಆಗ ದಿನೇಶ ಇವರು ಲಕ್ಷ್ಮಿಕಾಂತನಿಗೆ ನೀನು ನನ್ನ ಸಂಗಡ ಮಾಜಾಕ (ಹುಡುಗಾಟ) ಮಾಡುತ್ತಿ ಅಂತ ಕೇಳಿದ್ದು ಅದೆ ವಿಷಯಕ್ಕೆ ಇಬ್ಬರ ಮಧ್ಯ ಬಾಯಿ ಮಾತಿನ ಜಗಳ ಆಗುತ್ತಿದ್ದು ಆಗ ನಾನು ಸದರಿ ದಿನೇಶ ಇವರಿಗೆ ಸಣ್ಣ ವಿಷಯಕ್ಕೆ ಜಗಳ ಎಕೆ ಮಾಡಿಕೊಳ್ಳುತ್ತಿರಿ ಅಂತ ಹೇಳಿದ್ದು ದಿನೇಶ ಇವರು ನನ್ನ ಅಂಗಿ ಕಾಲರ ಹಿಡಿದು ರಂಡಿ ಮಗನೆ ನೀನು ಯಾರು ನನಗೆ ಹೇಳುವವನು ಅಂತ ಬೈಯುತ್ತಾ ಕೈಯಿಂದ ನನ್ನ ಕಪಾಳ ಮೇಲೆ ಹೊಡೆದಿದ್ದು ದಿನಾಂಕ 22-10-2017 ರಂದು ಬೆಳ್ಳಿಗ್ಗೆ ಸದರಿ ದಿನೇಶ ದೇಸಾಯಿ ಮತ್ತು ಅವರ ಮಗ ಓಂ ದೇಸಾಯಿ ಕೂಡಿಕೊಂಡು ರಾಘವೆಂದ್ರ ಗುಡಿಯ ಹತ್ತಿರ ಬಂದಿದ್ದು ಆಗ ನಮ್ಮ ಅಣ್ಣ ಸಂಗಮೇಶ ಇತನು ಸದರಿ ದಿನೇಶ ದೇಸಾಯಿ ಇತನಿಗೆ ನಿನ್ನೆ ನೀವು ಯಾಕೆ ನಮ್ಮ ತಮ್ಮ ವಿಜಯಕುಮಾರ ನೊಂದಿಗೆ ಜಗಳ ತೆಗೆದು ಹೊಡೆದಿದ್ದಿರಿ ಅಂತ ಕೇಳಿದ್ದು ಆಗ ದಿನೇಶ ದೇಸಾಯಿ ಇತನು ನಿಮ್ಮ ತಮ್ಮನೆ ನನ್ನ ಸಂಗಡ ಜಗಳ ಮಾಡಿದ್ದಾನೆ ಈಗ ನೀನು ಕೆಳಲು ಬಂದಿದ್ದಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ನನ್ನ ಗೆಳೆಯ ಲಕ್ಷ್ಮಿಕಾಂತ ಸದರಿ ದಿನೇಶ ಇವರಿಗೆ ನೀವೆ ನಮ್ಮ ಸಂಗಡ ಜಗಳ ಮಾಡಿ ಈಗ ಇಲ್ಲ ಅಂತ ಹೇಳುತ್ತಿರಿ ಅಂತ ಅನ್ನುತ್ತಿದ್ದಾಗ ಸದರಿ ದಿನೇಶ ಇವರ ಮಗ ಓಂ ಇತನು ತನ್ನ ಹತ್ತಿರ ಯಾವುದೊ ಸ್ಪ್ರೇ ತೆಗೆದುಕೊಂಡು ನಮ್ಮ ಅಣ್ಣ ಸಂಗಮೇಶನ ಮುಖದ ಮೇಲೆ ಸಿಂಪಡಿಸಿ ತನ್ನ ಹತ್ತಿರ ಇದ್ದ  ಚಾಕು ತೆಗೆದುಕೊಂಡು ನಮ್ಮ ಅಣ್ಣನ ಎಡಗಾಲ ತೊಡೆಗೆ ಗುದದ್ವಾರ ಹತ್ತಿರ ಜೋರಾಗಿ ಹೊಡೆದಿದ್ದು. ಚಾಕು ನಮ್ಮ ಅಣ್ಣ ಎಡಗಾಲ ತೊಡೆಯ ಟೊಂಕದ ಹತ್ತಿರ ಛಪ್ಪೆಯ ಭಾಗದಲ್ಲಿ ಹೊರಗೆ ಬಂದು ಭಾರಿ ಗಾಯವಾಗಿದ್ದು, ಆಗ ನಾನು ಮತ್ತು ಲಕ್ಷ್ಮಿಕಾಂತ ಇಬ್ಬರು ಕೂಡಿಕೊಂಡು ನಮ್ಮ ಅಣ್ಣನಿಗೆ ಬಿಡಿಸಿಕೊಳ್ಳಲು ಹೊಗುತ್ತಿದ್ದಾಗ ಓಂ ಇತನು ಚಾಕವನ್ನು ನಮ್ಮ ಕಡೆಗೆ ತಿರುಗಾಡಿಸಿದ್ದು ಆಗ ನಾವು ಅಂಜಿ ಹಿಂದಕ್ಕೆ ಸರೆದಿದ್ದು ನಂತರ ಓಂ ಇತನು ಅದೆ ಚಾಕು ತೆಗೆದುಕೊಂಡು ನಮ್ಮ ಅಣ್ಣ ಸಂಗಮೇಶನ ಬಲಗಾಲ ತೊಡೆಗೆ ಚುಚ್ಚಿ ಹರಿದ ಭಾರಿಗಾಯವಾಗಿದ್ದು. ಸದರಿ ಓಂ ಇತನು ನಮ್ಮ ಅಣ್ಣನಿಗೆ ಚಾಕು ಚುಚ್ಚಿದ್ದರಿಂದ ನಮ್ಮ ಅಣ್ಣ ಕುಸಿದು ಕೆಳಗೆ ಬಿದ್ದಿದ್ದು ನಮ್ಮ ಅಣ್ಣ ಕೆಳಗೆ ಬಿದ್ದಿರುವದನ್ನು ನೋಡಿ ಓಂ ಮತ್ತು ಅವರ ತಂದೆ ದಿನೇಶ ದೇಸಾಯಿ ಇವರು ನಮ್ಮ ಅಣ್ಣನಿಗೆ ಅಲ್ಲೆ ಬಿಟ್ಟು ಹೋಗಿದ್ದು ನಂತರ ನಾನು ನಮ್ಮ ಅಣ್ಣನ ಹತ್ತಿರ ಹೋಗಿ ನೋಡಲು ಅವನ ಕಾಲುಗಳಿಂದ ಅತಿಯಾಗಿ ರಕ್ತಸ್ರಾವ ವಾಗುತ್ತಿದ್ದು ಆಗ ನಮ್ಮ ಗೆಳೆಯ ಲಕ್ಷ್ಮಿಕಾಂತ ಇತನು ಅಟೊ ತೆಗೆದುಕೊಂಡು ಬರಲು ಹೋಗಿ ಸ್ವಲ್ಪ ಸಮಯದಲ್ಲಿ ಲಕ್ಷ್ಮಿಕಾಂತ ಇತನ ಅಟೊ ತೆಗೆದುಕೊಂಡು ಬಂದಿದ್ದು ಆಗ ನಾನು ನಮ್ಮ ಗೆಳೆಯ ಲಕ್ಷ್ಮಿಕಾಂತ ಕೂಡಿಕೊಂಡು ನಮ್ಮ ಅಣ್ಣನಿಗೆ ಅಟೊದಲ್ಲಿ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೇಗೆ ತೆಗೆದುಕೊಂಡು ಹೋಗಿದ್ದು ವ್ಯಧ್ಯರು ನಮ್ಮ ಅಣ್ಣನಿಗೆ ಪರಿಕ್ಷೇ ಮಾಡಿ ಮೃತ ಪಟ್ಟಿದ್ದಾನೆ ಅಂತ ತಿಳಿಸಿದ್ದು  ನಂತರ ನಾವು ನಮ್ಮ ಅಣ್ಣನ ಶವವನ್ನು ಜಿಲ್ಲಾ ಸರಕಾರಿ ಆಸ್ಪತ್ರೇಗೆ ತೆಗೆದುಕೊಂಡು ಬಂದಿದ್ದು ಇರುತ್ತದೆ. ನಮ್ಮ ಅಣ್ಣ ಸಂಗಮೇಶನೊಂದಿಗೆ ಜಗಳ ಮಾಡಿ ಅವನ ಮುಖಕ್ಕೆ ಸ್ಪೇಯರ್ ಸಿಂಪಡಿಸಿ ಚಾಕುದಿಂದ ಎರಡು ಕಾಲಗಳಿಗೆ ಹೊಡೆದು ಕೊಲೆ ಮಾಡಿದ ದಿನೇಶ ದೇಸಾಯಿ, ಮತ್ತು ಓಂ ತಂದೆ ದಿನೇಶ ದೇಸಾಯಿ ಇವರ ವಿರುಧ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಶ್ರೀ ವಿಜಯಕುಮಾರ ನಂದರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ಸಾವು ಪ್ರಕರಣ :
ನರೋಣಾ ಠಾಣೆ : ದಿನಾಂಕ:22-10-2017 ರಂದು ಮಧ್ಯಾಹ್ನ ನಾನು ಮತ್ತು ನನ್ನ ಅತ್ತೆ ಶಾರದಾಬಾಯಿ ಮನೆಯಲ್ಲಿದ್ದಾಗ ನನ್ನ ಗಂಡನಾದ ರಾಜೇಂದ್ರ ಇವರು ನಮ್ಮ ಕೊಳ್ಳದ ಹೊಲಕ್ಕೆ ಹೋಗಿ ಎತ್ತುಗಳು ಮೇಯಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದರು ಸಾಯಂಕಾಲ 4-30  ಗಂಟೆ ಸುಮಾರಿಗೆ ನಮ್ಮ ಮೈಧುನನಾದ ಮಲ್ಲಿಕಾರ್ಜುನ ಬಿರಾದಾರ ಇವರು ಮನೆಗೆ ಬಂದು ನನಗೆ ಹಾಗೂ ನನ್ನ ಅತ್ತಿಗೆ ನನ್ನ ಗಂಡನಾದ ರಾಜೇಂದ್ರ ಇವರು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಮಳೆ ಹಾಗೂ ಗುಡುಗು ಮತ್ತು ಸಿಡಿಲು ಆಗುವ ಕಾಲಕ್ಕೆ ಕೋಳದ ಹೊಲದಲ್ಲಿದ್ದಾಗ ಮೈಮೇಲೆ ಸಿಡಲು ಬಡಿದ್ದರಿಂದ ಸುಟ್ಟಂತ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ನಾನು ಹೋಗಿ ನೋಡಿಕೊಂಡು ಅವರ ಶವ ಮನೆಗೆ ತಗೆದುಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋಗಿ ಒಂದೆರಡು ತಾಸುಗಳ ನಂತರ ನನ್ನ ಮೈಧುನ ಹಾಗೂ ಇತರರು ಕೂಡಿ ನನ್ನ ಗಂಡನ ಶವ ಮನೆಗೆ ತಗೆದುಕೊಂಡು ಬಂದಿರುತ್ತಾರೆ. ನಾನು ನೋಡಲಾಗಿ ನನ್ನ ಗಂಡನ ಎಡಗಡೆ ಭುಜದಿಂದ ಎಡಗಾಲಿನ ಪಾದದ ವರೆಗೆ ಸುಟ್ಟಂತ ಕಪ್ಪಾದ ಗಾಯವಾಗಿ ಚರ್ಮ ಸುಲಿದಂತಾಗಿ ಒಳಗಿನ ಮೌಂಸ ಕಂಡು ಬರುತ್ತಿತ್ತು ದಿನಾಂಕ:22-10-2017 ರಂದು 3-30 ಪಿ.ಎಂ ದಿಂದ 4-00 ಪಿ.ಎಂ ಮಧ್ಯದ ಅವಧಿಯಲ್ಲಿ ನನ್ನ ಗಂಡನಾದ ರಾಜೇಂದ್ರ ಇವರು ನಮ್ಮ ಕೋಳದ ಹೊಲ ಸರ್ವೆ ನಂ-126 ರರಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಆಕಸ್ಮಿಕವಾಗಿ ಅವರಿಗೆ ಸಿಡಿಲು ಬಡಿದಿದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಅಂತಾ ಶ್ರೀಮತಿ ಮಹಾದೇವಿ ಗಂಡ ರಾಜೇಂದ್ರ ಬಿರಾದಾರ ಸಾ||ಬೋಧನ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.